HOME » NEWS » State » KALBURGI BOY LOVES OTHER RELIGION GIRL FOUND DEAD SAKLB SESR

Crime: ಏಳನೇ ತರಗತಿಗೆ ಪ್ರೀತಿ; ಅನ್ಯ ಕೋಮಿನ ಬಾಲಕಿ ಹಿಂದೆ ಬಿದ್ದು ಹೆಣವಾದ ಬಾಲಕ

ಏನೂ ಚಿಕ್ಕ ವಯಸ್ಸಲ್ಲಿ ಕುಡಿಯೋದನ್ನ ಕಲಿತ್ತಿದ್ದೀಯಾ   ಎಂದು ಪೋಷಕರು ಪ್ರಶ್ನಿಸಿದ್ದೇವು. ಆಗ ಏನೋ ಕೆಲಸವಿದೆ ಎಂದು ಎದ್ದು ಹೋದವನು ಬಾರದ ಲೋಕಕ್ಕೆ ಹೊರಟು ಹೋಗಿದ್ದಾನೆ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.

news18-kannada
Updated:March 2, 2021, 8:01 PM IST
Crime: ಏಳನೇ ತರಗತಿಗೆ ಪ್ರೀತಿ; ಅನ್ಯ ಕೋಮಿನ ಬಾಲಕಿ ಹಿಂದೆ ಬಿದ್ದು ಹೆಣವಾದ ಬಾಲಕ
ಸಾಂದರ್ಭಿಕ ಚಿತ್ರ.
  • Share this:
ಕಲಬುರ್ಗಿ (ಮಾ. 2): ಅನ್ಯ ಕೋಮಿನ ಯುವತಿಯನ್ನ ಪ್ರೀತಿಸುತ್ತಿದ್ದ 14 ವರ್ಷದ ಬಾಲಕನನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ. ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ಮಹೇಶ್ ಎಂಬ ಬಾಲಕ ಅದೇ ಗ್ರಾಮದ ಅನ್ಯಕೋಮಿನ ಬಾಲಕಿಯನ್ನು ಪ್ರೀತಿಸುತ್ತಿದ್ದ. ಜೊತೆಗೆ ಆಕೆಗೆ ಹೊಸ ಮೊಬೈಲ್‌ನ್ನ ಸಹ ಕೊಡಿಸಿದ್ದ ಎನ್ನಲಾಗಿದೆ. ಆದರೆ ಇಬ್ಬರ ಪ್ರೀತಿಗೆ ಯುವತಿ ತಾಯಿಯ ಪರಿಚಯಸ್ಥ ಮೆಹಬೂಬ್ ಎಂಬಾತ ಅಡ್ಡಗಾಲು ಹಾಕಿದ್ದ. ಪ್ರೀತಿ ಮಾಡಬೇಡಿ ಎಂದು ಮೆಹಬೂಬ್ ಎಷ್ಟು ಸಾರಿ ಹೇಳಿದರೂ, ಇಬ್ಬರು ಪ್ರೀತಿ ಮುಂದುವರಿಸಿದ್ದರು. ಇವರ ಒಡನಾಟ  ಹೆಚ್ಚಾದಂತೆ ಬಾಲಕಿಯ ತಾಯಿ ತಾರಾಬಿ ಹಾಗೂ ಆಕೆಯ ಪ್ರಿಯತಮ ಮೆಹಬೂಬ್ ಕೂಡಿ ಬಾಲಕ ಮಹೇಶನ ಕೊಲೆಗೈದಿದ್ದಾರೆ. ಈ ವಿಚಾರ ಗೊತ್ತಿರದ ಮಹೇಶ್ ಪೋಷಕರು ಮಾತ್ರ ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಆತನ ಮೊಬೈಲ್ ಸ್ವಿಚ್ಡ್ ಆಫ್ ಆಗಿ, ಆತನ ಸುಳಿವೂ ಸಿಗದಿದ್ದಾಗ ಪೊಲೀಸ್ ಠಾಣೆಯಲ್ಲಿ ದೂರನ್ನೂ ನೀಡಿದ್ದಾರೆ.

ಆದರೆ ಭೀಮಾ ನದಿ ಬಳಿ ಗೋಣಿ ಚೀಲದಲ್ಲಿ ಶವ ಸಿಗುತ್ತಿದ್ದಂತೆಯೇ ಮುಗಿಲು ಮುಟ್ಟುವಂತೆ ಬಾಲಕನ ಕುಟುಂಬಸ್ಥರು ಆಕ್ರಂದಿಸಿದ್ದಾರೆ. ಕೊಲೆಯಾಗುವ ದಿನ ಮಗ ಕುಡಿದು ಮನೆಗೆ ಬಂದಿದ್ದ. ಏನೂ ಚಿಕ್ಕ ವಯಸ್ಸಲ್ಲಿ ಕುಡಿಯೋದನ್ನ ಕಲಿತ್ತಿದ್ದೀಯಾ   ಎಂದು ಪೋಷಕರು ಪ್ರಶ್ನಿಸಿದ್ದೇವು. ಆಗ ಏನೋ ಕೆಲಸವಿದೆ ಎಂದು ಎದ್ದು ಹೋದವನು ಬಾರದ ಲೋಕಕ್ಕೆ ಹೊರಟು ಹೋಗಿದ್ದಾನೆ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.

ಕೊಲೆಗೆ ನಡೆದಿತ್ತು ಸಂಚು

ಪ್ರೀತಿ ಮಾಡಬೇಡ ಎಂದರೂ  ಕೇಳದೆ ತಮ್ಮ ಬಾಲಕಿಯ ಹಿಂದೆ ಬಿದ್ದಿದ್ದಾನೆಂದು ಕುಪಿತಗೊಂಡಿದ್ದ ಬಾಲಕಿಯ ತಾಯಿ ತಾರಾಬಿ, ತನ್ನ ಪ್ರಿಯತಮ ಮೆಹಬೂಬ್ ಗೆ ಪಾಠ ಕಲಿಸುವ ಜವಾಬ್ದಾರಿ ವಹಿಸಿದ್ದಳು. ಅದರಂತೆ ಬಾಲಕನಿಗೆ ಫೋನ್ ಮೂಲಕ ಕರೆ ಮಾಡಿದ್ದ ಮೆಹಬೂಬ್, ಭೀಮಾ ನದಿ ದಂಡೆಗೆ ಬರುವಂತೆ ಹೇಳಿದ್ದಾನೆ. ಬೋಟಿನಲ್ಲಿ ಚಾಮನೂರು ಬ್ರೀಡ್ಜ್ ವರೆಗೆ ಭೀಮಾ ನದಿಯಲ್ಲಿ ಕರೆದುಕೊಂಡು ಹೋಗಿ ಕಂಠಪೂರ್ತಿ ಕುಡಿಸಿದ್ದಾರೆ. ನಂತರ ಬೋಟಿನಲ್ಲೆ ಮುಖ, ಮೈ ಮೇಲೆ ಮನ ಬಂದಂತೆ ಗುದ್ದಿ, ಹಲ್ಲೆ ಮಾಡಿದ್ದಾರೆ. ಅಲ್ಲದೇ ಕತ್ತು ಸಹ ಹಿಸುಕಿದ್ದಾರೆ ಎನ್ನಲಾಗಿದೆ.  ಕೊಲೆ ಮಾಡಿ ಶವವನ್ನ ಚೀಲದಲ್ಲಿ ಹಾಕಿ ನರಿಬೋಳ-ಚಾಮನೂರ ಭೀಮಾ ನದಿಯಲ್ಲಿ ನಿರ್ಮಾಣವಾಗುತ್ತಿರುವ ಬ್ರೀಡ್ಜ್ ಕೆಳಗೆ ಶವ ಬಿಸಾಕಿದ್ದಾರೆ.

ನಂತರ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಮೆಹಬೂಬ್ ಗೆ ಬಾಲಕಿಯ ತಾಯಿ ತಾರಾಬಿ ಸಹಾಯ ಮಾಡಿದ್ದು, ಇಬ್ಬರು ಸೇರಿ ಕೊಲೆ ಕೃತ್ಯ ಎಸಗಿದ್ದಾರೆ. ಈ ಕುರಿತು ತನಿಖೆ ನಡೆಸಿರುವ ಜೇವರ್ಗಿ ಪೊಲೀಸರು ಮೆರಬೂಬ್ ಹಾಗೂ ತಾರಾಬಿ ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೊಲೆಯಲ್ಲಿ ಇಬ್ಬರ ಕೈವಾಡವು ಇದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಕಲಬುರ್ಗಿ ಎಸ್.ಪಿ. ಸಿಮಿ ಮರಿಯಮ್ ಜಾರ್ಜ್ ತಿಳಿಸಿದ್ದಾರೆ.

(ವರದಿ - ಶಿವರಾಮ ಅಸುಂಡಿ)
Published by: Seema R
First published: March 2, 2021, 8:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories