ಡಿಕೆಶಿ ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಾಜಿ ಕಾಂಗ್ರೆಸ್​​ ಶಾಸಕ ಕೆ.ಎನ್​​ ರಾಜಣ್ಣ ಇಡಿ ವಿಚಾರಣೆ ಅಂತ್ಯ

ಕಳೆದ ಬಾರಿಯೂ ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದೆ. ಈ ಉತ್ತರಕ್ಕೆ ಪೂರಕವಾದ ದಾಖಲೆಗಳನ್ನು ಕೊಡಲಿಕ್ಕೆ ಹೇಳಿದ್ದರು. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕೊಟ್ಟು ಬಂದಿದ್ದೇನೆ ಎಂದರು ಕೆ.ಎನ್​​ ರಾಜಣ್ಣ. 

news18-kannada
Updated:October 16, 2019, 6:28 PM IST
ಡಿಕೆಶಿ ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಾಜಿ ಕಾಂಗ್ರೆಸ್​​ ಶಾಸಕ ಕೆ.ಎನ್​​ ರಾಜಣ್ಣ ಇಡಿ ವಿಚಾರಣೆ ಅಂತ್ಯ
ಕೆಎನ್ ರಾಜಣ್ಣ
  • Share this:
ಬೆಂಗಳೂರು(ಅ.16): ಮಾಜಿ ಸಚಿವ​​ ಡಿ.ಕೆ ಶಿವಕುಮಾರ್​​​​ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು, ಕಾಂಗ್ರೆಸ್​​ ಮಾಜಿ ಶಾಸಕ ಕೆ.ಎನ್​​ ರಾಜಣ್ಣರನ್ನು ವಿಚಾರಣೆಗೆ ಒಳಪಡಿಸಿದ್ದರು. ಇಂದು ಬುಧವಾರ ಮಧ್ಯಾಹ್ನ 12ಗಂಟೆಯಿಂದ ಸತತವಾಗಿ ನಡೆದ ಕೆ.ಎನ್ ರಾಜಣ್ಣವರ ವಿಚಾರಣೆಯೀಗ ಅಂತ್ಯಗೊಂಡಿದೆ.

ದೆಹಲಿಯ ಲೋಕನಾಯಕ ಭವನದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಮಾಜಿ ಶಾಸಕ ಕೆ.ಎನ್​​ ರಾಜಣ್ಣ ಮತ್ತು ಡಿಕೆಶಿ ನಡುವಿನ ಹಣ ವರ್ಗಾವಣೆ ಕುರಿತು ವಿಚಾರಣೆ ನಡೆಸಲಾಗಿದೆ. ಎರಡನೇ ಬಾರಿಗೆ ವಿಚಾರಣೆಗೆ ಹಾಜರಾಗಿದ್ದ ಕೆ.ಎನ್​​​​ ರಾಜಣ್ಣ ವಿಚಾರಣೆ ಇಂದಿಗೆ ಬಹುತೇಕ ಮುಗಿದಿದೆ ಎನ್ನಲಾಗಿದೆ.

ವಿಚಾರಣೆ ಬಳಿಕ ನ್ಯೂಸ್​​-18 ಕನ್ನಡದೊಂದಿಗೆ ಮಾತಾಡಿದ .ಕೆ.ಎನ್​​ ರಾಜಣ್ಣ, ಇಡಿ ಅಧಿಕಾರಿಗಳು ಕೇಳಿದ ದಾಖಲೆಗಳನ್ನು ಕೊಟ್ಟಿದ್ದೇನೆ. ಕಳೆದ ಬಾರಿಯೂ ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದೆ. ಈ ಉತ್ತರಕ್ಕೆ ಪೂರಕವಾದ ದಾಖಲೆಗಳನ್ನು ಕೊಡಲಿಕ್ಕೆ ಹೇಳಿದ್ದರು. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕೊಟ್ಟು ಬಂದಿದ್ದೇನೆ ಎಂದರು.

ಇನ್ನು ಸಾಲ ಕೊಟ್ಟಿದರ ಬಗ್ಗೆ ಏನು ಪ್ರಸ್ತಾಪವಾಗಿಲ್ಲ. ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿಲ್ಲ. ಕೇವಲ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಾಲದ ವಿವರ ಕೊಟ್ಟಿಲ್ಲ. ಇಲ್ಲಿಯವರೆಗೂ ಒಟ್ಟು 28 ಶುಗರ್ ಪ್ರಾಕ್ಟರಿಗೆ ನೀಡಿದ್ದ ಸಾಲದ ವಿವರ ನೀಡಿದ್ದೇವೆ. ಅವರಿಗೆ ಯಾವುದು ಬೇಕೋ ಅದನ್ನ ನೋಡಿಕೊಳ್ಳಲಿ ಎಂದು ಕೆ.ಎನ್​​ ರಾಜಣ್ಣ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಉಪಚುನಾವಣೆ ಮೋದಿ ಹೆಸರಿನಲ್ಲಿ ನಡೆಯಲಿದೆ; ಪ್ರಧಾನಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ನಾಯಕಬೇಕು; ಎಚ್​​.ಡಿ ದೇವೇಗೌಡ

ಡಿಕೆಶಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಕೆ.ಎನ್​​ ರಾಜಣ್ಣಗೆ ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರಣೆ ಬೆನ್ನಲ್ಲೀ ಇಡಿ ನೋಟೀಸ್ ನೀಡಿತ್ತು. ಆದರೆ, ಅದಕ್ಕೆ ಕೆ.ಎನ್​​ ರಾಜಣ್ಣ ಸ್ಪಂದಿಸಿರಲಿಲ್ಲ. ಬಳಿಕ ವಿಚಾರಣೆಗೆ ಹಾಜರಾಗುವಂತೆ ಮತ್ತೊಮ್ಮೆ ಇಡಿ ನೋಟೀಸ್ ಕಳುಹಿಸಿತ್ತು. ಅದರಂತೆಯೇ ಕೆ.ಎನ್​​ ರಾಜಣ್ಣ ಎರಡು ಬಾರಿ ವಿಚಾರಣೆಗೆ ಹಾಜರಾಗಿದ್ದರು.

ಏನಿದು ಡಿಕೆಶಿ ಪ್ರಕರಣ?: ದೆಹಲಿಯಲ್ಲಿರುವ ಡಿ.ಕೆ. ಶಿವಕುಮಾರ್​ ಅವರಿಗೆ ಸೇರಿದ ಫ್ಲಾಟ್​ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಅಕ್ರಮ ಹಣ ಪತ್ತೆಯಾಗಿತ್ತು. ಡಿಕೆಶಿ ಹಾಗೂ ಆಪ್ತರ ಮನೆಗಳಲ್ಲಿ ಐಟಿ ಅಧಿಕಾರಿಗಳು 8.59 ಕೋಟಿ ಹಣ ಜಪ್ತಿ ಮಾಡಿದ್ದರು. ಇಡಿ ಸಮನ್ಸ್ ರದ್ದು ಕೋರಿ ಸಚಿವ ಡಿಕೆಶಿ ಹಾಗೂ ಆಪ್ತರು ಅರ್ಜಿ ಸಲ್ಲಿಸಿದ್ದರು. ಹಣದ ಮೂಲದ ಬಗ್ಗೆ ವಿವರಣೆ ನೀಡುವಂತೆ ಡಿಕೆಶಿ ಮತ್ತು ಆಪ್ತರಿಗೆ ಇಡಿ ಸಮನ್ಸ್ ನೀಡಿತ್ತು.----------
First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ