Kalaburagi Crime News: ಬಸ್ ನಿಲ್ದಾಣದಲ್ಲಿ ಯುವಕನನನ್ನ ಕೊಲೆಗೈದಿದ್ದ ಆರು ಹಂತಕರ ಬಂಧನ

ಮುರ್ತುಜಾ ಮೊಹಮ್ಮದ್ ಅಲಿ (25), ಸಾಗರ್ ಭೈರಾಮಡಗಿ (22),  ಆಕಾಶ್  ಜಾಧವ್ (22), ಶುಭಂ ದೊಡ್ಡಮನಿ (23),  ಅಶೋಕ್ ಮೂಲಭಾರತಿ (21) ಹಾಗೂ ಕೌಶಿಕ್ ಹಳೆಮನಿ (21) ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ನಾಲ್ಕು ಲಾಂಗ್,  ಮಚ್ಚು, ಎರಡು ಬೈಕ್ ಹಾಗೂ ಒಂದು ಇನ್ನೋವಾ ಕಾರ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ,

ಕೊಲೆಯಾದ ಅಭಿಷೇಕ್

ಕೊಲೆಯಾದ ಅಭಿಷೇಕ್

  • Share this:
ಕಲಬುರಗಿ: ಬಸ್ ನಿಲ್ದಾಣದಲ್ಲಿ ಜಿಮ್ ಗೆ ಹೊರಟ್ಟಿದ್ದ ಯುವಕನನ್ನು ಕೊಲೆಗೈದಿದ್ದ ಹಂತಕರನ್ನು ಬಂಧಿಸುವಲ್ಲಿ ಪೊಲೀಸರು (Kalaburagi Police) ಯಶಸ್ವಿಯಾಗಿದ್ದರು. ದೀಪವಾಳಿ (Diwali 2021) ಹಿನ್ನೆಲೆ ಕಲಬುರಗಿಗೆ ಬಂದಿದ್ದ ರೌಡಿ ಅಭಿಷೇಕ್, ನವೆಂಬರ್ 4 ರಂದು ಬೆಳಗ್ಗೆ ಜಿಮ್ ಗೆ ಹೋಗುತ್ತಿರುವಾಗ ಈ ದಾಳಿ ನಡೆದಿತ್ತು. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿಯೇ (Kalaburagi Bus Stand) ಬೆಳ್ಳಂ ಬೆಳಗ್ಗೆ ಭಯಾನಕವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆಯ ವಿಡಿಯೋಗಳು ಎಲ್ಲೆಡೆ ವೈರಲ್ (Video Viral) ಆಗಿದ್ದರಿಂದ ಇಡೀ ನಗರವೇ ಬೆಚ್ಚಿ ಬಿದ್ದಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು (Police) ಆರು ಹಂತಕರನ್ನು ಬಂಧಿಸಿ, ಕತ್ತಲ ಕೋಣೆಗೆ ತಳ್ಳಿದ್ದಾರೆ.

ಮುರ್ತುಜಾ ಮೊಹಮ್ಮದ್ ಅಲಿ (25), ಸಾಗರ್ ಭೈರಾಮಡಗಿ (22),  ಆಕಾಶ್  ಜಾಧವ್ (22), ಶುಭಂ ದೊಡ್ಡಮನಿ (23),  ಅಶೋಕ್ ಮೂಲಭಾರತಿ (21) ಹಾಗೂ ಕೌಶಿಕ್ ಹಳೆಮನಿ (21) ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ನಾಲ್ಕು ಲಾಂಗ್,  ಮಚ್ಚು, ಎರಡು ಬೈಕ್ ಹಾಗೂ ಒಂದು ಇನ್ನೋವಾ ಕಾರ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ,

ಹಳೆ ವೈಷಮ್ಯ

ಕೊಲೆಯಾದ ಅಭಿಷೇಕ್ ಒಂದೂವರೆ ವರ್ಷದ ಹಿಂದೆ ಆರೋಪಿ ಸಾಗರ್ ಭೈರಾಮಡಗಿ ಮೇಲೆ  ತನ್ನ ಗ್ಯಾಂಗ್ ಜೊತೆ ಸೇರಿ ಹಲ್ಲೆ ನಡೆಸಿದ್ದನು, ಹಲ್ಲೆಯ ಬಳಿಕ ಕಲಬುರಗಿ ತೊರೆದಿದ್ದ ಅಭಿಷೇಕ್ ಬೆಂಗಳೂರು ಸೇರಿಕೊಂಡಿದ್ದನು, ಅಂದು ಹಲ್ಲೆಗೊಳಗಾಗಿದ್ದ ಸಾಗರ್ ಪ್ರತೀಕಾರ ತೀರಿಸಿಕೊಳ್ಳಲು ಅಭಿಷೇಕ್ ನಗರಕ್ಕೆ ಬರೋದನ್ನೇ ಕಾಯುತ್ತಿದ್ದನು.

ಇದನ್ನೂ ಓದಿ:  Viral Video; ಲಂಚ ಪಡೆಯುವ ವೇಳೆ ACB ಬಲೆಗೆ ಬೀಳುತ್ತಲೇ ಕಾಲಿಗೆ ಬುದ್ಧಿ ಹೇಳಿದ್ದ PSI ವಶಕ್ಕೆ

ಪ್ಲಾನ್ ರೂಪಿಸಿದ್ದ ಸಾಗರ್ ಆಂಡ್ ಗ್ಯಾಂಗ್

ಅಭಿಷೇಕ್ ಬೆಂಗಳೂರಿನಿಂದ ಕಲಬುರಗಿಗೆ ಬರುತ್ತಲೇ ಕೊಲೆಯ ಪ್ಲಾನ್ ರೂಪಿಸಿದ್ದ ಸಾಗರ್ ಮತ್ತು ಆತನ ಗ್ಯಾಂಗ್ ಬೆಳ್ಳಂ ಬೆಳಗ್ಗೆ ದಾಳಿ ನಡೆಸಿತ್ತು, ಕೊಲೆಯ ಬಳಿಕ ಆರೋಪಿಗಳೆಲ್ಲರೂ ಪರಾರಿಯಾಗಿದ್ದರು. ಸದ್ಯ ಎಲ್ಲರ ಹೆಡೆಮುರಿಕಟ್ಟುವಲ್ಲಿ ಕಲಬುರಗಿಯ ಅಶೋಕ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಗಳೆಲ್ಲ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಎರಡು ದಿನಗಳ ಹಿಂದೆ ಕಲಬುರಗಿ ನಗರದಾದ್ಯಂತ ಪೊಲೀಸರು ರೌಡಿಶೀಟರ್ ಗಳ ಮನೆ ಮೇಲೆ ದಾಳಿ ನಡೆಸಿ, ವಶಕ್ಕೆ ಪಡೆದುಕೊಂಡಿದ್ದರು. ಬೆಳಗಿನ ಜಾವವೇ ರೌಡಿಶೀಟರ್ ಗಳಿಗೆ ಶಾಕ್ ಕೊಟ್ಟಿದ್ದ ಕಲಬುರಗಿ ಪೊಲೀಸರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿ  ಕಳುಹಿಸಿದ್ದರು.

ಇದನ್ನೂ ಓದಿ:  Bengaluru Crime: ತಂದೆ ಬಳಿ ಕೆಲಸ ಮಾಡುತ್ತಿದ್ದವರನ್ನು ಪಟಾಕಿ ತರಲು ಕರೆದಿದ್ದೇ ತಪ್ಪಾಯ್ತು; ಕೊಂದು ಮೂಟೆ ಕಟ್ಟಿದ್ರು!

ಅಂದು ನಡೆದಿದ್ದು ಏನು?

ಮುಂಜಾನೆ ಜಿಮ್ ಗೆ ಹೋಗಲು ಅಭಿಷೇಕ, ಮನೆಯಿಂದ ಸ್ಕೂಟಿ ಹತ್ತಿ ಹೋಗಿದ್ದ.  ಆದ್ರೆ ಕೇಂದ್ರ ಬಸ್ ನಿಲ್ದಾಣದ ಮುಂದೆ ಬಂದಾಗ,  ಅಭಿಷೇಕ ಬೈಕ್ ಗೆ ದುಷ್ಕರ್ಮಿಗಳು ತಮ್ಮ ಪಲ್ಸರ್ ಬೈಕ್ ನಿಂದ ಡಿಕ್ಕಿ ಹೊಡೆಸಿದ್ದರು.

ಬೆನ್ನಹಿಂದ ಬಂದವರು, ತನ್ನ ಕೊಲೆ ಮಾಡಲಿಕ್ಕೆ ಬಂದಿದ್ದಾರೆ ಅನ್ನೋದು ಅಭಿಷೇಕ್ ಗೆ ಅರ್ಥವಾಗಿತ್ತು. ಹೀಗಾಗಿ ದಿಡೀರನೆ ಅಲ್ಲಿಂದ ಕಾಲ್ಕಿತ್ತಿದ್ದ. ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಹೋಗಲು ಮುಂದಾಗಿದ್ದ. ಆದ್ರೆ ದುಷ್ಕರ್ಮಿಗಳು ಅಭಿಷೇಕ್ ನನ್ನು ಬೆನ್ನು ಹತ್ತಿದ್ದರು. ಕೊನೆಗೆ ಅಭಿಷೇಕ್ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದೊಳಗೆ ಹೋಗಿದ್ದ. ಆದ್ರೆ ಅಲ್ಲಿ ಹೋದ್ರು ಕೂಡಾ ಬಿಡದ ನಾಲ್ವರು ದುಷ್ಕರ್ಮಿಗಳು ಬಸ್ ನಿಲ್ದಾಣದ ಆವರಣದಲ್ಲಿಯೇ ನೂರಾರು ಜನರು ಇದ್ರು ಕೂಡಾ ಅಭಿಷೇಕ್ ಮೇಲೆ ಮಾರಕಾಸ್ತ್ರಗಳಿಂದ ಮನಸೋ ಇಚ್ಚೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಹಬ್ಬದ ದಿನವೇ ನತ್ತರು

ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಜನರು ಗಡಿಬಿಡಿಯಿಂದ ಅಗತ್ಯ ವಸ್ತುಗಳನ್ನು ಖರೀದಿಸಿ ತಮ್ಮ ಮನೆಗೆ ಹೋಗುತ್ತಿದ್ದರೆ, ಮತ್ತೊಂದಡೆ ಜನನಿಬಿಡ ಪ್ರದೇಶದಲ್ಲಿಯೇ ರೌಡಿ ಶೀಟರ್ ನೋರ್ವನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು.
Published by:Mahmadrafik K
First published: