ಬೆಂಗಳೂರು: ಬಜೆಟ್ (Union Budget 2023) ವಿಚಾರವಾಗಿ ಕುತೂಹಲಗಳು ಹೆಚ್ಚಿರುವ ಮಧ್ಯೆದಲ್ಲಿಯೇ ರೈಲ್ವೆಗೆ (Railway Budget) ಸಂಬಂಧಿಸಿದಂತೆ ಕೇಂದ್ರ (Central Government) ಕರ್ನಾಟಕಕ್ಕೆ (Karnataka) ಒಂದೊಳ್ಳೆ ಬಂಪರ್ ನೀಡಬಹುದಾ ಎಂದು ರಾಜ್ಯದ ಜನತೆ ನಿರೀಕ್ಷಿಸುತ್ತಿದ್ದಾರೆ. 2023-24ಕ್ಕೆ ಯೂನಿಯನ್ ಬಜೆಟ್‌ನಲ್ಲಿ ಕಲಬುರಗಿ (Kalaburagi) ನಿವಾಸಿಗಳು ವಿಭಾಗೀಯ ಸ್ಥಾನಮಾನಕ್ಕಾಗಿ ಬಜೆಟ್ ಅನ್ನು ಎದುರು ನೋಡುತ್ತಿದ್ದರೆ ಇತ್ತ, ಮೈಸೂರು (Mysuru) ಜಿಲ್ಲೆಯ ಜನ ಚಾಲ್ತಿಯಲ್ಲಿರುವ ಯೋಜನೆಗಳಿಗೆ ಕೇಂದ್ರ ಹಣಕಾಸನ್ನು ಬಿಡುಗಡೆ ಮಾಡುತ್ತಾ ಎಂದು ಕಾಯುತ್ತಿದ್ದಾರೆ. ಹೀಗೆ ರೈಲ್ವೆಗೆ ಸಂಬಂಧಿಸಿದಂತೆ ಹಲವಾರು ಯೋಜನೆಗಳಿಗೆ ಕೇಂದ್ರ ಹಣಕಾಸು ನೆರವು ನೀಡಲಿ ಈ ಮೂಲಕ 2023-24 ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಗಿಫ್ಟ್ ನೀಡಲಿ ಎಂದು ಜನ ಆಶಿಸುತ್ತಿದ್ದಾರೆ.
ರೈಲ್ವೆ ಯೋಜನೆಗಳಿಗೆ ಕೇಂದ್ರ ಹೆಚ್ಚಿನ ಹಣ ನೀಡುವ ಭರವಸೆ
ಕರ್ನಾಟಕ ರೈಲು ಬಳಕೆದಾರರ ನೆಟ್‌ವರ್ಕ್ ಎಂಬ ಆನ್‌ಲೈನ್ ಗ್ರೂಪ್ ಅನ್ನು ಮುನ್ನಡೆಸುತ್ತಿರುವ ಮೈಸೂರಿನ ರೈಲ್ವೆ ಕಾರ್ಯಕರ್ತ ಯೋಗೇಂದ್ರ ಎಸ್, ರಾಜ್ಯದಲ್ಲಿ ನಡೆಯುತ್ತಿರುವ ಯೋಜನೆಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಹಣವನ್ನು ನೀಡುವ ಭರವಸೆ ಇದೆ ಎಂದು ಹೇಳಿದರು.
ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್‌ನಲ್ಲಿ ವಿಲೀನಗೊಳಿಸಿದಾಗಿನಿಂದ ಹೊಸ ರೈಲುಗಳನ್ನು ಘೋಷಿಸದೇ ಯೋಜನೆಗಳಿಗೆ ಮೀಸಲಿಡುತ್ತಿದ್ದಾರೆ.
ಈಗ ರಾಜ್ಯ ಸರ್ಕಾರವು ಭೂಸ್ವಾಧೀನ ಮತ್ತು ನಿರ್ಮಾಣ ಕಾರ್ಯಕ್ಕಾಗಿ ಅದರ ವೆಚ್ಚವನ್ನು ಹಂಚಿಕೊಳ್ಳಲು ಸಿದ್ಧವಾಗಬೇಕು ಎಂದು ಯೋಗೇಂದ್ರ ಎಸ್ ಹೇಳಿದರು.
ಹೊಸಪೇಟೆ-ದಾವಣಗೆರೆ ಮಾರ್ಗದ ವಿದ್ಯುದ್ದೀಕರಣ
ಮೈಸೂರು ವಿಭಾಗೀಯ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿ (ಆರ್‌ಯುಸಿಸಿ) ಸದಸ್ಯ ರೋಹಿತ್ ಎಸ್ ಜೈನ್, ಈ ಬಗ್ಗೆ ಮಾತನಾಡಿ ಹೊಸಪೇಟೆ-ದಾವಣಗೆರೆ ಮಾರ್ಗದ ವಿದ್ಯುದ್ದೀಕರಣ ಮತ್ತು ಇತರ ಮಾರ್ಗಗಳ ವಿದ್ಯುದ್ದೀಕರಣಕ್ಕೆ ಇನ್ನೂ ಹಣದ ಅಗತ್ಯವಿದೆ. ಹೀಗಾಗಿ ಬಜೆಟ್‌ನಲ್ಲಿ ಇದರ ಬಗ್ಗೆ ಉಲ್ಲೇಖಿಸಿದರೆ ಉತ್ತಮವಾಗಿರುತ್ತಿತ್ತು ಎಂದು ಹೇಳಿದರು.
ಪ್ಯಾಸೆಂಜರ್ ರೈಲು ಹೆಚ್ಚಿಸುವ ನಿರೀಕ್ಷೆ
ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ 90% ಮಾರ್ಗವನ್ನು ದ್ವಿಗುಣಗೊಳಿಸಲಾಗಿದ್ದರೂ, ನಾವು ಕೇವಲ 10 ಜೋಡಿ ರೈಲುಗಳನ್ನು ಹೊಂದಿದ್ದೇವೆ. ಆದರೆ ಮುಂಬೈ ಮತ್ತು ಅಹಮದಾಬಾದ್ ಮತ್ತು 90% ದ್ವಿಗುಣಗೊಳಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ, ಇದರಿಂದಾಗಿ ಅಲ್ಲಿ ದಿನಕ್ಕೆ 25 ಜೋಡಿ ರೈಲುಗಳು ಬರುತ್ತಿವೆ. ಗೂಡ್ಸ್ ರೈಲುಗಳ ಬದಲಿಗೆ ಹೆಚ್ಚಿನ ಪ್ಯಾಸೆಂಜರ್ ರೈಲುಗಳನ್ನು ಓಡಿಸಲು ರೈಲ್ವೆ ಸಚಿವಾಲಯ ಯೋಜಿಸಬೇಕು.
ರೈಲುಗಳಿಗೆ ವಿದ್ಯುತ್ ವಿತರಣೆಗಾಗಿ ಹೆಚ್ಚಿನ ಟ್ರಾಕ್ಷನ್ ಸಬ್‌ಸ್ಟೇಷನ್‌ಗಳಿಗೆ (ಟಿಎಸ್‌ಎಸ್) ಹಣವನ್ನು ಘೋಷಿಸಬೇಕು ಎಂದು ರೋಹಿತ್ ಎಸ್ ಜೈನ್ ತಿಳಿಸಿದರು.
ಹೊಸ ಘೋಷಣೆ ಬದಲು ಹಳೇ ಯೋಜನೆಗಳನ್ನು ಸಕಾರಗೊಳಿಸಿ
ಈ ಬಗ್ಗೆ ಹೆಚ್ಚಿನ ಅಭಿಪ್ರಾಯ ವ್ಯಕ್ತಪಡಿಸಿದ ರೋಹಿತ್, ಹೊಸ ಘೋಷಣೆಗಳನ್ನು ಕೈಗೆತ್ತಿಕೊಳ್ಳುವ ಬದಲು ದಾವಣಗೆರೆ ತುಮಕೂರು, ಧಾರವಾಡ-ಬೆಳಗಾವಿ, ಗದಗ-ಯಲವಿಗಿಗೆ ಸೇವೆ ಒದಗಿಸುವ ಬಾಕಿ ಇರುವ ಯೋಜನೆಗಳ ಕಾಮಗಾರಿ ಆರಂಭಿಸಬೇಕು. ರಾಜಧಾನಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿರುವ ಎಸ್‌ಡಬ್ಲ್ಯುಆರ್ ವಲಯ ಪ್ರಧಾನ ಕಚೇರಿಯನ್ನು ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ರೈಲು ಸಂಪರ್ಕ ಕಲ್ಪಿಸಬೇಕು," ಎಂದರು.
ಕಲಬುರಗಿ ಜಿಲ್ಲೆಯ ಆಶಯ ಏನು?
ಕಲಬುರಗಿಯ ರೈಲ್ವೆ ಹೋರಾಟಗಾರ ಸುನೀಲ್ ಕುಲಕರ್ಣಿ, ಕಲಬುರಗಿ ವಿಭಾಗದಲ್ಲಿ ಆಡಳಿತಾತ್ಮಕ ಮೂಲಸೌಕರ್ಯಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು 2022 ರ ಬಜೆಟ್‌ನಲ್ಲಿ 1,000 ಕೋಟಿ ರೂ.ಗಳನ್ನು ಘೋಷಿಸಿದೆ.
ಈ ವರ್ಷವಾದರೂ ಕಲಬುರಗಿಯನ್ನು ರೈಲ್ವೇ ವಿಭಾಗವನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಬೆಂಗಳೂರಿಗೆ ಪ್ರತಿನಿತ್ಯ ರೈಲು ಸೇರಿ ಹಲವು ಬೇಡಿಕೆಗಳು ಇವೆ ಎಂದರು.
ಕೇಂದ್ರದಿಂದ ಹುಬ್ಬಳ್ಳಿ ಜನ ಏನನ್ನು ನಿರೀಕ್ಷಿಸುತ್ತಿದ್ದಾರೆ?
ಇನ್ನೂ ಹುಬ್ಬಳ್ಳಿ ವಲಯದ ಆರ್‌ಯುಸಿಸಿ ಸದಸ್ಯ ಮಹೇಂದ್ರ ಸಿಂಘಿ, ಹುಬ್ಬಳ್ಳಿ ಕಾರ್ಯಾಗಾರವನ್ನು ಬಲಪಡಿಸಲು ದೊಡ್ಡ ಪ್ಯಾಕೇಜ್ ಮಂಜೂರು ಮಾಡುವಂತೆ ಮನವಿ ಮಾಡಿದರು. ರೈಲಿನ ಕೋಚ್‌ಗಳು ಮತ್ತು ಇಂಜಿನ್‌ಗಳನ್ನು ತಯಾರಿಸಲು ಪ್ಯಾಕೇಜ್ ಅನ್ನು ಬಳಸಬೇಕು.
ಇದರಿಂದ ಪ್ರದೇಶಕ್ಕೆ ಹೆಚ್ಚಿನ ಉದ್ಯೋಗಗಳು ಸಿಗುತ್ತವೆ. ಕುಂದಗೋಳ ಮತ್ತು ಹಾವೇರಿಯಂತಹ ನಿಲ್ದಾಣಗಳು ಹುಬ್ಬಳ್ಳಿಗೆ ಸಮೀಪದಲ್ಲಿದೆ, ಆದರೆ ಅವು ಮೈಸೂರು ವಿಭಾಗದಲ್ಲಿವೆ. ಕೆಲವು ತಾಂತ್ರಿಕ ಕೆಲಸಗಳಿದ್ದರೆ, ಸುಮಾರು 400 ಕಿ.ಮೀ ದೂರದಲ್ಲಿರುವ ಮೈಸೂರಿನಿಂದ ಇಲ್ಲಿಗೆ ಬರಬೇಕು.
ಇದನ್ನೂ ಓದಿ: Budget 2023: ಮಂಡನೆಗೂ ಮುನ್ನವೇ ಲೀಕ್ ಆಗಿತ್ತು ಬಜೆಟ್ ಪ್ರತಿ! ಇಲ್ಲಿದೆ ನೋಡಿ ಕುತೂಹಲಕರ ಸಂಗತಿ
ಆದ್ದರಿಂದ ಹುಬ್ಬಳ್ಳಿ ದಕ್ಷಿಣದಿಂದ ಹರಿಹರ ಅಥವಾ ದಾವಣಗೆರೆಯ ಮಾರ್ಗವನ್ನು ಹುಬ್ಬಳ್ಳಿ ವಿಭಾಗಕ್ಕೆ ಸ್ಥಳಾಂತರಿಸಬೇಕು ಎಂಬ ಬೇಡಿಕೆಯನ್ನು ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ