ಕಲಬುರ್ಗಿ(ಆ.15): ಈಗ ಕಾಂಗ್ರೆಸ್ ಶಾಸಕನ ಮನೆಗೆ ಬೆಂಕಿ ಹಚ್ಚಿದ್ದಾರೆ. ಮುಂದೆ ನಿಮ್ಮ ಮನೆಗಳಿಗೂ ಬೆಂಕಿ ಹಚ್ಚುತ್ತಾರೆ ಎಂದು ಆಂದೋಲಶ್ರೀ ಹಾಗೂ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮಿ ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಗಳ ಗಲಭೆ ಖಂಡಿಸಿರುವ ಆಂದೋಲಶ್ರೀ, ಇದು ಆಕಸ್ಮಿಕವಾಗಿ ನಡೆದದ್ದಲ್ಲ ಎಂದಿದ್ದಾರೆ. ವ್ಯವಸ್ಥಿತ ಪಿತೂರಿಯ ಫಲ ಈ ದಂಗೆಯಾಗಿದೆ. ಮೂರು-ನಾಲ್ಕು ದಿನ ಪ್ಲಾನ್ ರೂಪಿಸಿ ಮಾಡಿರುವ ಘಟನೆ ಇದಾಗಿದೆ. ಆದರೆ ಇದನ್ನು ತಡೆಯುವ ಶಕ್ತಿ ಬಿಜೆಪಿ ಸರ್ಕಾರಕ್ಕೆ ಇರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಗೆ ಬಹುಮತವಿದ್ದರೂ ಏನು ಪ್ರಯೋಜನ ಎಂದು ಕಿಡಿಕಾರಿರುವ ಶ್ರೀಗಳು, ಮತಾಂಧರ ವಿಷಯದಲ್ಲಿ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಮಾದರಿಯಲ್ಲಿ ಆಸ್ತಿ-ಪಾಸ್ತಿಯ ಹಾನಿಯನ್ನು ಮತಾಂಧರು, ಗಲಭೆಕೋರರಿಂದ ತುಂಬಿಸಿಕೊಳ್ಳೋ ಕಾನೂನು ಜಾರಿಗೆ ತರಬೇಕು. ಇಲ್ಲದಿದ್ದರೆ ಈಗ ಕಾಂಗ್ರೆಸ್ ನ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿದಂತೆ, ನಾಳೆ ನಿಮ್ಮ ಮನೆಗಳಿಗೂ ಬೆಂಕಿ ಹಚ್ಚೋದು ಗ್ಯಾರೆಂಟಿ ಎಂದು ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.
Karnataka Politics: ಶಿರಾ ಕ್ಷೇತ್ರದಲ್ಲಿ ಶುರುವಾಯ್ತು ರಾಜಕೀಯ ಮೇಲಾಟ
ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿರ್ಬಂಧಕ್ಕೆ ಆಕ್ರೋಶ
ಕೊರೋನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿರೋದಕ್ಕೆ ಆಂದೋಲಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ಮನೆಗಳಲ್ಲಿ ಗಣೇಶ ಚತುರ್ಥಿ ಆಚರಿಸುವಂತೆ ಸೂಚಿಸಿದರೆ ಹೇಗಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ