ಹುತಾತ್ಮ ಯೋಧ ಗುರುವಿನ ಸ್ಮರಣೆ ಕಾರ್ಯಕ್ಕೆ ಗೈರಾದ ಹೆಂಡತಿ ಕಲಾವತಿ

 ಹುತಾತ್ಮ ಯೋಧ ಗುರುವಿನ ಮೊದಲ ವರ್ಷದ ಸಂಸ್ಮರಣೆ ಹುಟ್ಟೂರು ಗುಡಿಗೆರೆ ಗ್ರಾಮದಲ್ಲಿ ನಡೆಯಿತು. ಈ ವೇಳೆ ಗ್ರಾಮಸ್ಥರು, ಕುಟುಂಬಸ್ಥರು ಗುರುವಿನ ನೆನೆದರು. ಆದರೆ, ಅವರ ಪತ್ನಿ ಕಲಾವತಿ ಮಾತ್ರ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ

news18-kannada
Updated:February 14, 2020, 1:41 PM IST
ಹುತಾತ್ಮ ಯೋಧ ಗುರುವಿನ ಸ್ಮರಣೆ ಕಾರ್ಯಕ್ಕೆ ಗೈರಾದ ಹೆಂಡತಿ ಕಲಾವತಿ
ಗುರುವಿನ ಸಮಾಧಿಗೆ ಪೂಜೆ ಸಲ್ಲಿಸುತ್ತಿರುವ ಗ್ರಾಮಸ್ಥರು-ಕುಟುಂಬಸ್ಥರು
  • Share this:
ಮಂಡ್ಯ (ಫೆ.14): ಕಳೆದ ವರ್ಷ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಮದ್ದೂರಿನ ಯೋಧ ಗುರು ಸಾವನ್ನಪ್ಪಿ ಇಂದಿಗೆ ಒಂದು ವರ್ಷ. ಪುಲ್ವಾಮಾ ಕರಾಳ ದಿನದ ಜೊತೆ ಹುತಾತ್ಮ ಯೋಧ ಗುರುವಿನ ಸ್ಮರಣೆ ಕಾರಣ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಯೋಧನ ಪತ್ನಿ ಕಲಾವತಿಯ ಗೈರು ಎದ್ದು ಕಾಣುತ್ತಿತ್ತು.

ಹುತಾತ್ಮ ಯೋಧ ಗುರುವಿನ ಮೊದಲ ವರ್ಷದ ಸ್ಮರಣೆ ಹುಟ್ಟೂರು ಗುಡಿಗೆರೆ ಗ್ರಾಮದಲ್ಲಿ ನಡೆಯಿತು. ಈ ವೇಳೆ ಯೋಧನ ತ್ಯಾಗವನ್ನು ಸ್ಮರಿಸಲಾಯಿತು.ಸ್ಮರಣೆ ಕಾರ್ಯಕ್ರಮದ ಹಿನ್ನೆಲೆ ಊರಿನ‌ ಗ್ರಾಮಸ್ಥರು ಮತ್ತು‌ ದೇಶಪ್ರೇಮಿಗಳು ಸಮಾಧಿ ಸ್ಥಳದ ಬಳಿ ಸ್ವಚ್ಚತಾ ಕಾರ್ಯ ನಡೆಸಿ,  ಸಮಾಧಿ ಸ್ಥಳವನ್ನ ತ್ರಿವರ್ಣ ಧ್ವಜದ ಬಣ್ಣದಿಂದ ಅಲಂಕರಿ‌ಸಿ  ಗೌರವ ಸಲ್ಲಿಸಿದರು. ಜೊತೆಗೆ ಊರಿನ ಜನರಿಗೆ ಅನ್ನಸಂತರ್ಪಣೆ ಕಾರ್ಯ ನಡೆಸುವ ಮೂಲಕ ಅವರಿಗೆ ಸೇವೆ ಕೊಂಡಾಡಿದರು. ಶಾಲಾ ಮಕ್ಕಳು ಕೂಡ ಹುತಾತ್ಮ ಯೋಧನ ಸಮಾಧಿ ಹೂವಿಟ್ಟು ಪುಣ್ಯ ನಮನ ಸಲ್ಲಿಸಿದರು. ಜಿಲ್ಲೆ ಮಾತ್ರವಲ್ಲದೇ
ಬೇರೆ ಪ್ರದೇಶಗಳಿಂದಲೂ ಜನರು ಅವರಿಗೆ ನಮನ ಸಲ್ಲಿಸಲೂ ಆಗಮಿಸುತ್ತಿದ್ದರೆ, ಅವರ ಪತ್ನಿ ಮಾತ್ರ ಈ ಕಾರ್ಯಕ್ರಮಕ್ಕೆ ಗೈರಾಗಿದ್ದು, ಗ್ರಾಮಸ್ಥರ ಬೇಸರಕ್ಕೆ ಕಾರಣವಾಯಿತು.ಇನ್ನು ಈ ಕುರಿತು ಮಾತನಾಡಿರುವ ಅವರ ತಾಯಿ ಚಿಕ್ಕಹೊಳ್ಳಮ್ಮ, ಮಗ ಸಾವಿನ ಬಳಿಕ ಕೆಲಸಕ್ಕೆ ಬೆಂಗಳೂರಿಗೆ ಸೇರಿದ ಸೊಸೆ ಮತ್ತೆ ಗ್ರಾಮಕ್ಕೆ ಬಂದಿಲ್ಲ ಎಂದು ನೋವು ವ್ಯಕ್ತಪಡಿಸಿದರು.ಇದನ್ನು ಓದಿ: ಕಾಶ್ಮೀರದ ಉಗ್ರ ದಾಳಿಯಲ್ಲಿ ಮದ್ದೂರಿನ ಯೋಧ ಗುರು ಹುತಾತ್ಮ

ಗುರು ಸಾವಿನ ಬಳಿಕ ಅವರ ಪತ್ನಿ ಕಲಾವತಿ ಹಾಗೂ ಚಿಕ್ಕಹೊಳ್ಳಮ್ಮ ನಡುವೆ ಹಣದ ವಿಚಾರಕ್ಕೆ ನಡೆದ ಜಗಳ ಸದ್ದು ಮಾಡಿತ್ತು. ಈ ಕುರಿತು ಮಾತನಾಡಿದ ಅವರು, ಅವರಿಗೆ  ಸೇರಬೇಕಿದ್ದ ಹಣ ಅವರಿಗೆ ಸೇರಿದೆ. ನಮ್ಮ ಹಣ ನಮಗೆ ಸೇರಿದೆ ಎಂದು ಮಾತು ನಿಲ್ಲಿಸಿದರು.

 
First published: February 14, 2020, 1:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading