ಭಾರೀ ಮೊತ್ತದ ಟ್ರಾಫಿಕ್ ದಂಡಕ್ಕೆ ಹೆದರಿದ್ದೀರ? ಹಾಗಾದರೆ, ನಿಮ್ಮ ಹಣ ಉಳಿಸಿಕೊಳ್ಳಲು ಹೀಗೆ ಮಾಡಿ!

ನೂತನವಾಗಿ ಜಾರಿಯಾಗಿರುವ ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ಜನ ಭಾರೀ ದಂಡದಿಂದ ತಪ್ಪಿಸಿಕೊಳ್ಳಲು ಸಹ ಅವಕಾಶ ಇದೆ. ಆದರೆ, ಇದು ಹೆಚ್ಚು ಜನರಿಗೆ ತಿಳಿದಿಲ್ಲ.

MAshok Kumar | news18-kannada
Updated:September 11, 2019, 11:25 AM IST
ಭಾರೀ ಮೊತ್ತದ ಟ್ರಾಫಿಕ್ ದಂಡಕ್ಕೆ ಹೆದರಿದ್ದೀರ? ಹಾಗಾದರೆ, ನಿಮ್ಮ ಹಣ ಉಳಿಸಿಕೊಳ್ಳಲು ಹೀಗೆ ಮಾಡಿ!
ಸಾಂದರ್ಭಿಕ ಚಿತ್ರ.
  • Share this:
ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಮೋಟಾರು ವಾಹನ ಕಾಯ್ದೆ-2019ರ ಅನ್ವಯ ಸಂಚಾರಿ ನಿಯಮವನ್ನು ಉಲ್ಲಂಘಿಸಿದವರಿಗೆ ಭಾರೀ ಮೊತ್ತದ ದಂಡ ವಿಧಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಈ ನೀತಿಗೆ ರಾಷ್ಟ್ರದಾದ್ಯಂತ ಸಾಮಾನ್ಯ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸಲು ಭಾರೀ ಮೊತ್ತದ ದಂಡ ಅನಿವಾರ್ಯ ಎಂಬುದು ಸರ್ಕಾರದ ವಾದ. ಆದರೆ, ಸಣ್ಣ ತಪ್ಪಿಗೂ 80 ಸಾವಿರದ ವರೆಗೆ ದಂಡ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ಸಮಾಜ ವಿವಿಧ ಸ್ತರದ ಎಲ್ಲಾ ಜನರೂ ಇದನ್ನು ಕಟುವಾಗಿ ವಿಮರ್ಶಿಸುತ್ತಿದ್ದಾರೆ.

ಆದರೆ, ನೂತನವಾಗಿ ಜಾರಿಯಾಗಿರುವ ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ಜನ ಭಾರೀ ದಂಡದಿಂದ ತಪ್ಪಿಸಿಕೊಳ್ಳಲು ಸಹ ಅವಕಾಶ ಇದೆ. ಆದರೆ, ಇದು ಹೆಚ್ಚು ಜನರಿಗೆ ತಿಳಿದಿಲ್ಲ.

ನೀವು ವಾಹನ ಚಲಾಯಿಸುವಾಗ ಸೂಕ್ತ ದಾಖಲೆಗಳು ನಿಮ್ಮ ಬಳಿ ಇಲ್ಲದಿದ್ದರೆ ನೀವು ಭಾರೀ ಪ್ರಮಾಣದ ದಂಡ ತೆರಬೇಕಾಗಿಲ್ಲ. ಬದಲಿಗೆ, ಸ್ಥಳದಲ್ಲೇ ಪೊಲೀಸರಿಗೆ 100 ರೂ. ಮಾತ್ರ ಪಾವತಿ ರಶೀದಿ ಪಡೆಯುವ ಮೂಲಕ ದುಬಾರಿ ದಂಡದಿಂದ ತಪ್ಪಿಸಿಕೊಳ್ಳಬಹುದು.

ಮೋಟಾರು ಕಾಯ್ದೆಯ ಅನ್ವಯ ವಾಹನ ಚಲಾಯಿಸುವಾಗ ಅಗತ್ಯವಾದ ದಾಖಲೆಗಳು ನಿಮ್ಮ ಬಳಿ ಇಲ್ಲದಿದ್ದರೆ, ಪೊಲೀಸರಿಗೆ 100 ರೂ ದಂಡ ಕಟ್ಟಿ ದಾಖಲೆಗಳನ್ನು ತೋರಿಸಲು 15 ದಿನಗಳ ಕಾಲಾವಕಾಶವನ್ನು ಪಡೆಯಬಹುದು. ನಂತರ ಮುಂದಿನ 15 ದಿನಗಳಲ್ಲಿ ಸಂಬಂಧಪಟ್ಟ ಸಂಚಾರಿ ಪೊಲೀಸ್ ಠಾಣೆಗೆ ತೆರಳಿ ನಿಮ್ಮ ದಾಖಲೆಗಳನ್ನು ನೀಡಿ ದಂಡವಾಗಿ ನೀಡಿದ 100 ರೂಪಾಯಿಯನ್ನು ಹಿಂದಿರುಗಿ ಪಡೆಬಹುದು.

ಆದರೆ, ನೀವು ದಾಖಲೆಗಳನ್ನು 15 ದಿನಗಳ ಒಳಗಾಗಿ ಸಂಚಾರಿ ಪೊಲೀಸ್ ಠಾಣೆಗೆ ನೀಡಲೇಬೇಕು. ಇಲ್ಲದಿದ್ದರೆ ದಂಡದ ಪ್ರಮಾಣ ಮತ್ತಷ್ಟು ಅಧಿಕವಾಗುತ್ತದೆ. ಅಲ್ಲದೆ ಕಠಿಣ ಕಾನೂನು ಕ್ರಮವನ್ನೂ ಜರುಗಿಸಲಾಗುತ್ತದೆ. ಈ ಸೌಲಭ್ಯವನ್ನು ನೀವು ಉಪಯೋಗಿಸಿಕೊಳ್ಳಬೇಕು ಎಂದರೆ ಎಲ್ಲಾ ದಾಖಲೆಗಳು ನಿಮ್ಮ ಬಳಿ ಇರಲೇಬೇಕು ಎಂಬುದು ಉಲ್ಲೇಖಾರ್ಹ.

ಇದನ್ನೂ ಓದಿ : New Traffic Rules: ಲುಂಗಿ ಉಟ್ಟಿದ್ದಕ್ಕೆ 2 ಸಾವಿರ ರೂ. ದಂಡ ಕಟ್ಟಿದ ಚಾಲಕ!
First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ