ಕೊರೊನಾ ಭೀತಿ - ಚೀನಾದಿಂದ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ ಕನ್ನಡಿಗ

ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಮದಗುಣಕಿ ಗ್ರಾಮದ ರಾಜಕುಮಾರ ಚಿನಾದ ಶಾಡಗಾಂವ್ ಪ್ರಾಂತದಲ್ಲಿದ್ದ ಖಾಸಗಿ ಕಂಪನಿಯಲ್ಲಿ ರೀಸರ್ಚ್ ಡೆವೆಲಪ್​​​​​ಮೆಂಟ್ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದರು

news18-kannada
Updated:February 15, 2020, 2:37 PM IST
ಕೊರೊನಾ ಭೀತಿ - ಚೀನಾದಿಂದ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ ಕನ್ನಡಿಗ
ರಾಜಕುಮಾರ್
  • Share this:
ಕಲಬುರ್ಗಿ (ಫೆ.15) : ಕೊರೊನಾ ಭೀತಿಯ ಕಾರಣದಿಂದಾಗಿ ಜಗತ್ತೇ ಚೀನಾದ ಕಡೆ ನೋಡುತ್ತಿದೆ. ಇದೇ ಸಂದರ್ಭದಲ್ಲಿ ಕನ್ನಡಿಗನೋರ್ವ ಕೊರೋನಾ ಭೀತಿಯಿಂದ ಪಾರಾಗಿ ತಾಯ್ನಾಡಿಗೆ ಮರಳಿದ್ದಾನೆ. ರಾಜಕುಮಾರ್ ಚೀನಾದಿಂದ ಸುರಕ್ಷಿತವಾಗಿ ಬಂದ ಕನ್ನಡಿಗ.

ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಮದಗುಣಕಿ ಗ್ರಾಮದ ರಾಜಕುಮಾರ ಚಿನಾದ ಶಾಡಗಾಂವ್ ಪ್ರಾಂತದಲ್ಲಿದ್ದ ಖಾಸಗಿ ಕಂಪನಿಯಲ್ಲಿ ರೀಸರ್ಚ್ ಡೆವೆಲಪ್​​​​​ಮೆಂಟ್ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದರು. ಕೊರೊನಾ ವೈರಸ್ ನಿಂದ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕುಮಾರ ತಾಯ್ನಾಡಿಗೆ ಮರಳಿದ್ದಾನೆ.

ಎಲ್ಲಾ ಪರೀಕ್ಷೆ ನಡೆಸಿ, ಕೊರೊನಾ ಇಲ್ಲಾ ಅಂತ ಖಾತ್ರಿಯಾದ ಮೇಲೆ ಮರಳಿ ತಾಯ್ನಾಡಿಗೆ ಆಗಮಿಸಿದ್ದಾರೆ. ಇದೇ ತಿಂಗಳು ಒಂಬತ್ತರಂದು ಭಾರತಕ್ಕೆ ಆಗಮಿಸಿರೋ ರಾಜಕುಮಾರ, ತನ್ನ ಊರಿಗೂ ಭೇಟಿ ನೀಡಿದ್ದ. ಸದ್ಯ ಕುಟುಂಬದ ಜೊತೆ ಹೈದ್ರಾಬಾದ್ ನಲ್ಲಿ ರಾಜಕುಮಾರ ವಾಸವಾಗಿದ್ದಾನೆ.

ಇದನ್ನೂ ಓದಿ : ರೈತ ಸಂಘಟನೆಗಳ ದುಂಡು ಮೇಜಿನ ಸಭೆ - ತೊಗರಿ ಖರೀದಿ ಮಿತಿ ಹೆಚ್ಚಳಕ್ಕೆ ಆಗ್ರಹ

ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಚೀನಾದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸುವಂತಾಯಿತು. ಹೊರಗೆ ಹೋಗುವುದೂ ಕಷ್ಟವಾಗಿತ್ತು ಎಂದು ರಾಜಕುಮಾರ, ತಮ್ಮ ಅನುಭವ ಹಂಚಿಕೊಂಡಿದ್ದಾರೆ. ರಾಜಕುಮಾರ ವಾಪಸ್ಸಾಗಿರೋದರಿಂದ ಕುಟುಂಬದ ಸದಸ್ಯರು ನಿಟ್ಟುಸಿರು ಬಿಟ್ಟಿದ್ದಾರೆ.

 
First published:February 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ