Hijab ವಿಚಾರಕ್ಕೆ ಬಂದ್ರೆ ಕತ್ತರಿಸುತ್ತೇವೆ ಎಂದಿದ್ದ ಕಾಂಗ್ರೆಸ್​ ಮುಖಂಡ ಕಡೆಗೂ ಪೊಲೀಸರ ವಶಕ್ಕೆ

  ಸೇಡಂ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಹಿಜಾಬ್ ತಂಟೆಗೆ ಬಂದರೆ ತುಕ್ಡೆ ತುಕ್ಡೆ ಮಾಡಿಬಿಡುತ್ತೇವೆ ಎಂದು ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದರು

ಕಾಂಗ್ರೆಸ್​ ಮುಖಂಡ ಮುಕ್ರಂ ಖಾನ್​

ಕಾಂಗ್ರೆಸ್​ ಮುಖಂಡ ಮುಕ್ರಂ ಖಾನ್​

 • Share this:
  ಕಲಬುರಗಿ (ಮಾ. 8):  ರಾಜ್ಯದಲ್ಲಿ ಸದ್ಯ ಹಿಜಾಬ್ (Hijab)​ - ಕೇಸರಿ ಶಾಲು ವಿವಾದ ತಣ್ಣಗಾಗಿದೆ. ಆದರೆ, ಈ ಗಲಾಟೆ ವೇಳೆ ಕಲಬುರಗಿಯಲ್ಲಿ ಹಿಜಾಬ್ ಪರವಾಗಿ ಕಾಂಗ್ರೆಸ್ ಮುಖಂಡ (Congress Leader) ನೀಡಿದ್ದ ಹೇಳಿಕೆಯ ವಿವಾದ್ಮಕ ಕಿಚ್ಚು ಇನ್ನೂ ಆರಿಲ್ಲ. ಹಿಜಾಬ್​ ವಿಚಾರಕ್ಕೆ ಬಂದರೆ ತುಂಡು ತುಂಡಾಗಿ ಕತ್ತರಿಸುತ್ತೇವೆ ಎಂದು ಹೇಳಿಕೆ ನೀಡಿ ವಿವಾದ ಮೂಡಿಸಿದ್ದವರು ಜಿಲ್ಲೆಯ ಕಾಂಗ್ರೆಸ್​ ಮುಖಂಡ ಮುಕ್ರಂ ಖಾನ್ (Mukram Khan)​. ಈ ಹೇಳಿಕ ಬಳಿಕ ಪೊಲೀಸರು ಪ್ರಕರಣ ದಾಖಲಿಸಿದ್ದರೂ. ಈ ಬೆಳವಣಿಗೆ ಬೆನ್ನಲ್ಲೇ ಮುಕ್ರಂ ಖಾನ್​ ತಲೆಮರಿಸಿಕೊಂಡಿದ್ದ. ಸದ್ಯ  ಕೈ ಮುಖಂಡನ ಜಾಮೀನು (Bail Application) ಅರ್ಜಿ ತಿರಸ್ಕಾರಗೊಂಡಿದ್ದು, ಈ ನಡುವೆ ಪೊಲೀಸರು ಮುಕ್ರಂ ಖಾನ್​ನನ್ನು ಹೈದ್ರಾಬಾದ್​ನಲ್ಲಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

  ಪ್ರಕರಣ ದಾಖಲಾಗುತ್ತಿದ್ದಂತೆ ಅಜ್ಞಾತ ಸ್ಥಳಕ್ಕೆ ತೆರಳಿದ ಮುಖಂಡ

  ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಹಾಗೂ ಕಲಬುರಗಿ ಜಿಲ್ಲೆ ಸೇಡಂ ಕಾಂಗ್ರೆಸ್ ಹಿರಿಯ ಮುಖಂಡ  ಮುಕ್ರಂ ಖಾನ್, ಈ ಹಿಂದೆ  ಸೇಡಂ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಹಿಜಾಬ್ ತಂಟೆಗೆ ಬಂದರೆ ತುಕ್ಡೆ ತುಕ್ಡೆ ಮಾಡಿಬಿಡುತ್ತೇವೆ ಎಂದು ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದರು.  ಮುಕ್ರಂಖಾನ್ ವಿರುದ್ಧ ಕಳೆದ ತಿಂಗಳು 16 ರಂದು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ನಂತರ ತಲೆಮರಿಸಿಕೊಂಡಿದ್ದ ಮುಕ್ರಂಖಾನ್, ಅಜ್ಞಾತ ಸ್ಥಳದಿಂದ ಜಾಮೀನುಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಕಲಬುರಗಿ ನಾಲ್ಕನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರು ಮುಕ್ರಂಖಾನ್ ಜಾಮೀನು ಅರ್ಜಿಯನ್ನ ವಜಾಗೊಳಿಸಿದೆ

  ಜಾಮೀನು ಅರ್ಜಿ ವಜಾ ಮಾಡಿದ ನ್ಯಾಯಾಲಯ

  ಇನ್ನೂ ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ, ಅಲರ್ಟ್ ಆದ ಸೇಡಂ ಠಾಣೆ ಪೊಲೀಸರು, ಕಳೆದ ರಾತ್ರಿ ಹೈದ್ರಾಬಾದ್ ನಗರದಲ್ಲಿ ಮುಕ್ರಂಖಾನ್‌ನನ್ನ ಬಂಧಿಸಿದ್ದಾರೆ. ಇನ್ನೂ ಬಂಧನದ ನಂತರ ಮುಕ್ರಂಖಾನ್ ಆರೋಗ್ಯದಲ್ಲಿ ಏರುಪೇರು ಆದ ಹಿನ್ನಲೆಯಲ್ಲಿ ಹೈದ್ರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಲಬುರಗಿ ಎಸ್ಪಿ ಇಶಾ ಪಂತ್ ಹೇಳಿದ್ದಾರೆ.

  ಇದನ್ನು ಓದಿ: ಈ ರೈಲಿನಲ್ಲಿ ಲೋಕೋ ಪೈಲಟ್ ಹಿಡಿದು ಎಲ್ಲರೂ ಮಹಿಳೆಯರು: ಇದು ಮಹಿಳಾ ದಿನಾಚರಣೆ ಸ್ಪೆಷಲ್ ಟ್ರೈನ್

  ಸೇಡಂ ಚಲೋ ನಡೆಸಿದ್ದ ಶ್ರೀ ರಾಮ ಸೇನೆ

  ಹಿಜಾಬ್​ ಸಂಬಂಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಮುಕ್ರಂಖಾನ್ ವಿರುದ್ಧ ಕಲಬುರಗಿ ಜಿಲ್ಲೆಯಲ್ಲಿ ವ್ಯಾಪಾಕ ಆಕ್ರೋಶ ವ್ಯಕ್ತವಾಗಿತ್ತು. ಮುಕ್ರಂಖಾನ್ ಬಂಧನಕ್ಕೆ ಆಗ್ರಹಿಸಿ ಶ್ರೀ ರಾಮ ಸೇನೆ ವತಿಯಿಂದ ಸೇಡಂ ಚಲೋ ಹಮ್ಮಿಕೊಳ್ಳಲಾಗಿತ್ತು.  ಇನ್ನೂ ಮುಕ್ರಂ ಖಾನ್‌ನನ್ನ ವಾರದೊಳಗೆ ಬಂಧಿಸುವುದಾಗಿ ಭರವಸೆ ನೀಡಿದ ನಂತರ, ಪ್ರತಿಭಟನೆ ವಾಪಾಸ್ ಪಡೆಯಲಾಗಿತ್ತು. ಆದರೆ ಮುಕ್ರಂ ಖಾನ್‌ನನ್ನ ವಾರ ಕಳೆದರೂ ಬಂಧಿಸದ ಹಿನ್ನಲೆಯಲ್ಲಿ ಶ್ರೀ ರಾಮ ಸೇನೆ ವತಿಯಿಂದ ಮತ್ತೆ ಸೇಡಂ ಚಲೋ ಹಮ್ಮಿಕೊಳ್ಳಲಾಗಿತ್ತು.  ಆದರೆ ಎರಡನೇ ಬಾರಿಯೂ ಪೊಲೀಸರ ಮನವಿ ಮೇರೆಗೆ ಶ್ರೀ ರಾಮ ಸೇನೆ ಸೇಡಂ ಚಲೋ ಕೈಬಿಟ್ಟಿತ್ತು.

  ಇದನ್ನು ಓದಿ: ಎಚ್.ಕೆ.ಪಾಟೀಲ್ ಪರ ನಿಂತ ಯಡಿಯೂರಪ್ಪ: ರೇವಣ್ಣ ನನ್ನ ದೋಸ್ತಿ ಬಿಟ್ಟಂಗ್ ಇದೆ ಅಂದ್ರು ಸ್ಪೀಕರ್

  ಕಠಿಣ ಶಿಕ್ಷೆಗೆ ಆಗ್ರಹ

  ಇದೀಗ ಮುಕ್ರಂ ಖಾನ್​ ವಶಕ್ಕೆ ಪಡೆದಿರುವ ಸಂಬಂದ ಪ್ರತಿಕ್ರಿಯಿಸಿರುವ ಶ್ರೀರಾಮಸೇನಾ ರಾಜ್ಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ,  ನ್ಯಾಯಾಲಯದಿಂದ ಜಾಮೀನು ಅರ್ಜಿ ತಿರಸ್ಕಾರಗೊಂಡ ಹಿನ್ನಲೆಯಲ್ಲಿ, ಸೇಡಂ ಪೊಲೀಸರು ಬೆಟ್ಟ ಅಗೆದು ಇಲಿಯನ್ನ ಹಿಡಿದ್ದಾರೆ . ಪ್ರಕರಣ ದಾಖಲಾಗಿ 20 ದಿನ ಕಳೆದರೂ ಆರೋಪಿಯನ್ನು ಬಂಧಿಸಿಲ್ಲ. ಇದೀಗ ಜಾಮೀನು ಅರ್ಜಿ ವಜಾವಾದ ಹಿನ್ನಲೆ ಬಂಧಿಸಲಾಗಿದೆ. ಅವರಿಗೆ ಕಠಿಣ ಶಿಕ್ಷಯಾಗಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.

  (ವರದಿ: ಅರುಣಕುಮಾರ ಕದಂ)
  Published by:Seema R
  First published: