ಮಂಡ್ಯ(ಜ.27): ಸಾಮಾನ್ಯವಾಗಿ ಮುಟ್ಟಾಗೋದು ,ಮಕ್ಕಳೆರುವುದು ಹೆಣ್ಣುಮಕ್ಕಳ ಸಹಜ ಪ್ರಕ್ರಿಯೆ. ಅದು ಮಹಿಳೆಯರ ಜೀವನದ ಚಕ್ರವು ಹೌದು. ಆದರೆ, ಸಕ್ಕರೆನಾಡಿನ ಈ ಊರಿನ ಸಂಪ್ರದಾಯದಿಂದ ಮಾತ್ರ ಅಲ್ಲಿನ ಹೆಣ್ಣುಮಕ್ಕಳು ಮುಟ್ಟು ಅಂದ್ರೆ ಭಯ ಬೀಳ್ತಾರೆ. ಇನ್ನು ಮಕ್ಕಳೆರುವುದೆಂದರೆ ಕೂಡ ಸಾಕಪ್ಪ ಅದರ ವನವಾಸ ಬೇಡಪ್ಪ ಎನ್ನುತ್ತಾರೆ. ಮಕ್ಕಳೆರುವ ಸಂದರ್ಭದಲ್ಲಿ ತಾವು ಅನುಭವಿಸುವ ಸಂಕಟ ಬಾಯಿಬಿಟ್ಟು ಹೇಳಿಕೊಳ್ಳಲಾಗದೆ ಇಂದಿಗೂ ಪರದಾಡುತ್ತಿದ್ಧಾರೆ. ಅವರ ಊರಿನ ಅನಿಷ್ಟ ಪದ್ದತಿಯಿಂದ ಶೋಷಣೆಗೊಳಗಾಗುತ್ತ ಕಷ್ಟ ಅನುಭವಿಸುತ್ತಿದ್ದಾರೆ.
ಹೌದು, ಸಕ್ಕರೆನಾಡು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ ಇಂದಿಗೂ ಮುಟ್ಟು, ಕಟ್ಟುಪಾಡು ಸಂಪ್ರದಾಯ ಎನ್ನುವುದು ಜಾರಿಯಲ್ಲಿದೆ. ನಾವು 21ನೇ ಶತಮಾನದಲ್ಲಿದ್ದೇವೆ. ದೇಶ ಭಾಷೆ ಸಮಾಜ ಸಾಕಷ್ಟು ಮುಂದುವರೆದಿದೆ. ಇಡೀ ಜಗತ್ತೇ ಬದಲಾದರೂ ಈ ಊರಿನವರು ಮಾತ್ರ ಬದಲಾಗಿಲ್ಲ.
ಇಲ್ಲಿನ ಬಹುತೇಕರು ಕಾಡುಗೊಲ್ಲ ಸಮುದಾಯಕ್ಕೆ ಸೇರಿದವರು. ಈ ಜನಾಂಗದಲ್ಲಿ ಒಂದು ಸಂಪ್ರದಾಯ ಮಾತ್ರ ಇಂದಿಗೂ ಮಹಿಳೆಯರನ್ನು ಶೋಷಣೆಗೊಳಪಡಿಸುತ್ತಿದೆ. ಮುಟ್ಟಾದ ಮಹಿಳೆ ಅಥವಾ ಯುವತಿ ನಿರ್ಜನ ಕೊಠಡಿಯಲ್ಲಿ ಇರಬೇಕೆಂಬ ನಿಯಮವಿದೆ. ಕನಿಷ್ಠ ಊರ ಹೊರಗಿನ ಕೊಠಡಿಯಲ್ಲಿ 1 ತಿಂಗಳು ಅಥವಾ ವಾರ ಮುಟ್ಟಾದ ಮಹಿಳೆ ಇರಲೇಬೇಕು ಎನ್ನಲಾಗಿದೆ.
ಇದನ್ನೂ ಓದಿ: ಶಾಹೀನ್ ಬಾಗ್ ಪ್ರತಿಭಟನೆ ವಿಚಾರದಲ್ಲಿ ಬಿಜೆಪಿಯಿಂದ ಕೊಳಕು ರಾಜಕಾರಣ: ಅರವಿಂದ್ ಕೇಜ್ರಿವಾಲ್
ನಂತರ ಮಹಿಳೆ ತನ್ನ ಮಗುವಿನೊಂದಿಗೆ ಸ್ನಾನ ಮಡಿ ಪಲ್ಲಕ್ಕಿ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ ಊರಿನೊಳಗೆ ಬರಬೇಕಾಗುತ್ತದೆ. ಈ ಆಚರಣೆ ನಾವು ಅನಾದಿಕಾಲದಿಂದಲೂ ಆಚರಿಸಿಕೊಂಡು ಬರುತ್ತಿದ್ದೇವೆ. ಒಂದು ವೇಳೆ ನಾವು ಈ ಸಂಪ್ರದಾಯ ಪಾಲಿಸದಿದ್ದರೆ ಊರಿಗೆ ಕೇಡಾಗಲಿದೆ ಎನ್ನುತ್ತಾರ ಜನಾಂಗದ ಮುಖ್ಯಸ್ಥರೊಬ್ಬರು.
ಈಗಾಗಲೇ ಸರ್ಕಾರಿ ಅಧಿಕಾರಿಗಳು ಅನಿಷ್ಟ ಆಚರಣೆ ಕುರಿತಂತೆ ಅರಿವು ಮೂಡಿಸಿದ್ದಾರೆ. ನಮ್ಮ ಜನಾಂಗಕ್ಕೆ ಅರಿವಿನ ಕೊರತೆ ಇದೆ. ನಾವು ಇಂತಹ ಪದ್ದತಿಗಳಿಂದ ಹೊರ ಬರಬೇಕಿದೆ. ನಮ್ಮವರು ಈ ಬದಲಾವಣೆ ಒಪ್ಪುವುದಿಲ್ಲ. ಇದರಿಂದ ಹೆಣ್ಣುಮಕ್ಕಳಿಗೆ ಭಾರೀ ತೊಂದರೆಯಾಗುತ್ತಿದೆ. ಈ ಅನಿಷ್ಟ ಪದ್ದತಿ ತೊಲಗಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕೆಲಸ ಮಾಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ