ಕಲೆ ಎಂಬುದು ನಮ್ಮ ಯೋಚನೆ, ಭಾವನೆಗಳ ಅಭಿವ್ಯಕ್ತಿಯಾಗಿದೆ. ಅಷ್ಟೇ ಅಲ್ಲದೇ ನಮ್ಮ ಚಿಂತನೆಗಳ ಪ್ರೇರಣೆ ಹಾಗೂ ಸಮರ್ಪಣಾ ಭಾವವನ್ನು ಈ ಕಲೆ ಪ್ರದರ್ಶಿಸುತ್ತದೆ. ಅಂತಹ ಕಲಾ ಪ್ರಕಾರದ ಸೌಂದರ್ಯದ ಆಳವನ್ನು ಪ್ರದರ್ಶಿಸುವ ಕಲಾ ಉತ್ಸವ್ ಎಂಬ ಆರ್ಟ್ ಎಕ್ಸ್ಫೋ ಕಾರ್ಯಕ್ರಮವನ್ನು ದಯಾನಂದ್ ಸಾಗರ್ ಅಕಾಡೆಮಿ ಆಫ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ಆಯೋಜಿಸಿತ್ತು. ಫೆ. 8 ಮತ್ತು 9 ರಂದು ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ಕಲಾಪ್ರಕಾರಗಳು ಎಲ್ಲರ ಕಣ್ಮನ ಸೆಳೆದವು. ದಯಾನಂದ್ ಸಾಗರ್ ಅಕಾಡೆಮಿ ಆಫ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ನ ಸಿಬ್ಬಂದಿ ವರ್ಗವಾದ ರಾಧಾ ಕೆ, ಧಾವದ್ ಮತ್ ಮತ್ತು ನಿಸ್ರೀನ್ ಟಿ ಅಹ್ಮದ್ ಆಯೋಜಿಸಿದ್ದರು. ಕಾರ್ಯಕ್ರಮವನ್ನು ಗೌರವನ್ವಿತ ಪ್ರಾಂಶುಪಾಲರಾದ ಡಾ. ಬಿಆರ್ ಲಕ್ಷ್ಮೀ ಕಾಂತ್ ಉದ್ಘಾಟಿಸಿದರು. ಈ ವೇಳೆ ಉಪ ಪ್ರಾಂಶುಪಾಲರಾದ ಡಾ. ಸಿ ನಂದನಿ ಮತ್ತು ನಿರ್ದೇಶಕ ಎಸ್ಒಎ ಗಡ್ಡಮ್ಮಡಿ ರಮೇಶ್ ಉಪಸ್ಥಿತರಿದ್ದರು.
ಕಲೆಯ ಚಿಕಿತ್ಸಕ ಗುಣಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಾಸ್ತುಶಿಲ್ಪ ಅಧ್ಯಾಪಕ ಸಿಬ್ಬಂದಿ ಈ ಪ್ರದರ್ಶನ ಆಯೋಜಿಸಿದ್ದರು.
ಕೊವೀಡ್ ಸಾಂಕ್ರಾಮಿಕದಿಂದಾಗಿ ಜನರು ಅತಿ ಹೆಚ್ಚು ಸಮಯ ಆನ್ಲೈನ್, ಮೊಬೈಲ್ ಮೇಲೆ ಹೆಚ್ಚು ಅವಲಂಬಿಸುತ್ತಿದ್ದಾರೆ. ಇದು ಕುಟುಂಬ ಸದಸ್ಯರ ನಡುವಿನ ಸಂಬಂಧದ ಮೇಲೂ ಪರಿಣಾಮ ಬೀರುತ್ತಿದೆ. ಇಂತಹ ಸನ್ನಿವೇಶದಲ್ಲಿ ಮಾನವನ ನಡುವಳಿಕೆ ಕುರಿತು ಅನೇಕ ಅಧ್ಯಯನಗಳು ನಡೆದಿವೆ. ಇಂತಹ ಸಂದರ್ಭದಲ್ಲಿ ವೈವಿಧ್ಯಮಯ ಕಲಾ ಪ್ರಕಾರಗಳು ಮನುಷ್ಯನ ಒತ್ತಡವನ್ನು ಕಡಿಮೆ ಮಾಡಿ ಎದುರಿಸಲು ಸಹಾಕಾರಿಯಾಗುತ್ತವೆ ಎಂಬುದು ಸಾಬೀತಾಗಿದೆ, ಇಂತಹ ಕಲಾ ಪ್ರಕಾರಗಳಿಂದ ವ್ಯಕ್ತಿಯಲ್ಲಿರುವ ಸೃಜನಾತ್ಮಕ ಅಂಶದ ಮೇಲೆ ಪರಿಣಾಮ ಬೀರುತ್ತದೆ.
ಚಿತ್ರಕಲೆ ಎಂಬುದು ಕೇವಲ ಒಂದು ಪ್ರಕಾರವಾಗಿರದೆ ನಮ್ಮ ಜೀವನದ ಮೌಲ್ಯಗಳನ್ನು ಉತ್ತಮಗೊಳಿಸುವ ಮಾರ್ಗ ಕೂಡವಾಗಿದೆ. ಇದರಿಂದ ಸಂತೋಷ ನೆಮ್ಮದಿ ಜೊತೆಗೆ ಸಮತೋಲಿತ ಜೀವನ ಕ್ರಮಕ್ಕೂ ಸಹಾಕಾರಿಯಾಗಿದೆ. ಇದೇ ಹಿನ್ನಲೆ ದಯಾನಂದ್ ಸಾಗರ್ ಅಕಾಡೆಮಿ ಆಫ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ಈ ಕಲಾ ಉತ್ಸವ್ ಎಂಬ ಆರ್ಟ್ ಎಕ್ಸಿಬಿಷನ್ ಏರ್ಪಡಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ