ಲಂಚ ಸ್ವೀಕಾರ ಆರೋಪ ಸಾಬೀತು; ಡಿವೈಎಸ್ಪಿ ವಿಜಯಲಕ್ಷ್ಮಿಗೆ 4 ವರ್ಷ ಜೈಲು ಶಿಕ್ಷೆ

ಪ್ರಕರಣ ದಾಖಲಿಸಿಕೊಂಡಿದ್ದ ಕಲಬುರ್ಗಿ ಲೋಕಾಯುಕ್ತ ಸಿಬ್ಬಂದಿ, ಆರೋಪ ಪಟ್ಟಿಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಲೋಕಾಯುಕ್ತ ಪರ ಸರ್ಕಾರಿ ಅಭಿಯೋಜಕ ಅಶೋಕ್ ಚಾಂದಕವಟೆ ವಾದ ಮಂಡಿಸಿದ್ದರು. ವಾದ ವಿವಾದ ಆಲಿಸಿದ ನ್ಯಾಯಾಧೀಶರು ತಮ್ಮ ತೀರ್ಪನ್ನು ಪ್ರಕಟಿಸಿದ್ದಾರೆ. ಲಂಚ ಸ್ವೀಕಾರದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಡಿವೈಎಸ್ಪಿ ವಿಜಯಲಕ್ಷ್ಮಿ

ಡಿವೈಎಸ್ಪಿ ವಿಜಯಲಕ್ಷ್ಮಿ

  • Share this:
ಕಲಬುರ್ಗಿ (ಡಿ.09):  ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಡಿ.ವೈ.ಎಸ್.ಪಿ. ವಿಜಯಲಕ್ಷ್ಮಿ ಈಗ ಜೈಲು ಹಕ್ಕಿಯಾಗಿದ್ದಾರೆ. ಲಂಚ ಸ್ವೀಕಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಡಿ.ವೈ.ಎಸ್.ಪಿ. ವಿಜಯಲಕ್ಷ್ಮಿಗೆ 4 ವರ್ಷ ಸಜೆ ವಿಧಿಸಿ ಕಲಬುರ್ಗಿ ಜಿಲ್ಲಾ ವಿಶೇಷ ಸತ್ರ ನ್ಯಾಯಾಧೀಶ ಆರ್.ಜೆ.ಸತೀಶಸಿಂಗ್ ಅವರು ತೀರ್ಪು ನೀಡಿದ್ದಾರೆ.  ಶಿಕ್ಷೆಗೆ ಗುರಿಯಾಗಿರೋ ವಿಜಯಲಕ್ಷ್ಮಿ ಈ ಹಿಂದೆ ಶಹಾಬಾದ್ ನಗರ ಠಾಣೆ ಇನ್ಸಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. 2015ರ ಡಿಸೆಂಬರ್ ನಲ್ಲಿ ವಿಜಯಲಕ್ಷ್ಮಿ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.

ಶಹಾಬಾದ್ ತಾಲೂಕಿನ ದೇವನತೆಗನೂರು ಬಳಿಯ ಪೆಟ್ರೋಲ್ ಬಂಕ್ ನಲ್ಲಿ ವಾಹನಕ್ಕೆ ಡೀಸೆಲ್ ಹಾಕಿಸಲು ಹೋದ ಸಂದರ್ಭದಲ್ಲಿ ಬಂಕ್ ಸಿಬ್ಬಂದಿ ಜೊತೆಗೆ ರಾಜು ಎಂಬಾತ ಜಗಳವಾಡಿದ್ದ. ಈ ಹಿನ್ನೆಲೆಯಲ್ಲಿ ಬಂಕ್ ಮಾಲೀಕರು ರಾಜು ವಿರುದ್ಧ ಪ್ರಕರಣ ದಾಖಲಿಸಿದ್ದರು. ರಾಜುನನ್ನು ಬಂಧಿಸಿ ಟಾಟಾ ಸುಮೋ ಜಪ್ತಿ ಮಾಡಿಕೊಳ್ಳಲಾಗಿತ್ತು.

ನ್ಯಾಯಾಲಯದಿಂದ ಜಾಮೀನು ತಂದಿದ್ದ ರಾಜು ತನ್ನ ಟಾಟಾ ಸುಮೋ ಬಿಡಿಸಿಕೊಳ್ಳಲು ಪೊಲೀಸ್ ಠಾಣೆಗೆ ಬಂದಿದ್ದ. ಜಪ್ತಿ ಮಾಡಿದ್ದ ಟಾಟಾ ಸುಮೋ ಬಿಡುಗಡೆ ಮಾಡಲು ಇನ್ಸಪೆಕ್ಟರ್ ವಿಜಯಲಕ್ಷ್ಮಿ 25 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದಳು. ಈ ವಿಷಯವನ್ನು ಲೋಕಾಯುಕ್ತರ ಗಮನಕ್ಕೆ ತಂದಿದ್ದ ರಾಜು, ಲಂಚದ ಹಣ ಕೊಡಲು ಮುಂದಾಗಿದ್ದ. ವಿಜಯಲಕ್ಷ್ಮಿ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ದಾಳಿ ಮಾಡಿದ್ದ ಲೋಕಾಯುಕ್ತ ಸಿಬ್ಬಂದಿ ಹಣದ ಸಮೇತ ವಶಕ್ಕೆ ಪಡೆದಿದ್ದರು.

ಚುನಾವಣೆ ಸಂದರ್ಭದಲ್ಲೂ ಬಂದೂಕು ಇಟ್ಟುಕೊಳ್ಳಲು ಅವಕಾಶ ಕೊಡಿ; ಪೊಲೀಸರಿಗೆ ಕಾಫಿ ಬೆಳೆಗಾರರ ಮನವಿ

ಪ್ರಕರಣ ದಾಖಲಿಸಿಕೊಂಡಿದ್ದ ಕಲಬುರ್ಗಿ ಲೋಕಾಯುಕ್ತ ಸಿಬ್ಬಂದಿ, ಆರೋಪ ಪಟ್ಟಿಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಲೋಕಾಯುಕ್ತ ಪರ ಸರ್ಕಾರಿ ಅಭಿಯೋಜಕ ಅಶೋಕ್ ಚಾಂದಕವಟೆ ವಾದ ಮಂಡಿಸಿದ್ದರು. ವಾದ ವಿವಾದ ಆಲಿಸಿದ ನ್ಯಾಯಾಧೀಶರು ತಮ್ಮ ತೀರ್ಪನ್ನು ಪ್ರಕಟಿಸಿದ್ದಾರೆ. ಲಂಚ ಸ್ವೀಕಾರದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಎರಡು ಸೆಕ್ಷನ್ ಗಳ ಅಡಿ ಶಿಕ್ಷೆ ವಿಧಿಸಲಾಗಿದೆ. ಒಂದು ಸೆಕ್ಷನ್ ನ ಅಡಿಯಲ್ಲಿ ಮೂರು ವರ್ಷ ಮತ್ತು ಮತ್ತೊಂದು ಸೆಕ್ಷನ್ ಅಡಿ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ 10 ಸಾವಿರ ರೂಪಾಯಿ ದಂಡ ವಿಧಿಸಿ ಜಿಲ್ಲಾ ವಿಶೇಷ ಸತ್ರ ನ್ಯಾಯಾಧೀಶ ಆರ್.ಜೆ.ಸತೀಶಸಿಂಗ್ ತೀರ್ಪು ನೀಡಿದ್ದಾರೆ.

ಸದ್ಯ ವಿಜಯಲಕ್ಷ್ಮಿ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ(ಸಿ.ಎರ್.ಇ.ಸೆಲ್) ದಲ್ಲಿ ಡಿ.ವೈ.ಎಸ್.ಪಿ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತೀರ್ಪಿನ ನಂತರ ವಿಜಯಲಕ್ಷ್ಮಿಯನ್ನು ಪೊಲೀಸರು ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ. ಲಂಚ ಸ್ವೀಕಾರ ಆರೋಪದ ಅಡಿ ಜಿಲ್ಲೆಯಲ್ಲಿ ಹಿರಿಯ ಅಧಿಕಾರಿಯೊಬ್ಬರು ಶಿಕ್ಷೆಗೆ ಗುರಿಯಾದಂತಾಗಿದೆ.
Published by:Latha CG
First published: