ಬೆಂಗಳೂರು: ಇಂದು ಬೆಳಗಿನ ಜಾವ 4.15ಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ನಿವಾಸಕ್ಕೆ ಕಾಲಜ್ಞಾನ ಗುರೂಜಿ ಆಗಮಿಸಿ ಭವಿಷ್ಯ ನುಡಿದಿದ್ದಾರೆ. ಕಳೆದ ಕೆಲ ವರ್ಷಗಳಿಂದ ಶಿವಕುಮಾರ್ ಅವರಿಗೆ ಕಾಲಜ್ಞಾನ ವಿಜಯ್ ರಾಜ್ ಗುರೂಜಿ ಕಾಲಜ್ಞಾನ ಭವಿಷ್ಯ ತಿಳಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಇಂದು ಬೆಳಗಿನ ಜಾವವೇ ಗುರೂಜಿಗಳು ಬಂದು ಮುಂದಿನ ಭವಿಷ್ಯದ ಸುಳಿವು ನೀಡಿದ್ದಾರಂತೆ. ಸಿಎಂ ಆಗುವ ಯೋಗ, ಸಮಯ ಹೇಗಿದೆ, ಯಾವಾಗ ಪ್ರಮಾಣ ವಚನ ಸ್ವೀಕಾರ ಮಾಡಬೇಕು ಅನ್ನೋ ಬಗ್ಗೆ ವಿಜಯ್ ರಾಜ್ ಗುರೂಜಿ (Vijay Raj Guruji) ಮಾಹಿತಿ ನೀಡಿದ್ದಾರಂತೆ. ಗುರುವಾರ ತುಂಬ ಚೆನ್ನಾಗಿದೆ ಎಂದು ವಿಜಯ್ ರಾಜ್ ಗುರೂಜಿ ತಿಳಿಸಿದ್ದಾರೆ ಎನ್ನಲಾಗಿದೆ. ಪ್ರಸುತ್ತ ಡಿಕೆ ಶಿವಕುಮಾರ್ ಅವರಿಗೆ ಬುಧ, ಅಧಿತ್ಯ ಪಂಚಮ ಯೋಗವಿದೆ ಎಂದು ಗುರೂಜಿ ತಿಳಿಸಿದ್ದಾರೆನ್ನಲಾಗಿದೆ.
ಶುಭವಾರ, ಶುಭ ಘಳಿಗೆ, ಶುಭ ಮುಹೂರ್ತ. ಶುಕ್ರವಾರ ಸರ್ಕಾರ ರಚನೆ ಬಗ್ಗೆ ನೋಡೋಣ. ವರಿಷ್ಠರಿಗೆ ಎಲ್ಲಾ ಕಳಿಸಿದ್ದೇವೆ, ಅವರೇ ನಿರ್ಣಯ ಮಾಡ್ತಾರೆ ಎಂದ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹೈಕಮಾಂಡ್ ಅಂಗಳಕ್ಕೆ ಸಿಎಂ ಆಯ್ಕೆ ಚೆಂಡು
ಕಾಂಗ್ರೆಸ್ ಶಾಸಕಾಂಗ ಸಭೆ ಮುಕ್ತಾಯದ ಬಳಿಕ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿದ್ದಾರೆ. ಶಾಸಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ವೈಯಕ್ತಿಕವಾಗಿ ಪ್ರತಿಯೊಬ್ಬರ ಅಭಿಪ್ರಾಯ ಪಡೆಯಲಾಗಿದೆ.
ಇದನ್ನೂ ಓದಿ: Jagadish Shettar: ಸೋತ ಶೆಟ್ಟರ್ಗೆ ಮಿನಿಸ್ಟರ್ ಸ್ಥಾನ! ಏನಿದು ಕಾಂಗ್ರೆಸ್ ಹೊಸ ಲೆಕ್ಕಾಚಾರ?
ವೀಕ್ಷಕರು ದೆಹಲಿಗೆ ತೆರಳಿ ಹೈಕಮಾಂಡ್ ವರದಿ ನೀಡಲಿದ್ದಾರೆ. ಹೈಕಮಾಂಡ್ ಸಿಎಂ ಆಯ್ಕೆ ಮಾಡುತ್ತೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ