ಬೆಂಗಳೂರು: ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ ಬಿಜೆಪಿಗೆ (BJP) ಭೀಮ ಬಲ ಸಿಕ್ಕಿದ್ದು, ಇಂದು ಕಾಂಗ್ರೆಸ್ (Congress) ಪಕ್ಷದ ಹಿರಿಯ ನಾಯಕರಾಗಿರುವ ಕಾಗೋಡು ತಿಮ್ಮಪ್ಪ (Kagodu Thimmappa) ಪುತ್ರಿ ರಾಜನಂದಿನಿ (Rajanandini) ಅವರು ಬೆಂಗಳೂರಲ್ಲಿ (Bengaluru) ರಾಜನಂದಿನಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಾಜಿ ಸಿಎಂ ಬಿಎಸ್ವೈ (BS Yediyurappa), ಹಾಲಪ್ಪ ಅವರ ಸಮ್ಮುಖದಲ್ಲಿ ರಾಜನಂದಿನಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕಾಗೋಡು ತಿಮ್ಮಪ್ಪ ಅವರು, ಮಗಳ ನಿರ್ಧಾರದಿಂದ ಬೇಸರವಾಗಿದೆ. ರಾಜನಂದಿನಿ ಮನವೊಲಿಸುವ ಕಾರ್ಯವನ್ನು ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಸಾಗರದಲ್ಲಿ ಬಿಜೆಪಿ ಗೆಲುವು ಫಿಕ್ಸ್
ಕಾಂಗ್ರೆಸ್ ಪಕ್ಷದ ಅಸಮಾಧಾನಿತ ನಾಯಕಿ ರಾಜ ನಂದಿನಿ ಬಿಜೆಪಿ ಸೇರ್ಪಡೆಯಾಗಿದ್ದು, ರಾಜನಂದಿನಿ ಅವರ ಬಿಜೆಪಿ ಸೇರಿದ್ದಕ್ಕೆ ಸಾಗರದಲ್ಲಿ ಬಿಜೆಪಿ ಗೆಲುವು ಫಿಕ್ಸ್ ಎಂದು ಬಿಎಸ್ವೈ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಾಗರ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಪುತ್ರಿ ರಾಜ ನಂದಿನಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪಕ್ಷದ ಧ್ವಜ ನೀಡಿ, ಶಾಲು ಹಾಕಿ ರಾಜ ನಂದಿನಿ ಅವರನ್ನು ಪಕ್ಷಕ್ಕೆ ನಾಯಕರು ಬರಮಾಡಿಕೊಂಡಿದ್ದಾರೆ. ಇದೇ ವೇಳೆ ಅಥ್ಲೀಟ್ ತೀರ್ಥ ಇಸ್ಕಾ ಸಹ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ @BSYBJP ಮತ್ತು ರಾಜ್ಯಾಧ್ಯಕ್ಷರಾದ ಶ್ರೀ @nalinkateel ಅವರ ಸಮ್ಮುಖದಲ್ಲಿ ಇಂದು ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರಾದ ಶ್ರೀ ಕಾಗೋಡು ತಿಮ್ಮಪ್ಪ ಅವರ ಮಗಳಾದ ಡಾ. ರಾಜನಂದಿನಿ, ಟೆನ್ನಿಸ್ ಆಟಗಾರ್ತಿಯಾದ ಶ್ರೀಮತಿ ತೀರ್ಥ ಇಸ್ಕಾ, ಪ್ರಮುಖರಾದ ಶ್ರೀ ರತ್ನಾಕರ ಹೊನಗೋಡು,
1/2 pic.twitter.com/ZZqwJXyBgp
— BJP Karnataka (@BJP4Karnataka) April 12, 2023
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಗೋಡು ತಿಮ್ಮಪ್ಪ ಅವರು, ಮಗಳು ಬಿಜೆಪಿ ಸೇರಲು ಹೊರಟಿರುವುದು ನನ್ನ ಎದೆಗೆ ಚೂರಿ ಹಾಕಿದಂತಾಗಿದೆ. ಆಕೆ ಈ ಕೆಲಸ ಮಾಡಬಾರದಿತ್ತು ಎಂದಿದ್ದಾರೆ. ಅಲ್ಲದೆ, ಪುತ್ರಿ ಈ ರೀತಿ ಮಾಡಿದ್ದು ನನ್ನ ದೌರ್ಭಾಗ್ಯ. ಪುತ್ರಿಯನ್ನು ಸಂಪರ್ಕ ಮಾಡುವ ಕೆಲಸ ಮಾಡುತ್ತೇನೆ.
ನಾನು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬೇರೆ ಯಾವುದೇ ಪಕ್ಷಕ್ಕೂ ಹೋಗೋದಿಲ್ಲ. ನನ್ನ ಮಗಳು ಈ ರೀತಿ ಮಾಡುತ್ತಾರೆ ಅಂತ ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇದು ಆಗಬಾರದಿತ್ತು, ನಾನು ಕಾಂಗ್ರೆಸ್ ಪರವೇ ಕೆಲಸ ಮಾಡ್ತೀನಿ. ಇದರ ಹಿಂದೆ ಹಾಲಪ್ಪ ಇರಬಹುದು ಏನೋ, ಒಂದು ದಿನ ಕೂಡ ನನ್ನ ಬಳಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ