• Home
  • »
  • News
  • »
  • state
  • »
  • Kalaburagi Cylinder Blast: ಸಿಲಿಂಡರ್ ಸ್ಫೋಟ ; ಓರ್ವ ಸಾವು - ಮೂವರಿಗೆ ಗಂಭೀರ ಗಾಯ

Kalaburagi Cylinder Blast: ಸಿಲಿಂಡರ್ ಸ್ಫೋಟ ; ಓರ್ವ ಸಾವು - ಮೂವರಿಗೆ ಗಂಭೀರ ಗಾಯ

ಸ್ಫೋಟ ರಭಸಕ್ಕೆ ಚೆಲ್ಲಾಪಿಲ್ಲಿಯಾಗಿರುವ ಸಾಮಾನುಗಳು

ಸ್ಫೋಟ ರಭಸಕ್ಕೆ ಚೆಲ್ಲಾಪಿಲ್ಲಿಯಾಗಿರುವ ಸಾಮಾನುಗಳು

ಚಿಕಿತ್ಸೆ ಫಲಿಸದೆ ಮನೆ ಮಾಲೀಕ ರಾಜು ತಾಯಿತ್(50) ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ

  • Share this:

ಕಲಬುರ್ಗಿ(ಮೇ.22): ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಓರ್ವ ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ನಡೆದಿದೆ. ಸೇಡಂನ ಮೋಮಿನಪುರ ಬಡಾವಣೆಯ ರಾಜು ತಾಯಿತ್ ಎಂಬುವರ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ.

ಸ್ಫೋಟದ ರಭಸಕ್ಕೆ ಮನೆಯಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದವು. ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮನೆ ಮಾಲೀಕ ರಾಜು ತಾಯಿತ್(50) ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಸ್ಫೋಟದ ರಭಸಕ್ಕೆ ಮನೆಯಲ್ಲಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಗಾಯಾಳುಗಳ ಪೈಕಿ ಮತ್ತೋರ್ವರ ಸ್ಥಿತಿ ಗಂಭೀರವಾಗಿದೆ. ಮೃತನ ತಾಯಿ ಗಂಗಮ್ಮ ತಾಯಿತ್ (70), ಪತ್ನಿ ಸುಮಾ ತಾಯಿತ್ (40), ಮಗ ಬಸಪ್ಪ ತಾಯಿತ್ (22)ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ : ಮುಂಬೈನಿಂದ ಬರಲಿದೆ ರೈಲು: ಆತಂಕದಲ್ಲಿ ಹಾವೇರಿಯ ಜಿಲ್ಲೆಯ ಜನರು

ಘಟನೆ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

First published: