ಮಧ್ಯಪ್ರದೇಶದ ಕಾಂಗ್ರೆಸ್​ನಲ್ಲಿ ಹೊಸ ಆತಂಕ; ಸೋಷಿಯಲ್ ಮೀಡಿಯಾದಲ್ಲಿ ಕೈ ಕೊಂಡಿ ಕಳಚಿದ ಜ್ಯೋತಿರಾದಿತ್ಯ ಸಿಂಧ್ಯ

ಸಿಂಧ್ಯ ಅವರಂತಹ ನಿಷ್ಠಾವಂತ ನಾಯಕರು ಪಕ್ಷ ಬಿಡುವ ಕೆಲಸಕ್ಕೆ ಕೈಹಾಕಲಾರರು. ಟ್ವಿಟ್ಟರ್​ನಲ್ಲಿ ಅವರ ವಿವರ ಬದಲಾಯಿಸಿಕೊಂಡಿರುವದನ್ನೇ ಇಟ್ಟುಕೊಂಡು ಸಲ್ಲದ ಊಹಾಪೋಹ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ವಕ್ತಾರ ಭೂಪೇಂದ್ರ ಗುಪ್ತ ಹೇಳಿದ್ದಾರೆ.

Vijayasarthy SN | news18
Updated:November 25, 2019, 1:26 PM IST
ಮಧ್ಯಪ್ರದೇಶದ ಕಾಂಗ್ರೆಸ್​ನಲ್ಲಿ ಹೊಸ ಆತಂಕ; ಸೋಷಿಯಲ್ ಮೀಡಿಯಾದಲ್ಲಿ ಕೈ ಕೊಂಡಿ ಕಳಚಿದ ಜ್ಯೋತಿರಾದಿತ್ಯ ಸಿಂಧ್ಯ
ಜ್ಯೋತಿರಾದಿತ್ಯ ಸಿಂಧ್ಯ
  • News18
  • Last Updated: November 25, 2019, 1:26 PM IST
  • Share this:
ಭೋಪಾಲ್(ನ. 25): ಮಹಾರಾಷ್ಟ್ರದಲ್ಲಿ ಎನ್​​ಸಿಪಿ ನಾಯಕ ಅಜಿತ್ ಪವಾರ್ ಅವರಿಂದ ಶಾಕ್ ಹೊಡೆಸಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಮಧ್ಯ ಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧ್ಯ ಆತಂಕ ತಂದಿಟ್ಟಿದ್ದಾರೆ. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟು ವಂಚಿತರಾಗಿದ್ದ ಜ್ಯೋತಿರಾದಿತ್ಯ ಸಿಂಧ್ಯ ಇದೀಗ ತಮ್ಮ ಟ್ವಿಟ್ಟರ್​ನಲ್ಲಿ ಪ್ರೊಫೈಲ್​ನಲ್ಲಿ ಕಾಂಗ್ರೆಸ್ ಜೊತೆಗಿನ ನಂಟನ್ನು ಕಳಚಿದ್ದಾರೆ. ತಮ್ಮ ರಾಜಕಾರಣ ಮತ್ತು ಮಂತ್ರಿಗಿರಿಯ ವಿವರಗಳನ್ನು ಟ್ವಿಟ್ಟರ್​ನಿಂದ ಕೈಬಿಟ್ಟಿದ್ದಾರೆ. “ಜನಸೇವಕ ಮತ್ತು ಕ್ರಿಕೆಟ್ ಉತ್ಸಾಹಿ” ಎಂದಷ್ಟೇ ತಮ್ಮ ವಿವರ ನೀಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಬಹುಮತ ಗಳಿಸಿ ಅಧಿಕಾರ ಹಿಡಿದಾಗ ಜ್ಯೋತಿರಾದಿತ್ಯ ಸಿಂಧ್ಯ ಸಿಎಂ ಸ್ಥಾನದ ರೇಸ್​ನಲ್ಲಿದ್ದರು. ಆದರೆ, ಹಿರಿಯ ನಾಯಕ ಕಮಲನಾಥ್ ಅವರಿಗೆ ಹೈಕಮಾಂಡ್ ಮಣೆಹಾಕಿತು. ಆಗ ಸಿಂಧ್ಯಗೆ ಅಸಮಾಧಾನವಾದರೂ ಬಹಿರಂಗವಾಗಿ ಅದನ್ನು ಅವರು ಹೆಚ್ಚಾಗಿ ವ್ಯಕ್ತಪಡಿಸಿರಲಿಲ್ಲ. ಆ ನಂತರ ದಿನಗಳಲ್ಲೂ ಜ್ಯೋತಿರಾದಿತ್ಯ ಸಿಂಧ್ಯ ಅವರನ್ನು ಪಕ್ಷದ ವ್ಯವಹಾರಗಳಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿತ್ತು. ಆ ರಾಜ್ಯದ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೂ ಸಿಂಧ್ಯ ರೇಸ್​ನಲ್ಲಿದ್ದರು. ಕಾರಣಾಂತರದಿಂದ ಅಧ್ಯಕ್ಷ ಆಯ್ಕೆಯನ್ನು ಅನಿರ್ದಿಷ್ಟಾವಧಿಗೆ ಪಕ್ಷವು ಮುಂದೂಡಿದೆ. ಈ ಹತಾಶೆಯನ್ನು ಸಿಂಧ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿರಬಹುದು. ಅಥವಾ ಎಂಪಿಸಿಸಿ ಅಧ್ಯಕ್ಷ ಸ್ಥಾನ ತನಗೆ ಸಿಗಲೆಂದು ವರಿಷ್ಠರ ಮೇಲೆ ಮಾನಸಿಕವಾಗಿ ಒತ್ತಡ  ಹಾಕಲು ಅವರು ಈ ರೀತಿ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಕೊಲೆ ನಡೆದಿದೆ; ಸಂಸತ್ತಿನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ, ಅಧಿವೇಶನ ಮೂಂದೂಡಿಕೆ

ಜ್ಯೋತಿರಾದಿತ್ಯ ಸಿಂಧ್ಯ ಬಿಜೆಪಿಗೆ ಹೋದರೂ ಅಚ್ಚರಿ ಇಲ್ಲ ಎನ್ನುತ್ತವೆ ಕೆಲ ಮೂಲಗಳು. ಆದರೆ, ಸಿಂಧ್ಯ ಅವರಂತಹ ನಿಷ್ಠಾವಂತ ನಾಯಕರು ಅಂತಹ ಕೆಲಸಕ್ಕೆ ಕೈಹಾಕಲಾರರು. ಟ್ವಿಟ್ಟರ್​ನಲ್ಲಿ ಅವರ ವಿವರ ಬದಲಾಯಿಸಿಕೊಂಡಿರುವದನ್ನೇ ಇಟ್ಟುಕೊಂಡು ಸಲ್ಲದ ಊಹಾಪೋಹ ಮಾಡುವುದು ಸರಿಯಲ್ಲ. ಈ ಬಗ್ಗೆ ಅವರಲ್ಲೇ ಸ್ಪಷ್ಟನೆ ಪಡೆಯಿರಿ ಎಂದು ಕಾಂಗ್ರೆಸ್ ವಕ್ತಾರ ಭೂಪೇಂದ್ರ ಗುಪ್ತ ಹೇಳಿದ್ದಾರೆ.

ಆದರೆ, ಮಹಾರಾಷ್ಟ್ರ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಹೊಸ್ತಿಲಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಎನ್​ಸಿಪಿ ನಾಯಕ ಅಜಿತ್ ಪವಾರ್ ಕೊನೆಯ ಕ್ಷಣದಲ್ಲಿ ಶಾಕ್ ಕೊಟ್ಟಿದ್ದರು. ಈಗ ಮಧ್ಯಪ್ರದೇಶದಲ್ಲಿ ಸರಳ ಬಹುಮತದೊಂದಿಗೆ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್​ಗೆ ಜ್ಯೋತಿರಾದಿತ್ಯ ಸಿಂಧ್ಯ ಕೈಕೊಟ್ಟರೆ ಸರ್ಕಾರ ಪತನವಾಗಬಹುದು ಎಂಬ ಭೀತಿಯಂತೂ ಇದೆ. ಆದರೆ, ಕಟ್ಟರ್ ಕಾಂಗ್ರೆಸ್ಸಿಗರಾಗಿರುವ ಜ್ಯೋತಿರಾದಿತ್ಯ ಸಿಂಧ್ಯ ಅವರು ಪಕ್ಷಾಂತರ ಮಾಡುವಷ್ಟು ಮಟ್ಟಕ್ಕೆ ಹೋಗಲಾರರು. ಪಕ್ಷದ ರಾಜ್ಯ ಘಟಕದ ಚುಕ್ಕಾಣಿ ಹಿಡಿಯುವುದು ಅವರ ಉದ್ದೇಶವಿರಬಹುದು ಎಂಬುದು ಅಲ್ಲಿನ ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 25, 2019, 1:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading