ಎಷ್ಟೋ ಬಾರಿ ನಮ್ಮ ಜನರಿಗೆ ಈ ರೈಲ್ವೆ ನಿಲ್ದಾಣದಲ್ಲಿರುವ (Railway Station) ಒಂದು ಪ್ಲಾಟ್ಫಾರ್ಮ್ ನಿಂದ (Railway Platform) ಇನ್ನೊಂದು ಬದಿಯಲ್ಲಿರುವ ಪ್ಲಾಟ್ಫಾರ್ಮ್ ಗೆ ಹೋಗೋದಕ್ಕೆ ಅಲ್ಲಿಯೇ ಸ್ವಲ್ಪ ದೂರದಲ್ಲಿರುವ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಿ, ಹಾಗೆಯೇ ಪ್ಲಾಟ್ಫಾರ್ಮ್ ಮೇಲಿಂದ ಕೆಳಕ್ಕೆ ರೈಲ್ವೆ ಹಳಿಗೆ (Railway Track) ಇಳಿದು ಮತ್ತೊಂದು ಬದಿಯಲ್ಲಿರುವ ಇನ್ನೊಂದು ಪ್ಲಾಟ್ಫಾರ್ಮ್ ಅನ್ನು ಹತ್ತಲು ಪ್ರಯತ್ನಿಸಬೇಡಿ ಅಂತ ಸಾವಿರ ಸಲ ಹೇಳಿದರೂ ಮತ್ತೆ ಅದನ್ನೇ ಮಾಡುವುದನ್ನು ನಾವು ನೋಡುತ್ತಲೇ ಇರುತ್ತೇವೆ.
ಹೀಗೆ ಜನರು ಬೇಗನೆ ಆ ಕಡೆಯಲ್ಲಿರುವ ಪ್ಲಾಟ್ಫಾರ್ಮ್ ಅನ್ನು ತಲುಪಿ ಬಿಡಬಹುದು ಅಂತ ರೈಲ್ವೆ ಹಳಿಗೆ ಇಳಿದು ಅನೇಕ ಸಲ ಅಪಘಾತದಲ್ಲಿ (Accident) ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವಂತಹ ಅನೇಕ ಘಟನೆಗಳು ನಡೆದಿವೆ.
ಈಗಾಗಲೇ ನಾವೆಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಈ ರೀತಿಯ ವಿಡಿಯೋಗಳು ಅನೇಕ ಸಲ ನೋಡಿರುತ್ತೇವೆ. ಆದರೂ ಸಹ ನಾವು ಆ ತಪ್ಪುಗಳಿಂದ ಪಾಠ ಕಲಿತಿರುವುದಿಲ್ಲ ಅಂತಾನೆ ಹೇಳಬಹುದು
ಕೂದಲೆಳೆ ಅಂತರದಲ್ಲಿ ಜೀವ ಉಳಿದಿರುವ ವಿಡಿಯೋಗಳು
ಅದೃಷ್ಟ ಚೆನ್ನಾಗಿದ್ದು, ಕೂದಲೆಳೆಯ ಅಂತರದಲ್ಲಿ ಕೆಲವು ಜನರು ರೈಲಿಗೆ ಸಿಕ್ಕಿ ಹಾಕಿಕೊಳ್ಳುವುದರಿಂದ ಬಚಾವ್ ಆಗಿರಬಹುದು. ಆದರೆ ಪ್ರತಿ ಬಾರಿ ಆ ಅದೃಷ್ಟ ನಮ್ಮ ಹಿಂದೆ ನಿಲ್ಲುವುದಿಲ್ಲ.
ಹಾಗಾಗಿ ರೈಲ್ವೆ ನಿಲ್ದಾಣಕ್ಕೆ ಹೋದಾಗ ಯಾವುದೇ ಕಾರಣಕ್ಕೂ ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗುವುದನ್ನು ಆದಷ್ಟು ಮಟ್ಟಿಗೆ ತಡೆದರೆ ಒಳ್ಳೆಯದು.
ಈ ಹಿಂದೆ ಸಹ ಎಷ್ಟೋ ಬಾರಿ ರೈಲ್ವೆ ಪ್ಲಾಟ್ಫಾರ್ಮ್ ನಿಂದ ರೈಲು ಹತ್ತುವಾಗ ಅಥವಾ ರೈಲು ಬರುವ ಮುಂಚೆ ಕಾಲು ಜಾರಿ ಅಥವಾ ಅವಸರದಲ್ಲಿ ರೈಲ್ವೆ ಹಳಿಗೆ ಬೀಳುವ ಜನರನ್ನು ಪ್ಲಾಟ್ಫಾರ್ಮ್ ನ ಮೇಲೆ ನಿಂತಿರುವಂತಹ ಜನರು ತಮ್ಮ ಕೈಯನ್ನು ನೀಡಿ ಅವರನ್ನು ಕಾಪಾಡಿದ ಘಟನೆಗಳನ್ನು ಸಹ ನಾವು ನೋಡಿದ್ದೇವೆ.
ತಾಯಿ-ಮಗ ಇಬ್ಬರು ಕೂದಲೆಳೆ ಅಂತರದಲ್ಲಿ ಗೂಡ್ಸ್ ರೈಲಿನಿಂದ ಪಾರು
ಕಲಬುರಗಿಯಲ್ಲಿ ನಡೆದ ಒಂದು ಘಟನೆಯಲ್ಲಿ ಒಬ್ಬ ಮಹಿಳೆ ಮತ್ತು ಅವಳ ಮಗ ಗೂಡ್ಸ್ ರೈಲಿನ ಅಡಿಯಲ್ಲಿ ಸಿಲುಕಿ ಹಾಕಿಕೊಳ್ಳುವ ಒಂದು ದುರ್ಘಟನೆಯಲ್ಲಿ ಕೂದಲೆಳೆಯ ಅಂತರದಲ್ಲಿ ಬಚಾವ್ ಆಗಿದ್ದಾರೆ.
ಇದನ್ನೂ ಓದಿ: Shootout At Bengaluru: ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು; ಬಿಲ್ಡರ್ ಮೇಲೆ ಫೈರಿಂಗ್
ತಾಯಿ ಮಗ ಇಬ್ಬರು ಪ್ಲಾಟ್ಫಾರ್ಮ್ ನಿಂದ ಕೆಳಕ್ಕೆ ಇಳಿದಿದ್ದಾರೆ ಮತ್ತು ಆ ತಕ್ಷಣಕ್ಕೆ ಗೂಡ್ಸ್ ರೈಲೊಂದು ವೇಗವಾಗಿ ಅದೇ ಹಳಿಯ ಮೇಲೆ ಬರುವುದನ್ನು ನೋಡಿದ ಇಬ್ಬರು ಪ್ಲಾಟ್ಫಾರ್ಮ್ ಮೇಲಕ್ಕೆ ಹತ್ತಲು ಅಷ್ಟೊಂದು ಸಮಯವಿರದ ಕಾರಣ ಅಲ್ಲೇ ಕೆಳಗೆ ಗೋಡೆಯ ಮರೆಯಲ್ಲಿ ಕುಳಿತುಕೊಂಡು ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.
ಈ ಇಬ್ಬರೂ ತಾಯಿ ಮತ್ತು ಮಗ ಒಂದು ಬದಿಯ ಪ್ಲಾಟ್ಫಾರ್ಮ್ ನಿಂದ ಕೆಳಕ್ಕೆ ಇಳಿದು ಇನ್ನೊಂದು ಬದಿಯಲ್ಲಿರುವ ಪ್ಲಾಟ್ಫಾರ್ಮ್ ಗೆ ಹಳಿಯ ಮೂಲಕ ನಡೆದುಕೊಂಡು ಹೋಗಿ ಹತ್ತಬೇಕೆಂಬ ಒಂದು ನಿರ್ಧಾರ ತೆಗೆದುಕೊಂಡಾಗ ಈ ಘಟನೆ ನಡೆದಿದೆ ನೋಡಿ.
ಕೊನೆಯ ಕ್ಷಣಕ್ಕೆ ಮಾಡಿದ ನಿರ್ಧಾರ ಅವರಿಬ್ಬರ ಜೀವ ಉಳಿಸಿತು
ತಾಯಿ-ಮಗ ಇಬ್ಬರು ಆ ರೈಲು ವೇಗವಾಗಿ ತಮ್ಮೆಡೆಗೆ ಬರುವುದನ್ನು ನೋಡಿದಾಗ, ಪ್ಲಾಟ್ಫಾರ್ಮ್ ಮೇಲಕ್ಕೆ ಹತ್ತಲು ಅವರ ಬಳಿ ಅಷ್ಟೊಂದು ಸಮಯ ಇರದೆ ಇದ್ದಾಗ ಅವರಿಬ್ಬರು ಅಲ್ಲಿಯೇ ಇರುವ ಗೋಡೆಯ ಪಕ್ಕದಲ್ಲಿ ಅವಿತುಕೊಂಡು ಕೂತರು ಮತ್ತು ಆ ಗೂಡ್ಸ್ ರೈಲು ಹಾದು ಹೋಗಲು ಕಾಯುತ್ತಿದ್ದರು.
ಇದನ್ನೂ ಓದಿ: Traffic Rules: ಟ್ರಾಫಿಲ್ ರೂಲ್ಸ್ ಬ್ರೇಕ್ ಮಾಡ್ತೀರಾ? 5 ಸೆಕೆಂಡ್ನಲ್ಲಿ ವಿಡಿಯೋ ಸಮೇತ ಬರುತ್ತೆ ಫೈನ್ ರಶೀದಿ!
ಪ್ಲಾಟ್ಫಾರ್ಮ್ ಗೋಡೆಯ ಬಳಿ ಕುಳಿತಿದ್ದ ಬಾಲಕ ತನ್ನ ತಾಯಿಯನ್ನು ತಬ್ಬಿಕೊಂಡು ಕೂತಿರುವ ಮತ್ತು ರೈಲು ಅವರ ಅಲ್ಲಿಂದ ವೇಗವಾಗಿ ಹಾದು ಹೋಗುವ ದೃಶ್ಯವಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗಿದೆ.
ತಾಯಿ ಮತ್ತು ಮಗ ಯಾವುದೇ ಗಾಯಗಳಿಲ್ಲದೆ ಅಪಘಾತದಿಂದ ಪಾರಾಗುತ್ತಿದ್ದಂತೆ ಪ್ಲಾಟ್ಫಾರ್ಮ್ ನಲ್ಲಿ ನೆರೆದಿದ್ದ ಪ್ರಯಾಣಿಕರೆಲ್ಲರೂ ನಿಟ್ಟುಸಿರು ಬಿಟ್ಟರು.‘
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ