Kalasipalya Market: ಬೆಂಗಳೂರಿನ ಕೇಂದ್ರ ಭಾಗದಲ್ಲಿದ್ದ ಕಲಾಸಿಪಾಳ್ಯ ಮಾರುಕಟ್ಟೆ ಶಿಫ್ಟ್! ಸರ್ಕಾರದ ಮುಂದಿನ ಪ್ಲ್ಯಾನ್ ಏನು?

ಬೆಂಗಳೂರಿನ ಅತ್ಯಂತ ಹಳೆಯ ಮತ್ತು ಪ್ರಸಿದ್ಧ ಮಾರುಕಟ್ಟೆಗಳಲ್ಲಿ ಒಂದಾದ ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆಯನ್ನು ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಈ ಹಿಂದೆ ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಲಾಗಿತ್ತು. ಆದರೆ ಇದೇ ಕ್ರಮವನ್ನು ಇನ್ನುಮುಂದೆ ಶಾಶ್ವತವಾಗಿ ತೆಗೆದುಕೊಳ್ಳುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಹೌದು, ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಕಲಾಸಿಪಾಳ್ಯ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಲು ಸರ್ಕಾರ ಅನುಮೋದನೆ ನೀಡಿದೆ.

ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆ

ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆ

  • Share this:
ಬೆಂಗಳೂರಿನ (Bengaluru) ಅತ್ಯಂತ ಹಳೆಯ ಮತ್ತು ಪ್ರಸಿದ್ಧ ಮಾರುಕಟ್ಟೆಗಳಲ್ಲಿ ಒಂದಾದ ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆಯನ್ನು (Kalasipalya Vegetable Market) ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಈ ಹಿಂದೆ ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಲಾಗಿತ್ತು. ಕೋವಿಡ್‌-19 ಸೋಂಕಿನ ಬಗ್ಗೆ ನಿಗಾ ವಹಿಸಿ ವಹಿವಾಟು ನಡೆಸಲು ಹೊಸೂರು ರಸ್ತೆಯ ಸಿಂಗೇನ ಅಗ್ರಹಾರಕ್ಕೆ (Singhena Agrahara) ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಲಾಗಿತ್ತು. ಮತ್ತೆ ಕೊರೊನಾ ಲಾಕ್‌ಡೌನ್‌ ಸಡಿಲಿಕೆಯಿಂದಾಗಿ ಕಲಾಸಿಪಾಳ್ಯ ಮಾರುಕಟ್ಟೆಯಲ್ಲೇ ವ್ಯಾಪಾರಕ್ಕೆ (Business) ಅವಕಾಶ ನೀಡಲಾಯಿತು. ಆದರೆ ಇದೇ ಕ್ರಮವನ್ನು ಇನ್ನುಮುಂದೆ ಶಾಶ್ವತವಾಗಿ ತೆಗೆದುಕೊಳ್ಳುವುದಕ್ಕೆ ರಾಜ್ಯ ಸರ್ಕಾರ (State Government) ಮುಂದಾಗಿದೆ. ಹೌದು, ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಕಲಾಸಿಪಾಳ್ಯ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಲು ಸರ್ಕಾರ ಅನುಮೋದನೆ ನೀಡಿದೆ.

ಬೆಂಗಳೂರಿನ ಕೇಂದ್ರ ಭಾಗದಿಂದ ಕಲಾಸಿಪಾಳ್ಯ ಮಾರುಕಟ್ಟೆ ಸ್ಥಳಾಂತರ... ₹ 100 ಕೋಟಿ ಅನುದಾನ
ಬೆಂಗಳೂರು ನಗರದ ಹೊರವಲಯದ ಸಿಂಗೇನ ಅಗ್ರಹಾರ ಬಳಿಯ ಗೂಳಿಮಂಗಲದಲ್ಲಿ ಆಧುನಿಕ ತರಕಾರಿ ಮಾರುಕಟ್ಟೆ ಸ್ಥಾಪನೆಗೆ ರಾಜ್ಯ ಸರ್ಕಾರ ₹ 100 ಕೋಟಿ ಅನುದಾನ ನೀಡುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. 42 ಎಕರೆ 31 ಗುಂಟೆಯಲ್ಲಿ ತರಕಾರಿ ಮಾರುಕಟ್ಟೆ ಅಭಿವೃದ್ಧಿಪಡಿಸಲು ಗೂಳಿಮಂಗಲ ಗ್ರಾಮದಲ್ಲಿ ಸರ್ಕಾರ ₹48 ಕೋಟಿ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿದೆ.

₹48 ಕೋಟಿ ಭೂಸ್ವಾಧೀನಕ್ಕೆ, ₹ 52 ಕೋಟಿ ಮಾರುಕಟ್ಟೆ ಅಭಿವೃದ್ಧಿಗೆ
ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಈ ಹೊಸ ಮಾರುಕಟ್ಟೆಯ ನಿರ್ಮಾಣವನ್ನು ಕೈಗೊಳ್ಳಲು ಬಹಳ ಹಿಂದೆಯೇ ನಿರ್ಧರಿಸಲಾಗಿದ್ದರೂ, ಈಗ ಅನುಮತಿ ನೀಡಲಾಗಿದೆ. 42 ಎಕರೆ ಜಾಗದಲ್ಲಿ ಮಾರುಕಟ್ಟೆ ನಿರ್ಮಾಣವಾಗಲಿದ್ದು, 100 ಕೋಟಿ ಅನುದಾನ ಬಂದಿದೆ, ಅದರಲ್ಲಿ ₹48 ಕೋಟಿ ಭೂಸ್ವಾಧೀನಕ್ಕೆ ಮತ್ತು ಉಳಿದ ₹ 52 ಕೋಟಿ ಮಾರುಕಟ್ಟೆ ಮೂಲಸೌಕರ್ಯ ಸ್ಥಾಪನೆಗೆ ಬಳಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Karnataka Crime Bill: ಆರೋಪಿ ಇಲ್ಲದಿದ್ದರೂ ನಡೆಯುತ್ತಾ ವಿಚಾರಣೆ? ಕರ್ನಾಟಕ ಅಪರಾಧ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ

"ಉದ್ದೇಶಿತ ಮಾರುಕಟ್ಟೆಯು ನಗರದ ಹಲವಾರು ಪ್ರದೇಶಗಳಿಂದ ತುಂಬಾ ದೂರದಲ್ಲಿದೆ ಎಂಬ ಅಂಶವನ್ನು ಕ್ಯಾಬಿನೆಟ್ ಅನೌಪಚಾರಿಕವಾಗಿ ತೆಗೆದುಕೊಂಡಿತು. ನಗರದ ಹೊರವಲಯದಲ್ಲಿ ವಿವಿಧ ಪ್ರದೇಶಗಳಲ್ಲಿ ಇಂತಹ ನಾಲ್ಕು ಮಾರುಕಟ್ಟೆಗಳನ್ನು ನಿರ್ಮಿಸುವ ಆಲೋಚನೆಗೆ ಕ್ಯಾಬಿನೆಟ್ ಒತ್ತು ನೀಡಿದೆ. ಇದರಿಂದ ಎಲ್ಲಾ ಪ್ರದೇಶಗಳ ಜನರು ಅವುಗಳನ್ನು ತಲುಪಲು ಸಾಧ್ಯವಾಗುತ್ತದೆ" ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಕೋಲಾರ ಮತ್ತು ಮಾಗಡಿ ರಸ್ತೆಯಲ್ಲೂ ಎರಡು ಮಾರುಕಟ್ಟೆ!?
ಗೂಳಿಮಂಗಲದಲ್ಲಿ ಈ ಹಿಂದೆಯೇ ಇದನ್ನು ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧರಿಸಿತ್ತು. ಕೋಲಾರ ಮತ್ತು ಮಾಗಡಿ ರಸ್ತೆಯಲ್ಲಿ ಅಂತಹ ಎರಡು ಮಾರುಕಟ್ಟೆಗಳನ್ನು ನಿರ್ಮಿಸುವ ಆಲೋಚನೆ ಇದೆ, ಇದರಿಂದ ಆ ಪ್ರದೇಶಗಳಿಂದ ಬೆಂಗಳೂರು ತಲುಪುವ ತರಕಾರಿ ಬೆಳೆಗಾರರಿಗೆ ಸಹಾಯವಾಗುತ್ತದೆ ಎಂದು ಅವರು ವಿವರಿಸಿದರು.

ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನಗಳು
ಕೃಷಿಗೆ ಸಂಬಂಧಿಸಿದ ಮಾರುಕಟ್ಟೆ ಸೇರಿ ಸಂಪುಟ ಸಭೆಯಲ್ಲಿ ಹಲವಾರು ಮಹತ್ವದ ನಿರ್ಧಾರಗಳನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಅಲ್ಲದೇ ಮುಂದಿನ ಅಧಿವೇಶನದ ದಿನಾಂಕವನ್ನು ಸಹ ಪ್ರಕಟಿಸಿದೆ. ಸಭೆಯಲ್ಲಿ ಕಾಕ್ಸ್ ಟೌನ್‌ನಲ್ಲಿ ನೀಡಲಾದ 3.13 ಎಕರೆ ಭೂಮಿಯನ್ನು ಕ್ರೀಡಾಂಗಣ ಮತ್ತು ಇತರ ಕ್ರೀಡಾ ಸಂಬಂಧಿತ ಸೌಲಭ್ಯಗಳನ್ನು ನಿರ್ಮಿಸಲು ಇಂಡಿಯನ್ ಜಿಮ್ಖಾನಾ ಕ್ಲಬ್‌ಗೆ ಅರ್ಪಿಸಲು ಕ್ಯಾಬಿನೆಟ್ ನಿರ್ಧರಿಸಿದೆ. ಜೊತೆಗೆ ಶ್ರೀನಿವಾಸ ಟ್ರಸ್ಟ್‌ಗೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ 3 ಎಕರೆ ಜಾಗವನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾರ್ಗದರ್ಶಿ ಮೌಲ್ಯದ 25% ವೆಚ್ಚದಲ್ಲಿ ಮಂಜೂರು ಮಾಡಲು ಸಂಪುಟ ನಿರ್ಧರಿಸಿದೆ.

ಇದನ್ನೂ ಓದಿ: Explained: ದೆಹಲಿಯಲ್ಲಿ ಮತ್ತೊಮ್ಮೆ ರೈತರು ಪ್ರತಿಭಟನೆ ನಡೆಸುತ್ತಿರುವುದೇಕೆ? ಈ ಬಾರಿ ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳೇನು?

ಸೆ.12ರಿಂದ ಅಧಿವೇಶನ
ವಿಧಾನ ಮಂಡಲ ಉಭಯ ಸದನಗಳ ಅಧಿವೇಶನವನ್ನು ಸೆಪ್ಟಂಬರ್ 12 ರಿಂದ ಹತ್ತುದಿನಗಳ ಕಾಲ ಬೆಂಗಳೂರಿನ ವಿಧಾನಸೌಧದಲ್ಲಿ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಮಾರ್ಚ್‍ನಲ್ಲಿ ವಿಧಾನ ಮಂಡಲ ಅಧಿವೇಶನ ನಡೆದಿತ್ತು. ಇದೀಗ ಸೆ.12ರಿಂದ ಅಧಿವೇಶನ ಆರಂಭವಾಗುತ್ತಿದ್ದು, ‘ಮಳೆ -ಪ್ರವಾಹ, ಶೇ.40ರಷ್ಟು ಕಮಿಷನ್ ಆರೋಪ, ಪಠ್ಯ ಪುಸ್ತಕ ಪರಿಷ್ಕರಣೆ, ಸರ್ಕಾರ ರಚನೆ ಬಗೆಗಿನ ವಿವಾದ ಸೇರಿದಂತೆ ಹಲವು ವಿಚಾರಗಳು ಕಲಾಪದಲ್ಲಿ ಮುನ್ನೆಲೆಗೆ ಬರುವ ಸಾಧ್ಯತೆಗಳಿವೆ.
Published by:Ashwini Prabhu
First published: