ಪ್ರೇಯಸಿಯ ಶವದೊಂದಿಗೆ 24 ಗಂಟೆ ಕಾರಿನಲ್ಲಿ ಸುತ್ತಾಡಿದ ಯುವಕ ಮಾಡಿದ್ದೇನು ಗೊತ್ತಾ?

ನಿವೃತ್ತ ಪೊಲೀಸ್ ಅಧಿಕಾರಿಯ ಮಗ 26 ವರ್ಷದ ರವಿ ಕುಮಾರ್ ಜೊತೆ ಪ್ರೇಮ ಸಂಬಂಧ ಇಟ್ಟುಕೊಂಡಿದ್ದ ಕಲಬುರ್ಗಿಯ ಬ್ರಹ್ಮಾಪುರದ 22 ವರ್ಷದ ಯುವತಿ ಮೃತಪಟ್ಟಾಕೆ.

Sushma Chakre | news18-kannada
Updated:September 12, 2019, 5:26 PM IST
ಪ್ರೇಯಸಿಯ ಶವದೊಂದಿಗೆ 24 ಗಂಟೆ ಕಾರಿನಲ್ಲಿ ಸುತ್ತಾಡಿದ ಯುವಕ ಮಾಡಿದ್ದೇನು ಗೊತ್ತಾ?
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು (ಸೆ. 12): ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಅವರ ಪ್ರೀತಿಯ ಫಲವಾಗಿ ಆಕೆಯ ಹೊಟ್ಟೆಯಲ್ಲಿ ಮಗುವೊಂದು ಜೀವ ಪಡೆದುಕೊಂಡಿತ್ತು. ಇದು ಗೊತ್ತಾಗುತ್ತಿದ್ದಂತೆ ಅಬಾರ್ಷನ್ ಮಾಡಿಸಿಕೊಳ್ಳಲು ಒತ್ತಾಯ ಹೇರಿದ ಆತ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಗರ್ಭಪಾತ ಮಾಡುವಾಗ ಆಕೆ ಸಾವನ್ನಪ್ಪಿದ್ದಳು. ಈ ವಿಷಯ ಯಾರಿಗಾದರೂ ಗೊತ್ತಾದರೆ ತನಗೆ ಜೈಲು ಶಿಕ್ಷೆ ಖಚಿತ ಎಂದು ಅರಿತ ಆ ಯುವಕ ಆಕೆಯ ಮೃತದೇಹವನ್ನು ಕಾರಿನಲ್ಲಿ ತುಂಬಿಸಿಕೊಂಡು 24 ಗಂಟೆಗಳ ಕಾಲ ಸಂಚರಿಸಿದ್ದಾನೆ. ಬಳಿಕ, ಆ ದೇಹವನ್ನು ಸುಟ್ಟುಹಾಕಿದ್ದಾನೆ.

ಕಲಬುರ್ಗಿ ಮೂಲದ ಜೋಡಿಯ ಕತೆಯಿದು. ತೆಲಂಗಾಣದ ಮೇದಕ್ ಜಿಲ್ಲೆಯ ಜಹೀರಾಬಾದ್​ನ ಕಾಡಿನಲ್ಲಿ ಕಲಬುರ್ಗಿಯ ಬ್ರಹ್ಮಾಪುರದ 22 ವರ್ಷದ ಯುವತಿಯ ಸುಟ್ಟು ಕರಕಲಾದ ಶವದ ಪಳೆಯುಳಿಕೆಗಳು ಪತ್ತೆಯಾಗಿವೆ. ನಿವೃತ್ತ ಪೊಲೀಸ್ ಅಧಿಕಾರಿಯ ಮಗ 26 ವರ್ಷದ ರವಿ ಕುಮಾರ್ ಜೊತೆ ಪ್ರೇಮ ಸಂಬಂಧ ಇಟ್ಟುಕೊಂಡಿದ್ದ ಯುವತಿ ಮೃತಪಟ್ಟಾಕೆ.

ಮಾತು ಬಿಟ್ಟಿದ್ದಕ್ಕೆ ಪ್ರೇಯಸಿಯ ಕತ್ತಿಗೆ ಚಾಕು ಹಾಕಿದ ಪ್ರಿಯಕರ!; ಇದು ಬೆಂಗಳೂರಿನ ಪಾಗಲ್ ಪ್ರೇಮಿಯ ಕತೆ

ಇಬ್ಬರ ನಡುವೆ ದೈಹಿಕ ಸಂಬಂಧವೂ ಇತ್ತು. ಆಕೆ ಗರ್ಭ ಧರಿಸಿರುವ ವಿಷಯ ತಿಳಿಯುತ್ತಿದ್ದಂತೆ ಆಕೆಯನ್ನು ಕಲ್ಬುರ್ಗಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ರವಿಕುಮಾರ್ ಆಕೆಯನ್ನು ತನ್ನ ಪತ್ನಿ ಎಂದು ಹೇಳಿಕೊಂಡಿದ್ದ. ಬಳಿಕ, ಆಕೆಗೆ ಅಬಾರ್ಷನ್ ಮಾಡುವಂತೆ ವೈದ್ಯರ ಬಳಿ ಕೇಳಿಕೊಂಡಿದ್ದ. ಆದರೆ, ಗರ್ಭಪಾತ ಮಾಡುವ ವೇಳೆ ಯುವತಿ ಮೃತಪಟ್ಟಿದ್ದಳು ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

ಮೃತದೇಹವನ್ನು ಕಾರಿನಲ್ಲಿ ಹಾಕಿಕೊಂಡು ನೆರೆಯ ರಾಜ್ಯ ತೆಲಂಗಾಣದತ್ತ ಹೊರಟ ರವಿ ಕುಮಾರ್ 24 ಗಂಟೆಗಳ ಬಳಿಕ ಅಲ್ಲಿನ ಕಾಡಿನ ಮಧ್ಯೆ ಆ ಯುವತಿಯ ಮೃತದೇಹವನ್ನು ಸುಟ್ಟುಹಾಕಿದ್ದ. ಯುವತಿ ಕಾಣೆಯಾದ ಬಗ್ಗೆ ಆಕೆಯ ಮನೆಯವರು ದೂರು ನೀಡಿದಾಗ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ಆಕೆಯ ಪ್ರಿಯಕರ ರವಿ ಕುಮಾರ್ ವಿಚಾರಣೆ ಮಾಡಿದಾಗ ಈ ವಿಚಾರ ಬಯಲಿಗೆ ಬಂದಿದೆ.

First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading