HOME » NEWS » State » KALBURGI HIGHCOURT CANCELED TULASI MUNIRAJ PETITION WHO FILLED AGAINST MUNIRATNA RH

ಅನರ್ಹ ಶಾಸಕ ಮುನಿರತ್ನಗೆ ನಿರಾಳ; ತುಳಸಿ ಮುನಿರಾಜುಗೌಡ ಅರ್ಜಿ ವಜಾಗೊಳಿಸಿದ ಕಲಬುರ್ಗಿ ಹೈಕೋರ್ಟ್ ಪೀಠ

ತುಳಸಿ ಮುನಿರಾಜುಗೌಡ ಅವರ ಬೇಡಿಕೆ ಇದ್ದಿದ್ದು ತಮ್ಮನ್ನು ಶಾಸಕ ಅಂತ ಘೋಷಣೆ ಮಾಡಬೇಕು ಅಂತ. ಈಗ ಆ ಮನವಿಯನ್ನೇ ಕೋರ್ಟ್ ಒಪ್ಪಿಕೊಂಡಿಲ್ಲ. ಹಾಗಾಗಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಮಾಡುವುದರಲ್ಲಿ ಅಡ್ಡಿ ಇಲ್ಲ. ಇವತ್ತಿನ ಹೈಕೋರ್ಟ್ ತೀರ್ಪಿನ ಪೂರ್ಣ ಪ್ರತಿ ಇನ್ನೂ ನನಗೆ ಸಿಕ್ಕಿಲ್ಲ. ತೀರ್ಪಿನ ಪ್ರತಿ ಬಂದ ಮೇಲೆ ಮುಂದಿನ ಪ್ರಕ್ರಿಯೆ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸುತ್ತೇನೆ. ಸಿಎಂ ಸಲಹೆಯಂತೆ ನಡೆದುಕೊಳ್ಳುತ್ತೇನೆ ಎಂದರು.

news18-kannada
Updated:March 20, 2020, 8:35 PM IST
ಅನರ್ಹ ಶಾಸಕ ಮುನಿರತ್ನಗೆ ನಿರಾಳ; ತುಳಸಿ ಮುನಿರಾಜುಗೌಡ ಅರ್ಜಿ ವಜಾಗೊಳಿಸಿದ ಕಲಬುರ್ಗಿ ಹೈಕೋರ್ಟ್ ಪೀಠ
ಅನರ್ಹ ಶಾಸಕ ಮುನಿರತ್ನ
  • Share this:
ಬೆಂಗಳೂರು: ಅನರ್ಹ ಶಾಸಕ ಮುನಿರತ್ನ ಶಾಸಕತ್ವ ರದ್ದು ಕೋರಿ ತುಳಸಿ ಮುನಿರಾಜುಗೌಡ ಸಲ್ಲಿಸಿದ್ದ ಅರ್ಜಿಯನ್ನು ಕಲಬುರ್ಗಿ ಹೈಕೋರ್ಟ್ ಪೀಠ ವಜಾಗೊಳಿಸಿದೆ. 

ಅರ್ಜಿ ವಜಾ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಮುನಿರತ್ನ, 2018ರಲ್ಲಿ ನನ್ನ ವಿರುದ್ಧ ಸ್ಪರ್ಧಿಸಿದ್ದ ವ್ಯಕ್ತಿ ಹೈಕೋರ್ಟ್​ನಲ್ಲಿ ಅರ್ಜಿ ಹಾಕಿದ್ದರು. ಹಲವು ಅಕ್ರಮಗಳ ಆರೋಪವನ್ನು ನನ್ನ ವಿರುದ್ಧ ಮಾಡಿದ್ದರು. ನನ್ನ ಶಾಸಕ ಸ್ಥಾನ ರದ್ದುಗೊಳಿಸಿ ಅವರನ್ನು ಶಾಸಕರಾಗಿ ಘೋಷಿಸಬೇಕೆಂಬ ಮನವಿ ಮಾಡಿದ್ದರು. ಆದರೆ, ಅವರ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಇವತ್ತು ಹೈಕೋರ್ಟ್ ಆದೇಶ ನಮ್ಮ ಪರ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರಾಜರಾಜೇಶ್ವರಿ ನಗರಕ್ಕೆ ಮುಂದಿನ ದಿನಗಳಲ್ಲಿ ಚುನಾವಣೆ ನಡೆಸಲು ಇನ್ನುಮುಂದೆ ಯಾವುದೇ ತೊಡಕಿಲ್ಲ ಎಂದು ವಕೀಲರು ಹೇಳಿದ್ದಾರೆ. ರಾಜಕೀಯ ದ್ವೇಷಕ್ಕೆ ಒಂದು ವಿಧಾನಸಭೆ ಕ್ಷೇತ್ರವನ್ನು ಬಲಿ ತೆಗೆದುಕೊಳ್ಳಬಾರದು. ರಾಜಕೀಯ, ವೈಯಕ್ತಿಕ ದ್ವೇಷಕ್ಕೆ ಒಂದು ಕ್ಷೇತ್ರದ ಅಭಿವೃದ್ಧಿ ಕುಂಠಿತ ಆಗಬಾರದು. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಹೌದು, ರಾಜೀನಾಮೆ ವಿಚಾರ ಬೇರೆಯದು. ಆದರೆ‌ ವೈಯಕ್ತಿಕ ದ್ವೇಷಕ್ಕೆ ಕೋರ್ಟ್ ಮೆಟ್ಟಿಲೇರೋದು ಸರಿಯಲ್ಲ. ಸೋತವರು ಮತ್ತೊಂದು ಚುನಾವಣೆವರೆಗೂ ಕಾಯೋದು ಸಹಜ. ಆದರೆ ಇಲ್ಲಿ ನನ್ನ ವಿರುದ್ಧ ವೈಯಕ್ತಿಕ ಟೀಕೆ, ತೇಜೋವಧೆ ಮಾಡಿದ್ದು ಸರಿಯಲ್ಲ ಎಂದರು.

ಇದನ್ನು ಓದಿ: ನಾಳೆಯಿಂದ ಪಬ್, ಬಾರ್ ಬಂದ್; ಹೋಟೆಲ್​ಗಳಲ್ಲಿ ನಿರ್ಬಂಧ; ಪಾರ್ಸಲ್​ಗೆ ಮಾತ್ರ ಅವಕಾಶ

ನಾನು 25 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ಇಷ್ಟು ಅಂತರದಲ್ಲಿ ಗೆದ್ದ ಮೇಲೆ ಜನತಾ ತೀರ್ಪು ಏನು ಅಂತ ಅಲ್ಲೇ ಗೊತ್ತಾಗಿದೆ. ಇನ್ಮುಂದೆಯಾದರೂ ಆ ವ್ಯಕ್ತಿ ವೈಯಕ್ತಿಕ ದ್ವೇಷ, ಟೀಕೆ ಮಾಡೋದನ್ನು ನಿಲ್ಲಿಸಲಿ. ನನ್ನ ವಿರುದ್ಧ ಆರೋಪ ಮಾಡಿದ ಆ ವ್ಯಕ್ತಿಗೆ ದೇವರು ಒಳ್ಳೆಯದು ಮಾಡಲಿ. ತುಳಸಿ ಮುನಿರಾಜುಗೌಡ ಅವರ ಬೇಡಿಕೆ ಇದ್ದಿದ್ದು ತಮ್ಮನ್ನು ಶಾಸಕ ಅಂತ ಘೋಷಣೆ ಮಾಡಬೇಕು ಅಂತ. ಈಗ ಆ ಮನವಿಯನ್ನೇ ಕೋರ್ಟ್ ಒಪ್ಪಿಕೊಂಡಿಲ್ಲ. ಹಾಗಾಗಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಮಾಡುವುದರಲ್ಲಿ ಅಡ್ಡಿ ಇಲ್ಲ. ಇವತ್ತಿನ ಹೈಕೋರ್ಟ್ ತೀರ್ಪಿನ ಪೂರ್ಣ ಪ್ರತಿ ಇನ್ನೂ ನನಗೆ ಸಿಕ್ಕಿಲ್ಲ. ತೀರ್ಪಿನ ಪ್ರತಿ ಬಂದ ಮೇಲೆ ಮುಂದಿನ ಪ್ರಕ್ರಿಯೆ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸುತ್ತೇನೆ. ಸಿಎಂ ಸಲಹೆಯಂತೆ ನಡೆದುಕೊಳ್ಳುತ್ತೇನೆ ಎಂದರು.
Youtube Video
First published: March 20, 2020, 8:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories