HOME » NEWS » State » KABBADDI PLAYER USHA RANI ATTACKED BY HIS COACH IN BANGALORE RMD

ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಮೇಲೆ ಬೆಂಗಳೂರಿನಲ್ಲಿ ಹಲ್ಲೆ, ಆಸ್ಪತ್ರೆಗೆ ದಾಖಲು

ಕಬ್ಬಡ್ಡಿ ಕ್ಯಾಂಪ್​ನಲ್ಲಿ ಬರುವ ಅತಿಥಿಗಳಿಗೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿಸುವ ಜವಾಬ್ದಾರಿಯನ್ನು ಉಷಾರಾಣಿ ಹೊತ್ತಿದ್ದರು. ಇದನ್ನು ಸಹಿಸದ ರಮೇಶ್​, ಮುನಿರಾಜು ಹಾಗೂ ನರಸಿಂಹ ಹಲ್ಲೆ ಮಾಡಿದ್ದಾರೆ. ಉಷಾ ರಾಣಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

news18-kannada
Updated:January 22, 2020, 8:38 AM IST
ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಮೇಲೆ ಬೆಂಗಳೂರಿನಲ್ಲಿ ಹಲ್ಲೆ, ಆಸ್ಪತ್ರೆಗೆ ದಾಖಲು
ಕಬಡ್ಡಿ ಆಟಗಾರ್ತಿ ಉಷಾರಾಣಿ
  • Share this:
ಬೆಂಗಳೂರು (ಜ.22): ಅಂತಾರಾಷ್ಟ್ರೀಯ ಕಬಡ್ಡಿ ಪಟು ಉಷಾರಾಣಿ ಎನ್. ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಈ ಘಟನೆ ನಡೆದಿದ್ದು, ಮತ್ತೋರ್ವ ಅಂತಾರಾಷ್ಟ್ರೀಯ ಕಬಡ್ಡಿ ಪಟು ಬಿ.ಸಿ.ರಮೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.

ಕಬಡ್ಡಿ ಕ್ಯಾಂಪ್​ನಲ್ಲಿ ಬರುವ ಅತಿಥಿಗಳಿಗೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿಸುವ ಜವಾಬ್ದಾರಿಯನ್ನು ಉಷಾರಾಣಿ ಹೊತ್ತಿದ್ದರು. ಇದನ್ನು ಸಹಿಸದ ರಮೇಶ್​, ಮುನಿರಾಜು ಹಾಗೂ ನರಸಿಂಹ ಹಲ್ಲೆ ಮಾಡಿದ್ದಾರೆ. ಉಷಾ ರಾಣಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

“ಈ ಮೂವರು ಎಲ್ಲರ ಸಮ್ಮುಖದಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕೊಠಡಿಗೆ ಕರೆದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ,” ಎಂದು ಉಷಾರಾಣಿ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಆದರೆ ಇದು ಸುಳ್ಳು ಎನ್ನುತ್ತಿದ್ದಾರೆ ರಮೇಶ್​ ಕಡೆಯವರು. “ಉಷಾರಾಣಿಯೇ ರಮೇಶ್​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಉಷಾರಾಣಿ ಶೂ ತೆಗೆದು ಹೊಡೆಯಲು ಬಂದಿದ್ದರು,” ಎಂದು ಸ್ಪಷ್ಟನೆ ನೀಡಿದ್ದಾರೆ. ಪ್ರಕರಣ ಸಂಬಂಧ ರಮೇಶ್ ಹಾಗೂ ಇತರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಮೇಶ್ ವಿರುದ್ಧ  ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು ಮಾಡಲಾಗಿದೆ.

ಉಷಾರಾಣಿ ಅಂತಾರಾಷ್ಟ್ರೀ ಕಬ್ಬಡ್ಡಿ ಆಟಗಾರ್ತಿ. ಏಷ್ಯನ್ ಗೇಮ್​ನಲ್ಲಿ ಇವರು ಸಿಲ್ವರ್ ಮೆಡಲ್ ಹಾಗೂ ಸೌತ್ ಏಷಿಯನ್ ಗೇಮ್​ನಲ್ಲಿ ಗೋಲ್ಡ್ ಮೆಡಲಿಸ್ಟ್ ಪಡೆದಿದ್ದಾರೆ. ಮುನಿರಾಜು ಕಬ್ಬಡಿ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ನರಸಿಂಹ ಕ್ಯಾಂಪ್ ಕೋಚ್​ ಆಗಿದ್ದಾರೆ.
First published: January 22, 2020, 8:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories