ರಾಮ ಮಂದಿರಕ್ಕಾಗಿ ಜನಾಗ್ರಹ ಸಭೆ: ಸಿದ್ದರಾಮಯ್ಯ ವಿರುದ್ಧ ಕಲ್ಲಡ್ಕ ಪ್ರಭಾಕರ್​​ ಭಟ್​ ವಾಗ್ದಾಳಿ

ಕಲ್ಲಡ್ಕ ಪ್ರಭಾಕರ್ ಭಟ್

ಕಲ್ಲಡ್ಕ ಪ್ರಭಾಕರ್ ಭಟ್

  • Share this:
ರಾಚಪ್ಪ ಬನ್ನಿದಿನ್ನಿ

ಬೆಂಗಳೂರು(ಡಿ.02): ಬಾಗಲಕೋಟೆಯಲ್ಲಿಂದು ರಾಮಮಂದಿರ ನಿರ್ಮಾಣಕ್ಕಾಗಿ ಬೃಹತ್ ಶೋಭಾಯಾತ್ರೆ ನಡೀತು. ಬಳಿಕ ಬಸವೇಶ್ವರ ಕಾಲೇಜು ಮೈದಾನದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಹಿಂದೂತ್ವವಾದಿ ಕಲ್ಲಡ್ಕ ಪ್ರಭಾಕರ ಭಾಷಣ ವೇಳೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಟಿಪ್ಪುವಿಗೆ ಬೆಂಬಲ ನೀಡುವ ಸಿದ್ದರಾಮಯ್ಯ, ಕೃಷ್ಣದೇವರಾಯರನ್ನು ಆರಾಧಿಸಬೇಕಾಗಿತ್ತು. ಗೋಮಾತೆಯನ್ನು ನಾವು ಆರಾಧಿಸುತ್ತೇವೆ. ಆದ್ರೆ ಬೀಪ್ ತಿನ್ನುತ್ತೇನೆಂದಾಗ, ಅವರ ತಾಯಿಗೆ ಸಿದ್ದರಾಮಯ್ಯನ ಮಾತು ಕೇಳಿ ಎಂಥ ಮಗನನ್ನು ಹೆತ್ತೆ ಎಂದು ನೋವಾಗಿರಬಹುದು ಎಂದರು.

ಇನ್ನು ರಾಷ್ಟ್ರ ಧ್ವಜದ ವಿನ್ಯಾಸದ ಬಗ್ಗೆ ಮಾತಾಡಿದ ಪ್ರಭಾಕರ್ ಅವರು , ಈ ದೇಶದವನ್ನ ಮತ್ತೆ ಕೇಸರಿಕರಣದತ್ತ ಕೊಂಡೊಯ್ಯುತ್ತಿದ್ದಾರೆ ಅನ್ನೋ ಮಾತು ಅನೇಕ ಬಾರಿ ಕೇಳಿದ್ದೇವೆ. ಕೇಸರಿಕರಣವಲ್ಲ, ಈ ದೇಶವೇ ಕೇಸರಿಯಾಗಿದೆ. ರಾಮನ ರಥದಲ್ಲಿ ಕೇಸರಿ ಧ್ವಜವೇ ಇತ್ತು. ಸ್ವಾತಂತ್ರ್ಯ ನಂತರ ದೇಶಕ್ಕೆ ಯಾವ ರೀತಿ ಧ್ವಜ ಇರಬೇಕೆಂದು ಸಮಿತಿ ರಚಿಸಲಾಗಿತ್ತು. ಸಮಿತಿ ನಿರ್ಧಾರದಂತೆ ಆಯತಾಕಾರದಲ್ಲಿ ಕೇಸರಿ ಧ್ವಜವಿರಬೇಕು. ಧ್ವಜದ ಮೂಲೆಯಲ್ಲಿ ನೀಲಿ ಚರಕ ಇರಬೇಕೆಂದಿತ್ತು ಎಂದು ತಿಳಿಸಿದರು.

ಆದರೆ, ಆಗಿನ ದೇಶದ್ರೋಹಿಗಳು ಕೇಸರಿ ಧ್ವಜವನ್ನೇ ಕತ್ತರಿಸಿದ್ರು. ಅದರಲ್ಲಿ ಹಸಿರು ಬಿಳಿ ಸೇರಿಸಿದ್ರು. ಅದರ ಪರಿಣಾಮ ಹಸಿರುವಾದಿ ಅಂತ ಹೇಳುವ ಜನ, ಹಸಿರನ್ನು ವಿಸ್ತರಿಸಬೇಕೆಂದು ಹೊರಟಿದ್ದರು. ಹಸಿರುವಾದಿಗಳು ಈ ದೇಶವನ್ನು ಮುಸ್ಲಿಂ ದೇಶವನ್ನು ಮಾಡಲು ಯೋಚಿಸುತ್ತಿದ್ದಾರೆ. ಬಾಬರ್ ದಾಳಿ ನಂತರದಲ್ಲಿ, ಸ್ವಾತಂತ್ರ್ಯದ ಬಳಿಕ ರಾಮಮಂದಿರ ಪುನರ್ ನಿರ್ಮಾಣ ಮಾಡುವಾಗ ನೆಹರು ಅದಕ್ಕೆ ವಿರೋಧಿಸಿದರು ಎಂದು ಕಿಡಿಕಾರಿದರು.

ನೆಹರು ವಂಶ ದೇಶಕ್ಕೆ ಮಾಡಿದಷ್ಟು ಅನ್ಯಾಯ ಮತ್ತ್ಯಾರು ಮಾಡಿಲ್ಲ. ನಿಮಗೆ ಕತ್ತರಿಸೋ ಹುಚ್ಚು, ನಮ್ದು ಜೋಡಿಸೋ ಕರ್ತವ್ಯ. ನಾವು ದುರ್ಬಲರು, ಷಂಡರಲ್ಲ. ಈದ್ ಮಿಲಾದ್ ವೇಳೆ ಪೊಲೀಸರಿದ್ದರೂ ತಲ್ವಾರ್ ತೋರಿಸಿದ್ರಿ. ತಲ್ವಾರ್ ಗೆ ತಲ್ವಾರ್​​ದಿಂದಲೇ ಉತ್ತರ ಕೊಡುವ ಶಕ್ತಿ ನಮಗೂ ಗೊತ್ತಿದೆ. ಮುಂದಿನ ವರ್ಷದೊಳಗಡೆ ರಾಮಮಂದಿರ ನಿರ್ಮಾಣ ವಾಗಬೇಕು ಎಂದರು. ಇದೇ ವೇಳೆ ಲವ್ ಜಿಹಾದ್, ಬುದ್ಧಿಜೀವಿಗಳ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
First published: