ಪೌರತ್ವ ಮಸೂದೆ ವಿರೋಧಿಸಿ ಶಾಸಕಿ ನೇತೃತ್ವದಲ್ಲಿ ಅಹೋರಾತ್ರಿ ಹೋರಾಟ - ವಿವಿಧ ಸಂಘಟನೆಗಳ ಬೆಂಬಲ

ಕಲಬುರ್ಗಿಯಲ್ಲಿ ಶಾಸಕಿ ಖನೀಸ್ ಫಾತಿಮಾ ಬೇಗಂ ನೇತೃತ್ವದಲ್ಲಿ ಕಲಬುರ್ಗಿಯಲ್ಲಿ ಅಹೋರಾತ್ರಿ ಹೋರಾಟ ನಡೆಸಲಾಗುತ್ತಿದೆ. ನಗರದ ಜಗತ್ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ 24 ತಾಸುಗಳ ಹೋರಾಟ ನಡೆಸಲಾಗುತ್ತಿದೆ.

ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಶಾಸಕಿ ಖಾನೀಸ್ ಫಾತಿಮಾ ಬೇಗಂ

ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಶಾಸಕಿ ಖಾನೀಸ್ ಫಾತಿಮಾ ಬೇಗಂ

  • Share this:
ಕಲಬುರ್ಗಿ (ಜ.18) : ಎನ್​​ಆರ್​​ಸಿ ಹಾಗೂ ಸಿಎಎ ಗಳ ವಿರುದ್ಧ ಕಲಬುರ್ಗಿಯಲ್ಲಿ ಹೋರಾಟಗಳು ಮುಂದುವರೆದಿವೆ. ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕಿ ಖಾನೀಸ್ ಫಾತಿಮಾ ಬೇಗಂ ನೇತೃತ್ವದಲ್ಲಿ ಮಹಿಳೆಯರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಶಾಸಕರ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಭಾರತ ಪೌರತ್ವದ ಪರ ಒಂದು ಕಡೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿಯಲ್ಲಿ ಜಾಗೃತಿ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಅದೇ ವೇಳೆಯಲ್ಲಿ ಕಲಬುರ್ಗಿಯಲ್ಲಿ ಶಾಸಕಿ ಖನೀಸ್ ಫಾತಿಮಾ ಬೇಗಂ ನೇತೃತ್ವದಲ್ಲಿ ಕಲಬುರ್ಗಿಯಲ್ಲಿ ಅಹೋರಾತ್ರಿ ಹೋರಾಟ ನಡೆಸಲಾಗುತ್ತಿದೆ. ನಗರದ ಜಗತ್ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ 24 ತಾಸುಗಳ ಹೋರಾಟ ನಡೆಸಲಾಗುತ್ತಿದೆ.

ಅಂಬೇಡ್ಕರ್, ಬಸವೇಶ್ವರರ ಪುತ್ಥಳಿಗೆ ಮಾರಾರ್ಪಣೆ ಮಾಡಿದ ನಂತರ ಹೋರಾಟ ಆರಂಭಿಸಿರುವ ಶಾಸಕಿ ಖನೀಸ್ ಫಾತಿಮಾಗೆ ನೂರಾರು ಮಹಿಳೆಯರು ಬೆಂಬಲ ವ್ಯಕ್ತಪಿಸಿದ್ದಾರೆ.  ಕೇಂದ್ರ ಸರ್ಕಾರ ದುರುದ್ದೇಶವಿಟ್ಟುಕೊಂಡು ಪೌರತ್ವ ಮಸೂದೆ ಜಾರಿಗೆ ತರುತ್ತಿದೆ. ಇದರಿಂದಾಗಿ ಮುಸ್ಲಿಂ ಸೇರಿದಂತೆ ಇತರೆ ಸಮುದಾಯಗಳಿಗೂ ತೊಂದರೆಯಾಗಲಿದೆ. ಪೌರತ್ವದ ಹೆಸರಲ್ಲಿ ಕೇಂದ್ರ ಸರ್ಕಾರ ಧರ್ಮ ಧರ್ಮಗಳ ನಡುವೆ ಜಗಳ ಹಚ್ಚಲು ಯತ್ನಿಸುತ್ತಿದೆ. ಜೆ.ಎನ್.ಯು. ನಂತಹ ಶಿಕ್ಷಣ ಕೇಂದ್ರಗಳಲ್ಲಿಯೂ ರಾಜಕೀಯ ದ್ವೇಷ ಸಾಧಿಸುತ್ತಿರೋದೆ ಇದಕ್ಕೆ ಸಾಕ್ಷಿ ಎಂದು ಕಿಡಿಕಾರಿದರು. ಕೇಂದ್ರ ಸರ್ಕಾರ ಒಡೆದಾಳುವ ನೀತಿ ಅನುಸರಿಸುತ್ತಿದೆ. ಪೌರತ್ವ ಮಸೂದೆ ಜಾರಿಯಿಂದ ಹಿಂದೆ ಸರಿಯೋವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಶಾಸಕಿ ಖನೀಸ್ ಫಾತಿಮಾ ಬೇಗಂ ಎಚ್ಚರಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಶರಣಪ್ರಕಾಶ ಪಾಟೀಲ, ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದರು. ಪೌರತ್ವ ಮಸೂದೆ ಜನವಿರೋಧಿಯಾಗಿದೆ. ತನ್ನ ಬೇಳೆ ಬೆಯಿಸಿಕೊಳ್ಳಲು ಪೌರತ್ವ ಮಸೂದೆ ಕುತಂತ್ರ ರೂಪಿಸಿದೆ ಎಂದು ಆರೋಪಿಸಿದರು.

ಇದನ್ನೂ ಓದಿ : ನೋಟು ಯಂತ್ರ ಇಟ್ಕೊಂಡೋನು, ಪತ್ರಕರ್ತೆಗೆ ಪೆಕರನಂತೆ ಪ್ರಶ್ನಿಸಿದವನು ನಾನಲ್ಲ; ಈಶ್ವರಪ್ಪನಿಗೆ ಎಚ್​ಡಿಕೆ ತಿರುಗೇಟು

ಪೌರತ್ವ ಮಸೂದೆ ಜಾರಿಯಿಂದ ಕೇವಲ ಅಸ್ಪಸಂಖ್ಯಾತರಿಗೊಂದೇ ಅಲ್ಲದೆ, ಎಲ್ಲರಿಗೂ ತೊಂದರೆಯಾಗಲಿದೆ. ಇದರ ವಿರುದ್ಧ ಸಂಘಟಿತ ಹೋರಾಟ ಅಗತ್ಯ ಎಂದು ಕರೆ ನೀಡಿದರು.ಖನೀಸ್ ಫಾತಿಮಾ ಬೇಗಂ ಹೋರಾಟಕ್ಕೆ ವಿವಿಧ ದಲಿತ  ಸಂಘಟನೆಗಳು, ಜನವಾದಿ ಮಹಿಳಾ ಸಂಘಟನೆ ಮತ್ತಿತರ ಪ್ರಗತಿಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಪೌರತ್ವ ಮಸೂದೆ ಹಿಂಪಡೆಯುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಹಗಲು ರಾತ್ರಿ ನಡೆಸುತ್ತಿರುವ ಧರಣಿಯಲ್ಲಿ ನೂರಾರು ಮಹಿಳೆಯರು ಭಾಗಿಯಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ಸ್ ಕೈಗೊಳ್ಳಲಾಗಿದೆ.
First published: