ಕಲಬುರ್ಗಿ ಪೊಲೀಸರ ಭರ್ಜರಿ ಕಾರ್ಯಾಚರಣೆ - 3.15 ಕೋಟಿ ರೂ. ಮೌಲ್ಯದ ವಸ್ತುಗಳ ಜಫ್ತಿ

ಸ್ವತ್ತಿನ ಪ್ರಕರಣ ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಪೊಲೀಸ್ ಸಿಬ್ಬಂದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಜಫ್ತಿಯಾದ ವಸ್ತುಗಳನ್ನು ಸಂಬಂಧಿಸಿದವರಿಗೆ ಪೊಲೀಸ್ ಕಮೀಷನರ್ ಹಸ್ತಾಂತರ ಮಾಡಿದರು. ಕಲಬುರ್ಗಿಯ ಎ.ಬಿ ಹಾಗೂ ಸಿ ಡಿವಿಜನ್​​ಗಳ ಜಫ್ತಿ ಮಾಡಿದ ವಸ್ತುಗಳ ಹಸ್ತಾಂತರ ಮಾಡಲಾಯಿತು.

ಕಲಬುರ್ಗಿ ಪೊಲೀಸ್​ ಅಧಿಕಾರಿ

ಕಲಬುರ್ಗಿ ಪೊಲೀಸ್​ ಅಧಿಕಾರಿ

  • Share this:
ಕಲಬುರ್ಗಿ(ಸೆ.14): ಕಲಬುರ್ಗಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಒಂಬತ್ತು ಆರೋಪಿಗಳನ್ನು ಬಂಧಿಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ನಗದು, ಚಿನ್ನದ ನಾಣ್ಯ, ವಸ್ತುಗಳನ್ನು ಜಫ್ತಿ ಮಾಡಿದ್ದಾರೆ. ಕಲಬುರ್ಗಿ ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನಗಳನ್ನು ಪೊಲೀಸರು ಭೇದಿಸಿದ್ದಾರೆ. 2018, 2019 ಹಾಗೂ 2020ನೇ ಸಾಲಿಗೆ ಸಂಬಂಧಿಸಿ ಒಟ್ಟು 3,15,78,156 ರೂಪಾಯಿ ಮೌಲ್ಯದ ವಸ್ತುಗಳನ್ನು ಜಫ್ತಿ ಮಾಡಿದ್ದಾರೆ. 2018ನೇ ಸಾಲಿನಲ್ಲಿ 3.58 ಕೋಟಿ ರೂಪಾಯಿ ಸ್ವತ್ತು ಕಳ್ಳತನವಾಗಿತ್ತು. ಈ ಪೈಕಿ 1.35 ಕೋಟಿ ರೂಪಾಯಿ ಮೌಲ್ಯದ ಸ್ವತ್ತು ಜಫ್ತಿ ಮಾಡಿಕೊಳ್ಳಲಾಗಿದೆ. 2018ರಲ್ಲಿ ಕಲಬುರ್ಗಿ ನಗರದಲ್ಲಿ 339 ಸ್ವತ್ತಿನ ಕಳ್ಳತನ ಪ್ರಕರಣಗಳ ದಾಖಲಾಗಿದ್ದವು. ಈ ಪೈಕಿ 130 ಸ್ವತ್ತಿನ ಕಳ್ಳತನ ಪ್ರಕರಣ ಪತ್ತೆಯಾಗಿದ್ದು, 1,35,85,913 ರೂಪಾಯಿ ಮೌಲ್ಯದ ಸ್ವತ್ತು ಫಿರ್ಯಾದುದಾರಗಿಗೆ ಹಸ್ತಾಂತರ ಮಾಡಲಾಗಿದೆ. 

2019ನೇ ಸಾಲಿನಲ್ಲಿ 405 ಪ್ರಕರಣಗಳ ಪೈಕಿ 135 ಪ್ರಕರಣ ಪತ್ತೆಯಾಗಿವೆ. 4,06,35,038 ರೂಪಾಯಿ ಮೌಲ್ಯದ ವಸ್ತು ಕಳುವಾಗಿದ್ದವು. ಈ ಪೈಕಿ 91,08,523 ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಫಿರ್ಯಾದಿದಾರರಿಗೆ ಹಸ್ತಾಂತರ ಮಾಡಲಾಗಿದೆ. 2020ನೇ ಸಾಲಿನಲ್ಲಿ 179 ಪ್ರಕರಣಗಳ ಪೈಕಿ 59 ಪ್ರಕರಣ ಪತ್ತೆಯಾಗಿದೆ. 2020ನೇ ಸಾಲಿನಲ್ಲಿ ಇದುವರೆಗೆ 3,09,70,344 ರೂಪಾಯಿ ಮೌಲ್ಯದ ವಸ್ತುಗಳ ಕಳುವಾಗಿತ್ತು. ಈ ಪೈಕಿ 88,83,720 ರೂಪಾಯಿ ಮೌಲ್ಯದ ವಸ್ತುಗಳ ಜಫ್ತಿಯಾಗಿದೆ.

ಜಫ್ತಿಯಾದ ವಸ್ತುಗಳ ಪೈಕಿ 41,81,560 ರೂಪಾಯಿ ಮೌಲ್ಯದ ವಸ್ತುಗಳು ಫಿರ್ಯಾದುದಾರರಿಗೆ ಹಸ್ತಾಂತರ ಮಾಡಲಾಗಿದೆ. 47.02 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ಹಿಂದುರಿಗಿಸಬೇಕಾಗಿದೆ ಎಂದು ಕಲಬುರ್ಗಿ ಪೊಲೀಸ್ ಕಮೀಷನರ್ ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಡಿಎಆರ್ ಮೈದಾನದಲ್ಲಿ ಪೊಲೀಸರಿಂದ ಪ್ರಾಪರ್ಟಿ ಪರೇಡ್ ನಡೆಸಿದ ವೇಳೆ ಮಾತನಾಡಿದ ಅವರು, ಮನೆಗಳ್ಳತನ ಮಾಡುತ್ತಿದ್ದ ಒಂಬತ್ತು ಜನ ಆರೋಪಿಗಳನ್ನು ಬಂಧಿಸಿರೋದಾಗಿ ತಿಳಿಸಿದ್ದಾರೆ. ಬಂಧಿತರನ್ನು ಅಷ್ಪಾಕ್, ಆಕಾಶ್, ಶ್ರೀನಿವಾಸ್, ಚರಣ, ಗುಲಾಬ್, ಮಧು, ಶರಣಗೌಡ, ರಾಹುಲ್, ಮಹ್ಮದ್ ಅಲಿಖಾನ್ ಎಂದು ಗುರುತಿಸಲಾಗಿದೆ.

ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಸರಗಳ್ಳತನ ಪ್ರಕರಣದ ಪ್ರಮುಖ ಆರೋಪಿ ಖೇಳಗಿ ತಾಂಡಾದ ರೂಪೇಶ್ ಮತ್ತು ಆತನ ಸಹಚರರ ವಿರುದ್ಧ ಕೋಕಾ ಕಾಯ್ದೆ ಅಡಿ ಕ್ರಮ ಜರುಗಿಸಲಾಗುವುದು ಎಂದು ಸತೀಶಕುಮಾರ್ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ‘ಕೊಲಂಬೋಗೆ ಹೋದರೆ ಹೇಗೆ ಶಾಂತಿ ಸಿಗಲಿದೆ ಎನ್ನುವುದು ಮಾತ್ರ ಜಮೀರ್​ ಹೇಳಬೇಕು‘ - ಸಚಿವ ಸಿಟಿ ರವಿ ವ್ಯಂಗ್ಯ

ಸ್ವತ್ತಿನ ಪ್ರಕರಣ ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಪೊಲೀಸ್ ಸಿಬ್ಬಂದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಜಫ್ತಿಯಾದ ವಸ್ತುಗಳನ್ನು ಸಂಬಂಧಿಸಿದವರಿಗೆ ಪೊಲೀಸ್ ಕಮೀಷನರ್ ಹಸ್ತಾಂತರ ಮಾಡಿದರು. ಕಲಬುರ್ಗಿಯ ಎ.ಬಿ ಹಾಗೂ ಸಿ ಡಿವಿಜನ್​​ಗಳ ಜಫ್ತಿ ಮಾಡಿದ ವಸ್ತುಗಳ ಹಸ್ತಾಂತರ ಮಾಡಲಾಯಿತು.
Published by:Ganesh Nachikethu
First published: