ಚಿತ್ರದುರ್ಗ: ನಾವು ಧರ್ಮಸ್ಥಳ, ಕೊಟ್ಟೂರು, ಶ್ರೀಶೈಲಕ್ಕೆ ಹಲವು ಸಮಾಜದವರು ಪಾದಯಾತ್ರೆ (Padayatra) ಹೋಗುವದನ್ನ ನೋಡಿದ್ದೇವೆ ಕೇಳಿದ್ದೇವೆ. ಆದರೆ ಈ ಊರಲ್ಲಿ ಕಾಡುಗೊಲ್ಲ ಸಮುದಾಯ (Kadugolla Community) ತನ್ನ ಆರಾಧ್ಯದೈವಗೆ ಕರೆದ ಹಾಲನ್ನ (Milk) ವಾರಗಟ್ಟಲೇ ಮೀಸಲಿಡುತ್ತಾರೆ. ಮಡಿಯಿಂದ ಕೂಡಿಟ್ಟ ಮೊಸರು, ಬೆಣ್ಣೆ ಹೊತ್ತು ನಡೆದು ಆರಾಧ್ಯ ದೈವ ಪಾರ್ಥಲಿಂಗೇಶ್ವರ ಅರ್ಪಣೆ ಮಾಡುತ್ತಾರೆ. ಮೀಸಲು ನೀಡಿ ಸರ್ವರಿಗೂ ಸಕಲ ಜೀವಿಗಳಿಗೂ ಆರೋಗ್ಯ (Health) ಕೊಡಲಿ ಎಂದು ಬೇಡಿಕೊಳ್ಳುತ್ತಾರೆ. ಇದು ಕೋಟೆನಾಡಿನ ಹಳ್ಳಿಯೊಂದರ ವಿಶಿಷ್ಟ ಬುಡಕಟ್ಟು ಸಮುದಾಯದ ಆಚರಣೆ.
ಚಿತ್ರದುರ್ಗ ತಾಲೂಕಿನ ಟಗರುನಹಟ್ಟಿ (Tagarunahatti, Chitradurga) ಗ್ರಾಮದಲ್ಲಿ ಈ ವಿಶೇಷ ಆಚರಣೆ ನಡೆಯುತ್ತಿದೆ. ಇಲ್ಲಿ ಕಾಡುಗೊಲ್ಲ ಸಮುದಾಯ ಪೂರ್ವಜರ ಕಾಲದಿಂದ ಈ ಆಚರಣೆ ನಡೆಸಿಕೊಂಡು ಬಂದಿದೆ. ಅದುವೇ ಪಾರ್ಥಲಿಂಗೇಶ್ವರ ತುಪ್ಪದ ದೀಪೋತ್ಸವ.
ಎಲ್ಲಾ ಹಾಲು ಪಾರ್ಥಲಿಂಗನಿಗೆ ಮೀಸಲು
ಈ ದೀಪೋತ್ಸವ ಬಂತೆಂದ್ರೆ ಊರಲ್ಲಿ ದೈವಭಕ್ತಿ ಕಳೆಗಟ್ಟುತ್ತದೆ. ಈ ಊರಲ್ಲಿರುವ ಪ್ರತಿ ಹಸು, ಎಮ್ಮೆಗಳಿಂದ ಕರೆಯುವ ಹಾಲನ್ನ ಪಾರ್ಥಲಿಂಗನಿಗೆ ಮೀಸಲಾಗಿರಿಸುತ್ತಾರೆ. ಹೀಗೆ ಇಲ್ಲಿ ಮೀಸಲಿಟ್ಟ ಹಾಲನ್ನ ಮೊಸರು ಮಾಡಿ, ಕಡೆದು ಬೆಣ್ಣೆ ತೆಗೆಯತ್ತಾರೆ. ಅದೂ ಇಡೀ ಊರಿನ ಹಾಲನ್ನ ದೇವಸ್ಥಾನ ಬಳಿ ಶೇಖರಿಸಿ, ಮೊಸರು ಮಾಡಿ ಕಡೆದು ಬೆಣ್ಣೆ ತೆಗೆಯಲಾಗುತ್ತದೆ.
5 ವರ್ಷಕ್ಕೊಮ್ಮೆ ನಡೆಯುವ ಆಚರಣೆ
ಬಳಿಕ ಜಿಲ್ಲೆಯ ಹಿರಿಯೂರು ತಾಲೂಕಿನ ಕೂಡಲಹಳ್ಳಿಯ ಪಾರ್ಥಲಿಂಗೇಶ್ವರ ಸ್ವಾಮಿ ಸನ್ನಿಧಿಗೆ ಮೀಸಲನ್ನ ಹೊತ್ತೊಯುತ್ತಾರೆ. ಇನ್ನೂ ಈ ವಿಶೇಷ ಪ್ರತಿ 5 ವರ್ಷಕ್ಕೊಮ್ಮೆ ಪದ್ಧತಿಯಂತೆ ನಡೆಯುತ್ತಿದೆ.
ಈ ವೇಳೆ ಇತರೆ ಗ್ರಾಮದವರಿಗೆ ಪ್ರವೇಶ ಇರುವುದಿಲ್ಲ. ಹಸು, ಎಮ್ಮೆ ಹಾಲು ಕರೆಯಲು ಮನೆಯ ನೀರು ಬಳಸದೇ ದೇಗುಲದ ತೀರ್ಥದಿಂದಲೇ ದಿನವೂ ಹಾಲು ಕರೆಯಬೇಕು. ಈ ವೇಳೆ ಕರುಗಳು ಹಾಲು ಕುಡಿಯಬಾರದು ಎಂಬ ಕಾರಣಕ್ಕೆ ಕೆಚ್ಚಲಿಗೆ ಬಟ್ಟೆ ಕಟ್ಟಲಾಗುತ್ತದೆ. ಈ ಮೀಸಲು ಹಾಲು ಕರೆದವರು ಊರಿಂದ ಹೊರಗೆ ಹೋಗುವಂತಿಲ್ಲ.
ಇದೇ ತುಪ್ಪದಿಂದ 5 ವರ್ಷ ದೀಪ ಬೆಳಗುವುದು
ಯಾರಿಗೂ ಮಾರಾಟ ಮಾಡುವಂತಿಲ್ಲ. ಕರೆದ ಹಾಲನ್ನ ತಲೆಯ ಮೇಲೆ ಕಂಬಳಿ ಹೊದ್ದು ಸನ್ನಿಧಿಗೆ ತಂದು ಇಡಲಾಗುತ್ತದೆ. ಹೀಗೆ ಮೀಸಲು ಬೆಣ್ಣೆಯನ್ನ ಕೂಡ್ಲಹಳ್ಳಿ ಪಾರ್ಥಲಿಂಗೇಶ್ವರ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಬೆಣ್ಣೆ ಕಾಯಿಸಿ ದೀಪ ಬೆಳಗಿಸಲಾಗುತ್ತದೆ. ಅಲ್ಲದೇ ಮೀಸಲಾಗಿ ಕೊಟ್ಟ ಕ್ವಿಂಟಲ್ ಗಟ್ಟಲೇ ಬೆಣ್ಣೆಯನ್ನು ತುಪ್ಪ ಮಾಡಿ ಐದು ವರ್ಷಗಳ ಕಾಲ ದೇವನಿಗೆ ದೀಪ ಬೆಳಗುವುದು ವಾಡಿಕೆ.
ಒಟ್ಟಾರೆ ದೇವರು ಅಂದರೆ ಭಕ್ತಿ ಇಲ್ಲದೇ ದೂರ ಸರಿಯುವ ಜನರ ನಡುವೆ ಈ ಊರಿನ ಜನರ ಭಕ್ತಿಭಾವ ವೈಶಿಷ್ಟ್ಯದಿಂದ ಕೂಡಿದೆ. ಹಾಲು ಮೊಸರು ಬೆಣ್ಣೆ ತುಪ್ಪ ಅಂದ್ರೆ ಬಾಚಿ ತಿನ್ನೋ ಬದಲು ನೈವೇದ್ಯಕ್ಕೆ ಮೀಸಲಿಟ್ಟು, ಪಾದಾಯಾತ್ರೆ ಮಾಡಿ ತುಪ್ಪದ ದೀಪ ಬೆಳಗೋದೇ ಬುಡಕಟ್ಟು ಆಚರಣೆಯ ವಿಶೇಷ.
ಇದನ್ನೂ ಓದಿ: Mangaluru Parashuram: ಇವರ ಜೀವನವೇ ಸ್ಪೂರ್ತಿ! ಕಷ್ಟಕ್ಕೆ ಹೆದರದ ಛಲದಂಕಮಲ್ಲ ಸ್ವಿಗ್ಗಿ ಡೆಲಿವರಿ ಬಾಯ್ ಮಂಗಳೂರಿನ ಪರಶುರಾಮ!
ಸಿರಿ ಜಾತ್ರೆಗೆ ಹೆಸರುವಾಸಿ
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆ ಶ್ರೀಮಹಾಲಿಂಗೇಶ್ವರ ದೇವಸ್ಥಾನವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಾರ ಸಂಖ್ಯೆಯ ಭಕ್ತರನ್ನ ಹೊಂದಿದೆ. ನಂದಳಿಕೆ ಪುಟ್ಟ ಗ್ರಾಮವಾದರೂ ಸಾವಿರ ವರ್ಷ ಹಳೆಯ ಈ ದೇಗುಲ ಕರಾವಳಿಯಾದ್ಯಂತ ಭಾರೀ ಫೇಮಸ್.
ಮಹಾಕವಿ ಮುದ್ದಣನ ಮನೆಯೂ ಇಲ್ಲೇ ಇತ್ತು!
ಈ ದೇವಾಲಯದಲ್ಲಿ ತುಳುನಾಡಿನಲ್ಲೇ ಅಪರೂಪವಾದ ವಿಶಿಷ್ಟ ಸಿರಿ ಜಾತ್ರೆ ಇಲ್ಲಿ ಸಂಭ್ರಮದಿಂದ ನಡೆಯುತ್ತೆ. ಮಹಿಳೆಯರಂತೂ ಈ ಜಾತ್ರೆಯಲ್ಲಿ ವಿಶೇಷ ಭಕ್ತಿ ಭಾವದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಇನ್ನೊಂದು ವಿಶೇಷ ಅಂದ್ರೆ, ಮಹಾಕವಿ ಮುದ್ದಣನ ಮನೆಯು ಇದೇ ದೇಗುಲದ ಆವರಣಕ್ಕೆ ತಾಕಿಕೊಂಡಿತ್ತು ಅನ್ನೋದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ