ಸಿಎಂ ಯಡಿಯೂರಪ್ಪ ಹೇಳಿದಂತೆ ನಡೆದುಕೊಳ್ಳಲಿ; ಶಾಸಕ ಕೆ ಸುಧಾಕರ್​​

ಹೈಕಮಾಂಡ್​ , ಬೇರೊಂದು ಗೊತ್ತಿಲ್ಲ. ನಮಗೆ ಸಚಿವ ಸ್ಥಾನದ ಭರವಸೆ ನೀಡಿದ್ದು ಯಡಿಯೂರಪ್ಪ.  ಅವರ ಮಾತಿನ ಆಧಾರದ ಮೇಲೆ ನಾವು ಕಾಯುತ್ತಿದ್ದೇವೆ. ಯಡಿಯೂರಪ್ಪ ಅವರು ಹೇಳಿದಂತೆ ನಡೆದುಕೊಳ್ಳಬೇಕು -ಕೆ ಸುಧಾಕರ್​​

Seema.R | news18-kannada
Updated:January 13, 2020, 12:53 PM IST
ಸಿಎಂ ಯಡಿಯೂರಪ್ಪ ಹೇಳಿದಂತೆ ನಡೆದುಕೊಳ್ಳಲಿ; ಶಾಸಕ ಕೆ ಸುಧಾಕರ್​​
ಡಾ. ಸುಧಾಕರ್
  • Share this:
ಚಿಕ್ಕಬಳ್ಳಾಪುರ (ಜ.13): ಬಿಜೆಪಿ ಸರ್ಕಾರ ರಚಿಸಲು ಸಹಾಯ ಮಾಡಿದ ಕಾಂಗ್ರೆಸ್​-ಜೆಡಿಎಸ್​ ತೊರೆದು ಬಂದ ಎಲ್ಲರಿಗೂ ಸಚಿವ ಸ್ಥಾನದ ಭರವಸೆಯನ್ನು ಸಿಎಂ ಬಿಎಸ್​ ಯಡಿಯೂರಪ್ಪ ನೀಡಿದ್ದರು. ಅದರಂತೆ ಮುಖ್ಯಮಂತ್ರಿಗಳು ನಡೆದುಕೊಳ್ಳಬೇಕು ಎಂದು ಚಿಕ್ಕಬಳ್ಳಾಪುರ ನೂತನ ಬಿಜೆಪಿ ಶಾಸಕ ಕೆ ಸುಧಾಕರ್​ ಆಗ್ರಹಿಸಿದ್ದಾರೆ. 

ಸಚಿವ ಸಂಪುಟ ವಿಸ್ತರಣೆಗೆ ವಿಳಂಬ ನೀತಿ ತೋರುತ್ತಿದ್ದು, ಈಗ ಎಂಟು ಜನರಿಗೆ ಮಾತ್ರ ಸಚಿವ ಸ್ಥಾನ ಎಂಬ ಮಾತು ಬಿಜೆಪಿ ಸರ್ಕಾರದಲ್ಲಿ ಕೇಳಿ ಬರುತ್ತಿದೆ. ಈ ಕುರಿತು ಮಾತನಾಡಿದ ಅವರು, ಎಷ್ಟು ಜನರಿಗೆ ಮಂತ್ರಿ ಸ್ಥಾನ ನೀಡಲಿದ್ದಾರೆ ಎಂಬ ಬಗ್ಗೆ ನಮಗೆ ಹೈ ಕಮಾಂಡ್​ ಏನು ಹೇಳಿಲ್ಲ. ಸಂಕ್ರಾಂತಿ ಬಳಿಕ ಎಲ್ಲರಿಗೂ ಅವಕಾಶ ಮಾಡಿಕೊಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ನಾಯಕರು ಮಾಧ್ಯಮಗಳ ಮುಂದೆ ಏನು ಹೇಳಿದ್ದರೋ ಗೊತ್ತಿಲ್ಲ. ಆದರೆ, ಸಿಎಂ ಬಿಎಸ್​ ಯಡಿಯೂರಪ್ಪ ಮಾತಿನ ಮೇಲೆ ನಂಬಿಕೆ ಇಟ್ಟಿದ್ದೇವೆ. ಸ್ವಲ್ಪ ದಿನ ಕಾಯೋಣ. ಇದಕ್ಕೆ ಸಹಕರಿಸಿ ಎಂದಿದ್ದಾರೆ. ಅದರಂತೆ ನಾವು ಸಮ್ಮನಿದ್ದೇವೆ ಎಂದರು

ಇದನ್ನು ಓದಿ: ಸಂಪುಟ ವಿಸ್ತರಣೆ ಕಗ್ಗಂಟು: ಅಮಿತ್ ಶಾ ಭೇಟಿಗೆ ಸಿಎಂ ಬಿಎಸ್​ವೈ ನಾಳೆ ದೆಹಲಿಗೆ?

ಹೈಕಮಾಂಡ್​ , ಬೇರೊಂದು ಗೊತ್ತಿಲ್ಲ. ನಮಗೆ ಸಚಿವ ಸ್ಥಾನದ ಭರವಸೆ ನೀಡಿದ್ದು, ಯಡಿಯೂರಪ್ಪ.  ಅವರ ಮಾತಿನ ಆಧಾರದ ಮೇಲೆ ನಾವು ಕಾಯುತ್ತಿದ್ದೇವೆ. ಆಂತರಿಕ ವಿಚಾರಗಳ ಕುರಿತು ಮಾಧ್ಯಮಗಳ ಮುಂದೆ ಹೇಳಿಕೆ ಸರಿಯಲ್ಲ. ಯಡಿಯೂರಪ್ಪ ಅವರು ಕೂಡ ಹೇಳಿದಂತೆ ನಡೆದುಕೊಳ್ಳಬೇಕು ಎಂದರು.

ಉಪಚುನಾವಣೆಯಲ್ಲಿ ಗೆದ್ದ 8 ನೂತನ ಬಿಜೆಪಿ ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡುವ ಕುರಿತು ಬಿಜೆಪಿ ಚಿಂತಿಸುತ್ತಿದೆ ಎನ್ನಲಾಗುತ್ತಿದೆ. ಈ ನಡುವೆ ಸಚಿವ ಸಂಪುಟ ವಿಸ್ತರಣೆ ದಿನಾಂಕ ಮುಂದೆ ಹೋಗುತ್ತಿದ್ದು, ಯಡಿಯೂರಪ್ಪ ಮೇಲೆ ಸಚಿವಾಕಾಂಕ್ಷಿಗಳ ಒತ್ತಡವೂ ಕೂಡ ಹೆಚ್ಚಿದೆ.
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ