• Home
  • »
  • News
  • »
  • state
  • »
  • Karnataka Elections: ಇಳಿವಯಸ್ಸಿನಲ್ಲೂ ಚುನಾವಣೆಗೆ ಸಜ್ಜಾದ ಕಾಗೋಡು ತಿಮ್ಮಪ್ಪ, ಕಾಂಗ್ರೆಸ್ ಅಭ್ಯರ್ಥಿಯಾಗಲು ಅರ್ಜಿ ಸಲ್ಲಿಕೆ!

Karnataka Elections: ಇಳಿವಯಸ್ಸಿನಲ್ಲೂ ಚುನಾವಣೆಗೆ ಸಜ್ಜಾದ ಕಾಗೋಡು ತಿಮ್ಮಪ್ಪ, ಕಾಂಗ್ರೆಸ್ ಅಭ್ಯರ್ಥಿಯಾಗಲು ಅರ್ಜಿ ಸಲ್ಲಿಕೆ!

ಕಾಗೋಡು ತಿಮ್ಮಪ್ಪ

ಕಾಗೋಡು ತಿಮ್ಮಪ್ಪ

ಈ ಬಾರಿ ಕಾಗೋಡು ತಿಮ್ಮಪ್ಪ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಹರಿದಾಡುತ್ತಿತ್ತು. ಇದೀಗ ಈ ವದಂತಿ ನಿಜವಾಗಿದೆ. ಕಾಗೋಡು ತಿಮ್ಮಪ್ಪ ಇಳಿ ವಯಸ್ಸಿನಲ್ಲೂ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಹಿರಿಯ ನಾಯಕನ ನಡೆ ಪಕ್ಷದಲ್ಲಿಯೇ ಸಂಚಲನಕ್ಕೂ ಕಾರಣವಾಗಿದೆ.

  • News18 Kannada
  • Last Updated :
  • Shimoga, India
  • Share this:

ಸಾಗರ(ನ15): ಕರ್ನಾಟಕ ಚುನಾವಣೆಗೆ (Karnataka Assembly Elections) ಇನ್ನು ಕೆಲವೇ ತಿಂಗಳು ಬಾಕಿ ಇದೆ. ಹೀಗಿರುವಾಗ ಪ್ರತಿಯೊಂದು ಪಕ್ಷಗಳು, ನಾಯಕರು ತಮ್ಮದೇ ಆದ ರೀತಿಯಲ್ಲಿ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಾರೆ. ಈಗಾಗಲೇ ಪಕ್ಷಗಳು ಟಿಕೆಟ್​ ಯಾರಿಗೆ ನೀಡಬೇಕೆಂಬ ಲೆಕ್ಕಾಚಾರ ನಡೆಸುತ್ತಿದ್ದರೆ, ಇತ್ತ ರಾಜಕೀಯ ನಾಯಕರು ಟಿಕೆಟ್​ ಹೇಗೆ ಗಳಿಸಿಕೊಳ್ಳುವುದು ಎಂಬ ಯೋಚನೆಯಲ್ಲಿದ್ದಾರೆ. ಹೀಗಿರುವಾಗ ರಾಜಕೀಯ ವಲಯದಲ್ಲಿ ವಾಕ್ಸಮರವೂ ಜೋರಾಗಿದೆ. ಹೀಗಿರುವಾಗ ಶಿವಮೊಗ್ಗದ (Shivamogga) ಸಾಗರ ಕ್ಷೇತ್ರದ (Sagar Constituency) ರಾಜಕೀಯ ಬೆಳವಣಿಗೆಯೊಂದು ಸದ್ದು ಮಾಡುತ್ತಿದೆ. ಹೌದು ಇಲ್ಲಿ ಇಳಿವಯಸ್ಸಿನಲ್ಲೂ ಮಾಜಿ ಶಾಸಕ ಕಾಗೋಡು ತಿಮ್ಮಪ್ಪ (kagodu Thimmappa) ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಲು ಅರ್ಜಿ ಪುತ್ರಿ ರಾಜನಂದಿನಿ ಜೊತೆ ತಾವೂ ಅರ್ಜಿ ಸಲ್ಲಿಸಿದ್ದಾರೆ.


ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಸಾಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಕಾಗೋಡು ತಿಮ್ಮಪ್ಪ ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ, ಅದೇ ಅವರ ಕೊನೆಯ ಚುನಾವಣೆ ಎನ್ನಲಾಗಿತ್ತು. ಅಲ್ಲದೇ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಹೇಳಲಿದ್ದಾರೆ ಎಂಬ ಮಾತುಗಳೂ ಜೋರಾಗಿತ್ತು. ಹೀಗಿದ್ದರೂ ಈ ಬಾರಿ ಕಾಗೋಡು ತಿಮ್ಮಪ್ಪ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಹರಿದಾಡುತ್ತಿತ್ತು. ಇದೀಗ ಈ ವದಂತಿ ನಿಜವಾಗಿದೆ. ಕಾಗೋಡು ತಿಮ್ಮಪ್ಪ ಇಳಿ ವಯಸ್ಸಿನಲ್ಲೂ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಹಿರಿಯ ನಾಯಕನ ನಡೆ ಪಕ್ಷದಲ್ಲಿಯೇ ಸಂಚಲನಕ್ಕೂ ಕಾರಣವಾಗಿದೆ.
ಸಾಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲು ಕಾಗೋಡು ತಿಮ್ಮಪ್ಪ ಹಾಗೂ ಪುತ್ರಿ ರಾಜನಂದಿನಿ ಇಬ್ಬರೂ ಅರ್ಜಿ ಸಲ್ಲಿಸಿದ್ದು, ಈ ನಡೆ ಹಲವರನ್ನು ಗೊಂದಲಕ್ಕೀಡು ಮಾಡಿದೆ. ಈ ಬಗ್ಗೆ ಮಾತನಾಡಿರುವ ಕಾಗೋಡು ತಿಮ್ಮಪ್ಪ ದೈಹಿಕ ವಾಗಿ ಸ್ವಲ್ಪ ಸಮರ್ಪಕವಾಗಿವಾಗಿಲ್ಲ ನಿಜ, ಆದರೆ ಇನ್ನು ಟೈಂ ಇದೆ ಸ್ಪರ್ಧೆಗೆ ನಾನೂ ರೆಡಿ ಇದ್ದೇನೆ. ಹೈಕಮಾಂಡ್ ಬಳಿ ನಾನು ಕೇಳಲ್ಲ, ಚುನಾವಣೆ ನಿಲ್ಲುವ ವಿಚಾರದಲ್ಲಿ ರಾಜಕೀಯವೂ ಮಾಡಲ್ಲ ಎಂದಿದ್ದಾರೆ.


Karnataka Assembly Elections: ಸಾಗರದಲ್ಲಿ ಕೈ-ಕಮಲ ಮುಖಾಮುಖಿ ಕದನ, ಅಭ್ಯರ್ಥಿ ಯಾರು ಅನ್ನೋದೇ ಯಕ್ಷಪ್ರಶ್ನೆ!


ಇನ್ನು ಹಾಲಿ ಶಾಸಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕಾಗೋಡು ತಿಮ್ಮಪ್ಪ ಈ ಹಿಂದಿನ ಶಾಸಕರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಕೇವಲ ಗಣಪತಿ ಕೆರೆಯಲ್ಲಿ ಕಂಬ ನಿಲ್ಲಿಸಿರುವುದಷ್ಟೇ ಕೆಲಸ. ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಅಧಿಕಾರಕ್ಕೆ ತರಲು ಸಂಘಟನೆ ಮಾಡಲಾಗುತ್ತಿದೆ. ಉಮೇದುವಾರಿಕೆಗೆ ನಾನು ಹಾಗೂ ರಾಜನಂದಿನಿ ಅರ್ಜಿ ಸಲ್ಲಿಸಿದ್ದೇವೆ ಪಕ್ಷ ಸೂಚಿಸದರೆ ಸ್ಪರ್ಧೆ ಮಾಡುತ್ತೇನೆ. ಹೈಕಮಾಂಡ್ ಅನುಮತಿ ನೀಡಿದರೆ ಅವರ ಪರ ಕೆಲಸ ಮಾಡುತ್ತೇನೆ. ಅವರು ಚುನಾವಣೆಗೆ ನಿಲ್ಲಲು ಉತ್ಸುಕರಾಗಿದ್ದಾರೆ ಎಂದಿದ್ದಾರೆ.


ಇದೇ ವೇಳೆ ಮಾತನಾಡಿದ ಕಾಗೋಡು ತಿಮ್ಮಪ್ಪ ಮಗಳು ರಾಜನಂದಿನಿ ತಂದೆ ಇಚ್ಚೆ ಮೇರೆಗೆ ಅರ್ಜಿಯನ್ನು ಸಲ್ಲಿಸಿದ್ದೇವೆ ಇಬ್ಬರು ಹೈಕಮಾಂಡ್ ಹೇಳಿದ ಹಾಗೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Published by:Precilla Olivia Dias
First published: