• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ನಾಡೋಜ, ಹಿರಿಯ ಕವಿ ಚೆನ್ನವೀರ ಕಣವಿಗೆ ಗೌರವ ಡಾಕ್ಟರೇಟ್​​​​; ಕಲಬುರಗಿ ಕೇಂದ್ರಿಯ ವಿವಿಯಿಂದ ಪ್ರದಾನ

ನಾಡೋಜ, ಹಿರಿಯ ಕವಿ ಚೆನ್ನವೀರ ಕಣವಿಗೆ ಗೌರವ ಡಾಕ್ಟರೇಟ್​​​​; ಕಲಬುರಗಿ ಕೇಂದ್ರಿಯ ವಿವಿಯಿಂದ ಪ್ರದಾನ

ನಾಡೋಜ ಚೆನ್ನವೀರ ಕಣವಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ದೃಶ್ಯ

ನಾಡೋಜ ಚೆನ್ನವೀರ ಕಣವಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ದೃಶ್ಯ

ವಿಶ್ವವಿದ್ಯಾಲಯವು ಇದುವರೆಗೆ ದೇಶದ 13 ಜನ ಸಾಧಕರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿದೆ.

  • Share this:

ಧಾರವಾಡ(ಸೆ.29): ಚೆಂಬೆಳಕಿನ ಕವಿ ನಾಡೋಜ ಹಿರಿಯ ಕವಿ ಚೆನ್ನವೀರ ಕಣವಿ ಅವರಿಗೆ ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ಧಾರವಾಡದ ಚೆನ್ನವೀರ ಕಣವಿ ಅವರ ಮನೆಗೆ ಆಗಮಿಸಿ ವಿಶ್ವವಿದ್ಯಾಲಯದ 5 ನೇ ಘಟಿಕೋತ್ಸವದ ಅಂಗವಾಗಿ ಘೋಷಿಸಲ್ಪಟ್ಟಿದ್ದ ಗೌರವ ಡಾಕ್ಟರೇಟ್ ನ್ನು ಕುಲಪತಿ ಪ್ರೊ. ಎಚ್.ಎಮ್. ಮಹೇಶ್ವರಯ್ಯ ಪ್ರದಾನ ಮಾಡಿದರು. ವಿಶ್ವವಿದ್ಯಾಲಯವು ಇದುವರೆಗೆ ದೇಶದ 13 ಜನ ಸಾಧಕರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿದೆ. ಈ ರಾಷ್ಟ್ರಮಟ್ಟದ ವಿಶ್ವವಿದ್ಯಾಲಯವು ಈ ಬಾರಿ ನೀಡಿರುವ 5 ಜನ ಗೌರವ ಡಾಕ್ಟರೇಟ್ ಪುರಸ್ಕೃತರಲ್ಲಿ ಕನ್ನಡಿಗರಿಗೆ ಹೆಚ್ಚು ಮನ್ನಣೆಯನ್ನು ಗೌರವಾನ್ವಿತ ರಾಷ್ಟ್ರಪತಿಗಳು ನೀಡಿರುವುದು ಅಭಿಮಾನದ ಸಂಗತಿಯಾಗಿದೆ ಎಂದು ಕುಲಪತಿ ಮಹೇಶ್ವರಯ್ಯ ಸ್ಮರಿಸಿದರು.


ಸ್ಯಾಂಡಲ್​​ವುಡ್​​ ಡ್ರಗ್ಸ್​ ಕೇಸ್​​ - ದೊಡ್ಡ ತಲೆಗೆ ಬಲೆ ಬೀಸಿದ ಸಿಸಿಬಿ ಪೊಲೀಸ್​​​​


ಪದವಿ ಸ್ವೀಕರಿಸಿ ನಾಡೋಜ ಡಾ.ಚೆನ್ನವೀರ ಕಣವಿ ಮಾತನಾಡಿ, ಕೇಂದ್ರೀಯ ವಿಶ್ವವಿದ್ಯಾಲಯ ನೀಡಿರುವ ಗೌರವ ಡಾಕ್ಟರೇಟ್ ಪದವಿಯನ್ನು ಸಮಸ್ತ ಸಹೃದಯಿ ಕನ್ನಡಿಗರಿಗೆ ಸಮರ್ಪಣೆ ಮಾಡಿದ್ದೇನೆ. ಈ ಪದವಿಯು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವದಷ್ಟೇ ಸಮಾನವಾಗಿದೆ ಎಂದು ವಿನಯ ಪೂರ್ವಕವಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿ, ‘ಅಭಿವಂದನೆ’ ಎಂದರೆ ಗೌರವ ಪೂರ್ವಕ ನಮಸ್ಕಾರ ಎಂಬ ಕವಿತೆ ವಾಚಿಸಿದರು.


ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ, ವಿದ್ವಾಂಸ  ಪ್ರೊ. ಜಿ.ಎಸ್.ಅಮೂರ ಅವರು ನಿಧನರಾಗಿರುವುದನ್ನು ನೆನೆದು ನುಡಿನಮನ ಸಲ್ಲಿಸಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು