ಆಳಂದ ಪುರಸಭೆ ಅತಂತ್ರ - ಅಧಿಕಾರ ಹಿಡಿಯಲು ಬಿಜೆಪಿ ತಂತ್ರ

ಕಲ್ಬುರ್ಗಿ ಜಿಲ್ಲೆಯ ಏಳು ನಗರ ಸ್ಥಳೀಯ ಸಂಸ್ಥೆಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್ ಮತ್ತು ಎರಡರಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿವೆ. ಆಳಂದ ಪುರಸಭೆಯ 27 ಸ್ಥಾನಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 13 ಸ್ಥಾನ ಗಳಿಸಿದ್ದು, ಒಂದು ಸ್ಥಾನದಲ್ಲಿ ಜೆಡಿಎಸ್ ಗೆದ್ದಿದೆ. ಹೀಗಾಗಿ ಆಳಂದ ಪುರಸಭೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಅತಂತ್ರ ಪರಿಸ್ಥಿತಿಯ ನಡುವೆಯೇ ಅಧಿಕಾರಿ ಗದ್ದುಗೆ ಏರಲು ಬಿಜೆಪಿ ರಣತಂತ್ರ ರೂಪಿಸಿದ್ದು, ಅಧಿಕಾರ ಹಿಡಿದೇ ತೀರುತ್ತೇವೆ ಎಂಬ ವಿಶ್ವಾಸದಲ್ಲಿ ಮುಖಂಡರಿದ್ದಾರೆ.

Updated:September 4, 2018, 6:35 PM IST

Updated: September 4, 2018, 6:35 PM IST
- ಶಿವರಾಮ ಅಸುಂಡಿ, ನ್ಯೂಸ್18 ಕನ್ನಡ

ಕಲಬುರ್ಗಿ(ಸೆ. 04): ಜಿಲ್ಲೆಯ ಏಳು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಶಹಾಬಾದ್ ನಗರಸಭೆ, ಚಿಂಚೋಳಿ, ಚಿತ್ತಾಪುರ ಮತ್ತು ಅಫಜಲಪುರ ಪುರಸಭೆಗಳಲ್ಲಿ ಅಧಿಕಾರ ಗದ್ದುಗೆ ಏರುವಲ್ಲಿ ಕಾಂಗ್ರೆಸ ಯಶಸ್ವಿಯಾಗಿದೆ. ಸೇಡಂ ಮತ್ತು ಜೇವರ್ಗಿ ಪುರಸಭೆಗಳಲ್ಲಿ ಕಮಲ ಅರಳಿದೆ. ಆದರೆ ಆಳಂದ ಪುರಸಭೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟು 27 ಸ್ಥಾನಗಳ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 13 ಸ್ಥಾನಗಳಲ್ಲಿ ಗೆದ್ದು, ಸಮಬಲ ಸಾಧಿಸಿವೆ. ಒಂದು ಸ್ಥಾನ ಪಡೆದಿರುವ ಜೆಡಿಎಸ್ ಕಿಂಗ್ ಮೇಕರ್ ಸ್ಥಾನದಲ್ಲಿ ನಿಂತಿದೆ.

ಆದರೆ ಜೆಡಿಎಸ್ ಅಭ್ಯರ್ಥಿಯ ನೆರವಿಲ್ಲದೆಯೇ ಅಧಿಕಾರ ಗದ್ದುಗೆ ಏರಲು ಬಿಜೆಪಿ ರಣತಂತ್ರ ಹೆಣೆದಿದೆ. ಆಳಂದ ಪುರಸಭೆ ಅಧಿಕಾರ ಗದ್ದುಗೆ ಏರಲು ಬೇಕಿರುವುದು 14 ಮ್ಯಾಜಿಕ್ ನಂಬರ್. ಈಗಾಗಲೇ ಬಿಜೆಪಿ ಬಳಿ 13 ಸ್ಥಾನಗಳಿದ್ದು, ಒಂದು ಸ್ಥಾನದ ಅಗತ್ಯವಿದೆ. ಅಗತ್ಯವಿರುವ ಒಂದು ಸ್ಥಾನದ ಜೊತೆಗೆ ಮತ್ತೊಂದು ಸ್ಥಾನವೂ ಹೆಚ್ಚುವರಿಯಾಗಿ ಬಿಜೆಪಿಗೆ ಲಭ್ಯವಿದೆ. ಆಳಂದ ವಿಧಾನಸಭೆಯಲ್ಲಿ ಬಿಜೆಪಿಯ ಸುಭಾಷ್ ಗುತ್ತೇದಾರ ಶಾಸಕರಾಗಿದ್ದರೆ, ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಭಗವಂತ ಖೂಬಾ ಸಂಸದರಾಗಿದ್ದಾರೆ. ಹೀಗಾಗಿ 13 ಸ್ಥಾನಗಳ ಜೊತೆಗೆ ಒಂದು ಶಾಸಕ ಮತ್ತು ಒಂದು ಸಂಸದರ ಮತ ಕೂಡಿಸಿಕೊಂಡಲ್ಲಿ ಅಧಿಕಾರ ಗದ್ದುಗೆ ಏರುವುದು ನಿಶ್ಚಿತ ಎಂಬ ವಿಶ್ವಾಸದಲ್ಲಿ ಬಿಜೆಪಿ ಮುಖಂಡರಿದ್ದಾರೆ. ಆಳಂದ ಪುರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿಯೇ ತೀರುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಾಬುರಾವ್ ಚವ್ಹಾಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಂ.ಪಿ., ಎಂಎಲ್​ಎಗಳ ಮತಗಳ ಜೊತೆಗೆ, ಜೆಡಿಎಸ್​ನ ಓರ್ವ ಸದಸ್ಯ ಮತ್ತು ಕೆಲ ಕಾಂಗ್ರೆಸ್ ಸದಸ್ಯರನ್ನು ಸೆಳೆಯುವ ತಂತ್ರದಲ್ಲಿ ಬಿಜೆಪಿ ನಿರತವಾಗಿದೆ. ಶತಾಯಗತಾಯ ಅಧಿಕಾರಕ್ಕೆ ಬರಲೇಬೇಕೆಂದುಕೊಂಡಿರುವ ಬಿಜೆಪಿ ಅಧಿಕಾರ ಗದ್ದುಗೆ ಏರುವ ಹುಮ್ಮಸ್ಸಿನಲ್ಲಿದೆ. ಬಿಜೆಪಿಯಷ್ಟೇ ಸ್ಥಾನ ಪಡೆದಿರುವ ಕಾಂಗ್ರೆಸ್ ಸಹ ಅಧಿಕಾರ ಗದ್ದುಗೆ ಏರಲು ರಣತಂತ್ರ ರೂಪಿಸಲಾರಂಭಿಸಿದೆ. ಕಳೆದ ಬಾರಿ ಸುಭಾಷ್ ಗುತ್ತೇದಾರ ನೇತೃತ್ವದಲ್ಲಿ ಜೆಡಿಎಸ್ ಪುರಸಭೆಯಲ್ಲಿ ಅಧಿಕಾರ ಗದ್ದುಗೆ ಹಿಡಿದಿತ್ತು. ಸುಭಾಷ್ ಗುತ್ತೇದಾರ್ ಬಿಜೆಪಿಗೆ ಬಂದ ನಂತರ ಪುರಸಭೆ ಬಿಜೆಪಿಗೆ ದಕ್ಕಿತ್ತು. ಇದೀಗ ಮತ್ತೊಮ್ಮೆ ಅಧಿಕಾರ ಗದ್ದುಗೆ ಏರಲು ಬಿಜೆಪಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಆಳಂದ ಪುರಸಭೆ ಬಿಜೆಪಿಗೋ ಅಥವಾ ಕಾಂಗ್ರೆಸ್​ಗೋ ಎಂಬುದನ್ನು ಕಾದು ನೋಡಬೇಕಿದೆ.
First published:September 4, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ