ಕಲಬುರಗಿಯಲ್ಲಿ ರೌಡಿಶೀಟರ್​ ಮೇಲೆ ಗುಂಡಿನ ದಾಳಿ

ಸ್ಥಳಕ್ಕೆ ಮಹಜರು ಮಾಡಲು ಕರೆದೊಯ್ದಿದ್ದಾಗ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೇ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಲಬುರಗಿ (ಅ.7): ನಗರದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು ಕೇಳಿಸಿದೆ. ಕುಖ್ಯಾತ ದರೋಡೆಕೋರ ಮುಬೀನ್​  ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿದ ಘಟನೆ ನಗರದ ಹೊರವಲಯದ ತಾಜ್ ಸುಲ್ತಾನಪುರ ಬಳಿ ನಡೆದಿದೆ. ಮೆಹಬೂಬ್ ನಗರದ ನಿವಾಸಿ ಮುಬೀನ್ ರೆಹಮಾನ್(25) ವ್ಯಕ್ತಿಯೊರ್ವನನ್ನು  ದರೋಡೆ ಮಾಡಿ, ಆತನನ್ನು ಕೊಂದು ಪರಾರಿಯಾಗಿದ್ದ. ಆತನನ್ನು ಬಂಧಿಸಿದ್ದ ಪೊಲೀಸರು ಇಂದು ಸ್ಥಳಕ್ಕೆ ಮಹಜರು ಮಾಡಲು ಕರೆದೊಯ್ದಿದ್ದರು. ಈ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೇ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ವೇಳೆ ಆರೋಪಿ ಮುಬೀನ್​ ಬಲಗಾಲಿಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 

ವ್ಯಕ್ತಿಯೋರ್ವನ ದರೋಡೆಗೆ ಯತ್ನಿಸಿದ್ದ ಮುಬೀನ್, ಆತನ ಬಳಿ ಮೊಬೈಲ್ ಮಾತ್ರ ಸಿಕ್ಕಾಗ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಚಾಕು ಇರಿತಕ್ಕೊಳಗಾಗಿದ್ದ ವ್ಯಕ್ತಿ 15 ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಈ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಮುಬೀನ್ ಶಾಮೀಲಾಗಿದ್ದ. ಆತನನ್ನು ಬಂಧಿಸಿದ್ದ ಪೊಲೀಸರು ಮಾರಕಾಸ್ತ್ರಗಳ ಪರಿಶೀಲನೆ ಕರೆದುಕೊಂಡು ಹೋಗಿದ್ದಾಗ ಈ ಫೈರಿಂಗ್​ ನಡೆದಿದೆ ಎಂದು ಡಿಸಿಪಿ ಕಿಶೋರ್ ಬಾಬು ತಿಳಿಸಿದ್ದಾರೆ.

ಇದನ್ನು ಓದಿ: ಮಾಸ್ಕ್ ಧರಿಸದವರಿಗೆ ಹಾಸನ ನಗರಸಭೆ ಸಿಬ್ಬಂದಿಯಿಂದ ದಂಡದ ಬಿಸಿ

ದರೋಡೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮುಬೀನ್ ರೆಹಮಾನ್ ಜೊತೆ ಮಹ್ಮದ್ ಜಾಕ್ರಿಯಾ ಹಾಗೂ ಮಹ್ಮದ್ ಸಾಧಿಕ್ ಖಾಲನ್ ಆಲಿಯಾಸ್​​ ಸಾಧಿಕ್ ಎಂಬ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ.

ಮುಬೀನ್ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆ ಸೇರಿ ನಗರದ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಫೈರಿಂಗ್ ಪ್ರಕರಣದಲ್ಲಿ ಗ್ರಾಮೀಣ ಠಾಣೆಯ ಇಬ್ಬರು ಪೇದೆಗಳಿಗೆ ಗಾಯಗಳಾಗಿದ್ದು, ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳು ಮುಬೀನ್ ನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Published by:Seema R
First published: