• Home
  • »
  • News
  • »
  • state
  • »
  • Kalaburagi News: ಕಲಬುರಗಿಯಲ್ಲಿ ಹೈ ಅಲರ್ಟ್; ಪೊಲೀಸರ ಮೇಲೆ ದಾಳಿ ನಡೆಸಿದ ಗಾಂಜಾ ದಂಧೆಕೋರರರು, CPI ಗಂಭೀರ

Kalaburagi News: ಕಲಬುರಗಿಯಲ್ಲಿ ಹೈ ಅಲರ್ಟ್; ಪೊಲೀಸರ ಮೇಲೆ ದಾಳಿ ನಡೆಸಿದ ಗಾಂಜಾ ದಂಧೆಕೋರರರು, CPI ಗಂಭೀರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಾಗರಗಾ ಕ್ರಾಸ್ ಹತ್ತಿರದ ಮೆಹಬೂಬ್ ನಗರದಲ್ಲಿರೋ ಎಜಾಜ್ ಅಲಿ ಮನೆ ಮೇಲೆ ದಾಳಿ ನಡೆಸಿದ್ದ NIA ಅಧಿಕಾರಿಗಳು 14 ಲಕ್ಷ ರೂ. ನಗದು, 17 ಮೊಬೈಲ್, ಇತರೆ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

  • Share this:

ಬಂಧಿತ ಕಲಬುರಗಿ PFI ಜಿಲ್ಲಾಧ್ಯಕ್ಷ ಎಜಾಜ್ (PFI District President) ಎಂಬಾತನನ್ನು ಎನ್​ಐಎ ತಂಡ (NIA Team) ಬೆಂಗಳೂರಿಗೆ (Bengaluru) ಕರೆದೊಯ್ದಿದೆ. ಈ ಹಿನ್ನೆಲೆ ಕಲಬುರಗಿಯಲ್ಲಿ ಪೊಲೀಸರು (Kalaburagi Police) ಹೈ ಅಲರ್ಟ್ ಘೋಷಿಸಿದ್ದಾರೆ. ಮುಂದಿನ ಎರಡು ದಿನ ನಗರದಲ್ಲಿ ಪೊಲೀಸರ ಹದ್ದಿನ ಕಣ್ಗಾವಲು ಇರಲಿದೆ. ನಗರದ ಜಗತ್ ವೃತ್ತ, ಮುಸ್ಲಿಂ ಚೌಕ್, MSK ಮಿಲ್, ದರ್ಗಾ ಸೇರಿದಂತೆ ಹಲವೆಡೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕೇರಳ ಗಡಿಯಲ್ಲಿ ದಾಳಿ ನಡೆಸಿ PFI ರಾಜ್ಯ ಖಜಾಂಚಿ ಕಲಬುರಗಿ ‌ನಿವಾಸಿ ಶಾಹೀದ್ ನಾಸೀರ್ ಎಂಬಾತನನ್ನು ಬಂಧಿಸಲಾಗಿತ್ತು


ಹಾಗರಗಾ ಕ್ರಾಸ್ ಹತ್ತಿರದ ಮೆಹಬೂಬ್ ನಗರದಲ್ಲಿರೋ ಎಜಾಜ್ ಅಲಿ ಮನೆ ಮೇಲೆ ದಾಳಿ ನಡೆಸಿದ್ದ NIA ಅಧಿಕಾರಿಗಳು 14 ಲಕ್ಷ ರೂ. ನಗದು, 17 ಮೊಬೈಲ್, ಇತರೆ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.


ಗಾಂಜಾ ದಂಧೆಕೋರರಿಂದ ಪೊಲೀಸರ ಮೇಲೆ ದಾಳಿ


ಗಾಂಜಾ ದಂಧೆಕೋರರು ಪೊಲೀಸರ ಮೇಲೆ  ಮಾರಣಾಂತಿಕ ದಾಳಿ ನಡೆಸಿದ್ದು, ಕಲಬುರಗಿ ಜಿಲ್ಲಾ ಗ್ರಾಮೀಣ ಠಾಣೆ ಸಿಪಿಐ ಶ್ರೀಮಂತ್ ಇಲ್ಲಾಳ ಗಂಭೀರವಾಗಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಶ್ರೀಮಂತ್ ಇಲ್ಲಾಳ್ ಅವರ ತಲೆ, ಮುಖ ಮತ್ತು ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಸದ್ಯ ಶ್ರೀಮಂತ್ ಇಲ್ಲಾಳ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


Kalaburagi PFI leader shifted to bengaluru mob attacks on police team mrq
ಸಾಂದರ್ಭಿಕ ಚಿತ್ರ


ಕೆಲ ದಿನಗಳ ಹಿಂದೆ ಗಾಂಜಾ ದಂಧೆಕೋರ ಸಂತೋಷ್ ಎಂಬಾತನನ್ನ ಪೊಲೀಸರು ಬಂಧಿಸಿದ್ದರು. ಆರೋಪಿ ನೀಡಿದ ಮಾಹಿತಿ ಆಧರಿಸಿ ಗಾಂಜಾ ದಂಧೆಯ ಮೂಲ ಭೇಧಿಸಲು ಶುಕ್ರವಾರ ಮಧ್ಯಾಹ್ನ ಸಿಪಿಐ ಶ್ರೀಮಂತ್ ಇಲ್ಲಾಳ ನೇತೃತ್ವದ 10 ಸಿಬ್ಬಂದಿಯ ತಂಡ ಮಹಾರಾಷ್ಟ್ರಕ್ಕೆ ಹೋಗಿತ್ತು.


ಇದನ್ನೂ ಓದಿ: Bengaluru: ರಾಜ್ಯದಲ್ಲಿ ಜಾರಿಗೆ ಬರಲಿದೆ ಗುಜರಿ ನೀತಿ; ಸ್ಕ್ರ್ಯಾಪಿಂಗ್ ಪಾಲಿಸಿ ಬಗ್ಗೆ ಗೊತ್ತಿರಬೇಕಾದ ವಿಷಯ


ಗಾಳಿಯಲ್ಲಿ ಗುಂಡು ಹಾರಿಸಿದ್ರೂ ಕಟ್ಟಿಗೆಗಳಿಂದ ದಾಳಿ


ಶುಕ್ರವಾರ ರಾತ್ರಿ ಸುಮಾರು  9 ಗಂಟೆಗೆ ಗಾಂಜಾ ಬೆಳೆಯುವ ಹೊಲಗಳಿಗೆ ಪೊಲೀಸರು ತೆರಳುತ್ತಿದ್ದಂತೆ ಸುಮಾರು 30 ರಿಂದ 40 ಜನ ದಂಧೆಕೋರರು ಕಟ್ಟಿಗೆಗಳಿಂದ ದಾಳಿ ನಡೆಸಲು ಮುಂದಾಗಿದ್ದಾರೆ. ದಾಳಿ ಮಾಡುತ್ತಿದ್ದಂತೆ ಸಿಪಿಐ ಶ್ರೀಮಂತ್ ಇಲ್ಲಾಳ ಗಾಳಿಯಲ್ಲಿ ಗುಂಡು ಹಾರಿಸಿದ್ದರು ಎನ್ನಲಾಗಿದೆ. ಆದ್ರೂ ಗಾಂಜಾ ದಂಧೆಕೋರರು ಪೊಲೀಸರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾರೆ.


ಗಾಂಜಾ ಗ್ಯಾಂಗ್ ದಾಳಿಯಿಂದ ಪೊಲೀಸರು ತಪ್ಪಿಸಿಕೊಂಡು ಬಂದಿದ್ದಾರೆ. ರಾತ್ರಿ ಸುಮಾರು 2:30 ರ ವೇಳೆಗೆ ಶ್ರೀಮಂತ್ ಇಲ್ಲಾಳ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


ಮಕ್ಕಳ ಕಳ್ಳರೆಂದು ಮಹಿಳೆಯರನ್ನು ಥಳಿಸಿದ ಗ್ರಾಮಸ್ಥರು


ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಗ್ರಾಮದಲ್ಲಿ ಮಕ್ಕಳ ಕಳ್ಳರೆಂದು ಮಹಿಳೆಯರಿಗೆ ಥಳಿಸಲಾಗಿದೆ. ತೆಲಂಗಾಣದ ಕೊತ್ಲಾಪುರ ಗ್ರಾಮದಿಂದ ಪೋಲಕಪಳ್ಳಿ ಗ್ರಾಮದ ಸಂಬಂಧಿಕರ ಮನೆಗೆ ಮಹಿಳೆಯರು ಬಂದಿದ್ದರು. ಈ ವೇಳೆ ಮಕ್ಕಳ ಕಳ್ಳರೆಂದು ಭಾವಿಸಿ ಥಳಿಸಲಾಗಿದೆ. ತೀವ್ರ ವಿಚಾರಣೆ ನಂತರ ತೆಲಂಗಾಣದ ಮಹಿಳೆಯರನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


Kalaburagi PFI leader shifted to bengaluru mob attacks on police team mrq
ಸಾಂದರ್ಭಿಕ ಚಿತ್ರ


ಇದನ್ನೂ ಓದಿ:  Yadagiri: ಕನ್ನಡಿಗನಿಗೆ AIIMS ಪಟ್ಟ: ದೆಹಲಿಯ ಏಮ್ಸ್ ನಿರ್ದೇಶಕರಾಗಿ ಯಾದಗಿರಿಯ ಶ್ರೀನಿವಾಸ್ ಆಯ್ಕೆ


ಪೊಲೀಸ್ ಪೇದೆಗಳಿಬ್ಬರು ಸಸ್ಪೆಂಡ್


ಮರಳು ಸಾಗಾಣೆಗೆ ಸಂಬಂಧಿಸಿದಂತೆ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರ ಬೆಲೆಗೆ ಬಿದ್ದಿದ ಜೇವರ್ಗಿ ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಿ (Police Constable Suspend) ಕಲಬುರಗಿ SP ಇಶಾ ಪಂತ್ ಆದೇಶ ಹೊರಡಿಸಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆ ಪೇದೆಗಳಾದ ಶಿವರಾಯ್ ಅರಳಗುಂಡಗಿ ಹಾಗೂ ಅವ್ವಣ್ಣ ಎಂಬವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸದ್ಯ ಇಬ್ಬರು ಪೇದೆಗಳಿಗೆ ನ್ಯಾಯಾಲಯ ಅಕ್ಟೋಬರ್ 6ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

Published by:Mahmadrafik K
First published: