ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ದರೋಡೆ; 10 ಅಂತರರಾಜ್ಯ ಕಳ್ಳರ ಬಂಧನ

ಬಂಧಿತ ಆರೋಪಿಗಳು ಹಣ್ಣಿನ ವ್ಯಾಪಾರ, ಲಾರಿ ಚಾಲಕ ಹಾಗೂ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದವರು. ಉತ್ತರ ಪ್ರದೇಶದಿಂದ ಬಂದಿರುವ ಆರೋಪಿಗಳು, ನಿಡಗುಂದಾ ಬ್ಯಾಂಕ್ ಕಳ್ಳತನ ಪ್ರಕರಣದ ನಂತರ ಬೀದರ್ ಜಿಲ್ಲೆಯ ಬೆನಕಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಕ್ಕದಲ್ಲಿ ಬೀಡು ಬಿಟ್ಟಿದ್ದರು.

ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳು

  • Share this:
ಕಲಬುರ್ಗಿ(ಜ.29):  ಇದು ಖತರ್ನಾಕ್ ಗ್ಯಾಂಗ್. ಹಗಲು ಹೊತ್ತಿನಲ್ಲಿ ಹೋಗಿ ನೋಡಿ ಬರೋದು. ಸ್ಕೆಚ್ ಹಾಕಿ ರಾತ್ರಿ ಕಳ್ಳತನ ಮಾಡಿಯೇ ಬಿಡೋದು. ಗ್ಯಾಸ್ ಸಿಲಿಂಡರ್, ಗ್ಯಾಸ್ ಕಟ್ಟರ್ ನೆರವಿನಿಂದ ತಿಜೋರಿಗಳನ್ನು ಒಡೆದು ನಗ, ನಾಣ್ಯ ದೋಚೋದು. ನಂತರ ಬೇರೆ ಪ್ರದೇಶಕ್ಕೆ ಎಸ್ಕೇಪ್ ಆಗೋದು. ಬ್ಯಾಂಕ್ ನಂತಹ ದೊಡ್ಡ ಕಳ್ಳತನಗಳನ್ನೇ ಮಾಡ್ತಿದ್ದ ಈ ಗ್ಯಾಂಗ್ ಕೊನೆಗೂ ಅಂದರ್ ಆಗಿದೆ. 10 ಜನ ಅಂತರ ರಾಜ್ಯ ದರೋಡೆಕೋರರನ್ನು ಹೆಡೆಮುರಿಗೆ ಕಟ್ಟುವಲ್ಲಿ ಕಲಬುರ್ಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕು ನಿಡಗುಂದ ಕರ್ನಾಟಕ ಬ್ಯಾಂಕ್ ಲೂಟಿ ಪ್ರಕರಣಕ್ಕೆ ಸಂಬಂಧಿಸಿ ಕಲಬುರ್ಗಿ ಪೊಲೀಸರು 10 ಜನ ಅಂತರ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಫಯಿಮ್ ಖಾನ್, ನೂರ ಸಲಿಮ್, ಐಹಿತ್ ಸ್ಯಾಮ್ ಪಠಾಣ, ಮಹ್ಮದ ದಾನೀಶ, ಮಹ್ಮದ ಆಗಾಜ್ ಖಾನ್, ವಾಹೀದ್ ಅಲಿ, ನಯುಮ್ ಖಾನ್, ಮುಜೀಬ್ ಖಾನ್, ಮಹ್ಮದ ಸಾರಿಮ್ ಹಾಗೂ ಇಂದ್ರಿಸ್ ಕಾಲೆಖಾನ್ ಎಂದು ಗುರುತಿಸಲಾಗಿದೆ.  ಬಂಧಿತರು ಉತ್ತರ ಪ್ರದೇಶ ಮೂಲದ ಬದಾಯು, ಕಕರಾಳ ಮತ್ತು ಬರೇಲಿಯಾಕ್ಕೆ ಸೇರಿದವರಾಗಿದ್ದಾರೆ. ಬಂಧಿತರಿಂದ 30 ಲಕ್ಷ ರೂ. ಮೌಲ್ಯದ ಒಂದು ಟ್ರಕ್, ಕದ್ದ ಹಣದಲ್ಲಿ ಖರೀದಿಸಲಾದ 7 ಲಕ್ಷ ಮೌಲ್ಯದ ಸ್ಕಾರ್ಪಿಯೋ ವಾಹನ, 5 ಲಕ್ಷ ಮೌಲ್ಯದ ಹೊಂಡಾ ಎಸೇಂಟ್ ವಾಹನ, 402 ಗ್ರಾಂ ಚಿನ್ನಾಭರಣ ಹಾಗೂ 20 ಸಾವಿರ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ.

Bangalore Crime: ಬೆಂಗಳೂರಿನಲ್ಲಿ ಹಾಡಹಗಲೇ ಲ್ಯಾಪ್​ಟಾಪ್ ಕಳ್ಳತನ; ಪಿಜಿ, ಬ್ಯಾಚುಲರ್​ ಮನೆಗಳೇ ಇವರ ಟಾರ್ಗೆಟ್

2010 ರ ಡಿಸೆಂಬರ್ 21ರಂದು ಚಿಂಚೋಳಿ ತಾಲೂಕಿನ ನಿಡಗುಂದಾದ ಕರ್ನಾಟಕ ಗ್ರಾಮೀಣ ಬ್ಯಾಂಕ್​ ಗೆ ಖದೀಮರು ಕನ್ನ ಹಾಕಿದ್ದರು. ಹಿಂದಿನ ಕಿಟಕಿಯಿಂದ ಒಳನುಗ್ಗಿದ್ದ ಕಳ್ಳರು ಗ್ಯಾಸ್ ಸಿಲಿಂಡರ್, ಗ್ಯಾಸ್ ಕಟ್ಟರ್ ಸಹಾಯದಿಂದ ಲಾಕರ್ ಕಟ್ ಮಾಡಿ ನಗ - ನಾಣ್ಯ ದೋಚಿದ್ದರು. ಲಾಕರ್​​ನಲ್ಲಿದ್ದ 1,481 ಗ್ರಾಂ ಚಿನ್ನಾಭರಣ ಹಾಗೂ 11 ಲಕ್ಷ ರೂ. ನಗದು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಆರೋಪಿಗಳ ಬಂಧನಕ್ಕೆ ಚಿಂಚೋಳಿ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಸಿನೀಮಿಯ ರೀತಿಯಲ್ಲಿ ಕಾರ್ಯಚರಣೆ ನಡೆಸಿರೋ ಪೊಲೀಸರು ಹತ್ತು ಜನ ಅಂತರ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೃತ್ಯದಲ್ಲಿ ಇನ್ನೂ ಎಂಟು ಜನ ಆರೋಪಿಗಳು ಭಾಗಿಯಾಗಿದ್ದು, ಅವರ ಬಂಧನಕ್ಕೆ ಜಾಲ ಬೀಸಿರೋದಾಗಿ ಕಲಬುರ್ಗಿ ಎಸ್.ಪಿ. ಸಿಮಿ ಮರಿಯಮ್ ಜಾರ್ಜ್ ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳು ಹಣ್ಣಿನ ವ್ಯಾಪಾರ, ಲಾರಿ ಚಾಲಕ ಹಾಗೂ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದವರು. ಉತ್ತರ ಪ್ರದೇಶದಿಂದ ಬಂದಿರುವ ಆರೋಪಿಗಳು, ನಿಡಗುಂದಾ ಬ್ಯಾಂಕ್ ಕಳ್ಳತನ ಪ್ರಕರಣದ ನಂತರ ಬೀದರ್ ಜಿಲ್ಲೆಯ ಬೆನಕಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಕ್ಕದಲ್ಲಿ ಬೀಡು ಬಿಟ್ಟಿದ್ದರು. ತಮ್ಮ ಊರಿನಿಂದ ಬಂದು ಬೇರೆ ಬೇರೆ ಪ್ರದೇಶಗಳಲ್ಲಿ ಸಂಚರಿಸಿ ದರೋಡೆಗೆ ಸ್ಕೆಚ್ ಹಾಕಿ, ಯಶಸ್ವಿಯಾಗಿ ಕಳ್ಳತನ ಮಾಡಿಕೊಂಡು ಹೋಗುತ್ತಿತ್ತು. ಸ್ಕೆಚ್ ಹಾಕಿ ಕಳ್ಳತನ ಮಾಡಿ ನಂತರ ಬೇರೆ ಪ್ರದೇಶಕ್ಕೆ ಪರಾರಿಯಾಗುತ್ತಿದ್ದರು.

ಅನುಮಾನಾಸ್ಪದವಾಗಿ ಬೀಡು ಬಿಟ್ಟಿದ್ದ ಈ ಗ್ಯಾಂಗ್ ನ ವಿಚಾರಣೆ ನಡೆಸಿ, ಲಾರಿಯ ತಪಾಸಣೆ ಮಾಡಿದಾಗ ಕಳ್ಳತನದ ಕೃತ್ಯ ಬಯಲಿಗೆ ಬಂದಿದೆ. ಈ ಹಿಂದೆಯೂ ಇವರ ಮೇಲೆ ವಿವಿಧ ದರೋಡೆ ಪ್ರಕರಣಗಳಿವೆ ಎಂದು ಸಿಮಿ ಮರಿಯಂ ಜಾರ್ಜ್ ತಿಳಿಸಿದ್ದಾರೆ. ಪೊಲೀಸರ ಕಾರ್ಯಾಚರಣೆಗೆ ಎಸ್.ಪಿ. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published by:Latha CG
First published: