ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಕಮಲ ಅರಳೋದು ಗ್ಯಾರಂಟಿ ; ಬಿ.ವೈ.ವಿಜಯೇಂದ್ರ

ಸಂಸದೆ ಸುಮಲತಾ ಅಂಬರೀಶ್ ಬೆಂಬಲದ ವಿಚಾರದಲ್ಲಿ ಈಗಾಗಲೇ ಪಕ್ಷದ ವರಿಷ್ಠರು ಮಾತನಾಡಿದ್ದಾರೆ‌. ನಾವು ಅವರನ್ನು ಬೆಂಬಲಿಸಿದ್ದ ಕಾರಣಕ್ಕೆ ಅವರು ನಮ್ಮನ್ನು‌ ಬೆಂಬಲಿಸುವ ವಿಶ್ವಾಸ ಇದೆ ಎಂದರು

G Hareeshkumar | news18-kannada
Updated:November 21, 2019, 2:11 PM IST
ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಕಮಲ ಅರಳೋದು ಗ್ಯಾರಂಟಿ ; ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ
  • Share this:
ಮಂಡ್ಯ(ನ.21): ಈ ಬಾರಿ ಜಿಲ್ಲೆಯಲ್ಲಿ ಕಮಲ ಅರಳೋದು ಗ್ಯಾರಂಟಿ. ನಾವು ಕೂಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ರಣತಂತ್ರ ರೂಪಿಸಿದ್ದೇವೆ. ಅಭಿವೃದ್ಧಿ ಮೂಲ ಮಂತ್ರದ ಅಜೆಂಡಾದ ಮೂಲಕ ಕ್ಷೇತ್ರದ ಜನರ ಮತ ಕೇಳುತ್ತೇವೆ ಎಂದು ಬಿಜೆಪಿ ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. 

ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಜಿಲ್ಲೆಯ ಮತ್ತು ಕ್ಷೇತ್ರದ ಅಭಿವೃದ್ಧಿ ಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಜನರು ಕೈ ಬಿಡಲ್ಲ ಅನ್ನೋ ವಿಶ್ವಾಸವಿದ್ದು ಯಡಿಯೂರಪ್ಪ ನವರನ್ನು ಜನರು ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು.

ಸಂಸದೆ ಸುಮಲತಾ ಅಂಬರೀಶ್ ಬೆಂಬಲದ ವಿಚಾರದಲ್ಲಿ ಈಗಾಗಲೇ ಪಕ್ಷದ ವರಿಷ್ಠರು ಮಾತನಾಡಿದ್ದಾರೆ‌. ನಾವು ಅವರನ್ನು ಬೆಂಬಲಿಸಿದ್ದ ಕಾರಣಕ್ಕೆ ಅವರು ನಮ್ಮನ್ನು‌ ಬೆಂಬಲಿಸುವ ವಿಶ್ವಾಸ ಇದೆ ಎಂದರು.

ಸಚಿವ ಜೆ ಸಿ ಮಾಧುಸ್ವಾಮಿ ಅವರನ್ನು ಕೆ ಆರ್​ ಪೇಟೆ ಉಸ್ತುವಾರಿಯಿಂದ ಕೈಬಿಟ್ಟ ಬಗ್ಗೆ ಮಾತನಾಡಲು ನಿರಾಕರಿಸಿದ ವಿಜಯೇಂದ್ರ ಅವರು, ಈ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಪೊಲೀಸ್ ಭದ್ರತೆ ನಿರಾಕರಿಸಿ ಹೊರಟ ಅನರ್ಹ ಶಾಸಕ

ನಿಮ್ಮ ಭದ್ರತೆಯಿಂದಾಗಿ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತಿದೆ. ದಯಮಾಡಿ ನೀವು ಭದ್ರತೆ ವಾಪಸ್ಸು ಪಡೆದುಕೊಳ್ಳಿ, ನೀವು ಜನ ಸೇವೆಗಾಗಿ ನಿಮ್ಮಕೆಲಸ ಮಾಡಿ. ನನ್ನ ಜೀವದ ಬಗ್ಗೆ ಚಿಂತೆ ಬೇಡ. ನಾನು ಇದೇ ತಾಲೂಕಿನ ಮಗ. ಏನಾಗಬೇಕು ಅಂತಿದ್ರೆ ಅದು‌ ಆಗೇ ಅಗುತ್ತದೆ. ಅವರಿಗೇ ಏನು‌ಮಾಡೋಕೆ ಸಾಧ್ಯವಾಗುತ್ತೋ‌ ಮಾಡಲಿ ಬಿಡಿ. ನಾನು ಯಾವುದಕ್ಕೂ ಹೆದರಲ್ಲ, ಹಿಂದೆ ಬರಬೇಡಿ ಎಂದು  ಬಿಜೆಪಿ ಅಭ್ಯರ್ಥಿ ನಾರಾಯಣಗೌಡ. ಪೊಲೀಸರಿಗೆ ಕೈ ಮುಗಿದು ವಿನಂತಿಸಿಕೊಂಡಿದ್ದಾರೆ.
First published: November 21, 2019, 1:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading