Suicide: ಮದುವೆಯಾಗಿ ಕೇವಲ 15 ದಿನಕ್ಕೆ ನವವಿವಾಹಿತೆ ಆತ್ಮಹತ್ಯೆ! ಕಾರಣ ನೋಡಿ

ಒಲ್ಲದ ವಿವಾಹಕ್ಕೆ ನವವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರು ಹೊರವಲಯದ ಅಂಬ್ಲಮೊಗರು ಎಂಬಲ್ಲಿ ನಡೆದಿದೆ. ರಶ್ಮಿ (24) ಆತ್ಮಹತ್ಯೆಗೆ ಶರಣಾದ ನವ ವಿವಾಹಿತೆ. ರಶ್ಮಿಗೆ ಕೇವಲ 15 ದಿನಗಳ ಹಿಂದೆ ವಿವಾಹವಾಗಿತ್ತು.

ಮಂಗಳೂರಿನಲ್ಲಿ ನವವಿವಾಹಿತೆ ಸೂಸೈಡ್

ಮಂಗಳೂರಿನಲ್ಲಿ ನವವಿವಾಹಿತೆ ಸೂಸೈಡ್

  • Share this:
ಮದುವೆ (Marriage) ಅನ್ನೋದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೆ ಅಂತಾರೆ. ಆದರೆ ಅದೆಷ್ಟೋ ಮದುವೆಗಳು ಕೊಂಚ ಸಮಯಕ್ಕೆ ಮುರಿದು ಬೀಳುತ್ತವೆ. ಇನ್ನು ಪ್ರೀತಿಸಿದವರನ್ನು ಮದುವೆ (Love Marriage) ಆಗಬೇಕೆಂದರೆ ಪುಣ್ಯ ಮಾಡಿರಬೇಕು. ಎಷ್ಟೋ ಸಲ ಜಾತಿ (Caste Problem) , ಮನೆಯವರ ಒಪ್ಪಿಗೆ ಸಿಗದೇ ಎಷ್ಟೋ ಪ್ರೀತಿ ಸಂಬಂಧಗಳು (Relationship) ದೂರಾಗುತ್ತವೆ. ಆಮೇಲೆ ಮದುವೆ ಆದ ಮೇಲೆ ಪಶ್ಚಾತ್ತಾಪ ಪಡ್ತಾರೆ. ಮಂಗಳೂರಿನಲ್ಲಿ ಒಲ್ಲದ ಮದುವೆಗೆ ಪ್ರಾಣವೇ ಹೋಗಿದೆ. ಮದುವೆ ಇಷ್ಟವಾಗದ್ದಕ್ಕೆ ನವವಿವಾಹಿತೆ (Newlyweds) ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಂಗಳೂರಿನ ಅಂಬ್ಲಮೊಗರು ಎಂಬಲ್ಲಿ ನಡೆದ ಘಟನೆ ನಡೆದಿದೆ. ಯುವತಿಗೆ ಕೇವಲ 15 ದಿನಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಆ ಸಂಭ್ರಮ ಇನ್ನೂ ಇರುವಾಗಲೇ ಮನೆ ಮಸಣವಾಗಿದೆ.

ಒಲ್ಲದ ವಿವಾಹಕ್ಕೆ ನವವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರು ಹೊರವಲಯದ ಅಂಬ್ಲಮೊಗರು ಎಂಬಲ್ಲಿ ನಡೆದಿದೆ. ರಶ್ಮಿ (24) ಆತ್ಮಹತ್ಯೆಗೆ ಶರಣಾದ ನವ ವಿವಾಹಿತೆ. ರಶ್ಮಿಗೆ ಕೇವಲ 15 ದಿನಗಳ ಹಿಂದೆ ವಿವಾಹವಾಗಿತ್ತು. ಅಷ್ಟರಲ್ಲೇ ಸೂಸೈಡ್ ಮಾಡಿಕೊಂಡಿದ್ದಾರೆ.

ಇಂಜಿನಿಯರ್​​ನನ್ನು ಮದುವೆಯಾಗಿದ್ದ ರಶ್ಮಿ!
ಮಂಗಳೂರಿನ ಗಂಜಿಮಠ ಮೂಲದ ದುಬೈಯಲ್ಲಿ ಇಂಜಿನಿಯರ್ ಆಗಿರುವ ಸಂದೀಪ್ ಅವರನ್ನು ರಶ್ಮಿ ವಿವಾಹವಾಗಿದ್ದರು. 15 ದಿನದ ಹಿಂದೆಯಷ್ಟೇ ಸಪ್ತಪದಿ ತುಳಿದು ಬಂದಿದ್ದರು. ಆದರೆ ಮದುವೆ ಇಷ್ಟ ಇಲ್ಲದ್ದಕ್ಕೆ ಸೆಪ್ಟೆಂಬರ್ 3 ರಂದು ಇಲಿ ಪಾಷಣ ಸೇವಿಸಿ ಅಸ್ವಸ್ಥಗೊಂಡಿದ್ದರು.

Just 15 days after marriage newlyweds commit suicide in mangaluru
ಮಂಗಳೂರಿನಲ್ಲಿ ನವವಿವಾಹಿತೆ ರಶ್ಮಿ ಸೂಸೈಡ್


ಅಕ್ಕನ ಮನೆಗೆ ತೆರಳಿ ಇಲಿ ಪಾಷಾಣ ಸೇವಿಸಿದ್ದ ರಶ್ಮಿ
ರಶ್ಮಿ ತನ್ನ ಅಕ್ಕನ ಮನೆಗೆ ಬಂದಿದ್ದರು. ಅಲ್ಲಿ ರಶ್ಮಿ ಇಲಿ ಪಾಷಣ ಸೇವಿಸಿ ಅತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಆಗ ಗಂಭೀರ ಸ್ಥಿತಿಯಲ್ಲಿದ್ದ ರಶ್ಮಿಯವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ರಶ್ಮಿ ಮೃತಪಟ್ಟಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Just 15 days after marriage newlyweds commit suicide in mangaluru
15 ದಿನದ ಹಿಂದೆಯಷ್ಟೇ ಮದುವೆಯಾಗಿದ್ದ ರಶ್ಮಿ


ಅನುಮಾನಸ್ಪದ ರೀತಿ ಕೆರೆಯಲ್ಲಿ ಯುವತಿಯ ಶವ ಪತ್ತೆ
ಮಂಡ್ಯದಲ್ಲಿ ಅನುಮಾನಸ್ಪದ ರೀತಿ ಕೆರೆಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಮಂಡ್ಯದ ಮೇಲುಕೋಟೆಯ ಹೊಸಕೆರೆಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಸುಮಾರು 16 ರಿಂದ 17 ವಯಸ್ಸಿನ ಅಪ್ರಾಪ್ತ ಯುವತಿ ಅಂತಾ ಗುರುತಿಸಲಾಗಿದೆ.

ಇದನ್ನೂ ಓದಿ: ಆಡಿಯೋ ವೈರಲ್​ಗೆ ನೊಂದು ಬೆಳಗಾವಿಯಲ್ಲಿ ಸ್ವಾಮೀಜಿ ಆತ್ಮಹತ್ಯೆ! ಮಠದಲ್ಲೇ ನೇಣುಬಿಗಿದುಕೊಂಡು ಸೂಸೈಡ್

ಕೆರೆಯ ಬಳಿ ಯುವತಿಯ ಚಪ್ಪಲಿ ಮತ್ತು ಬಟ್ಟೆ ಪತ್ತೆ
ಕೆರೆಯಲ್ಲಿ ತೇಲುತ್ತಿದ್ದ ಶವ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕೆರೆಯ ಬಳಿ ಯುವತಿಯ ಚಪ್ಪಲಿ ಮತ್ತು ಬಟ್ಟೆ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಕೆಆರ್ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ.

ಹೆದ್ದಾರಿಯಲ್ಲಿ ಎಮ್ಮೆಗೆ ಗುದ್ದಿದ ಕಾರು ಭಸ್ಮ!
ಮಂಡ್ಯದ ನಾಗಮಂಗಲದ ಬೆಳ್ಳೂರು ಕ್ರಾಸ್ ಬಳಿ ಬಿಜಿಎಸ್ ಆಸ್ಪತ್ರೆ ಮುಂಭಾಗ ಕಾರೊಂದು ಎಮ್ಮೆಗೆ ಗುದ್ದಿದ್ದು ಕ್ಷಣಾರ್ಧದಲ್ಲಿ ಕಾರು ಸುಟ್ಟು ಭಸ್ಮವಾಗಿದೆ. ಹಾಸನದ ಕಡೆಯಿಂದ ಬೆಂಗಳೂರು ಕಡೆ ಹೊರಟಿದ್ದ ಕ್ವಿಡ್ ಕಾರು ಭಸ್ಮವಾಗಿದೆ. ಏಕಾಏಕಿ ಬಂದ ಎಮ್ಮೆಗೆ ಕಾರು ಗುದ್ದಿದೆ.

ಕಾರು ಗುದ್ದುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಭಸ್ಮವಾಗಿದೆ. ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಕಾರಿನಿಂದ ಹೊರ ಬಂದು ಕಾರಿನಲ್ಲಿದ್ದವರು ಸೇಫ್ ಆಗಿದ್ದಾರೆ.

ಇದನ್ನೂ ಓದಿ: 2021ರಲ್ಲಿ ಕೆಲಸ ಸಿಗಲಿಲ್ಲ ಅಂತ ವಾರಕ್ಕೆ 50 ಆತ್ಮಹತ್ಯೆಗಳು: NCRB

ನೆಲಮಂಗಲದಲ್ಲಿ ಟೈರ್ ಬ್ಲಾಸ್ಟ್ ಆಗಿ ಡಿವೈಡರ್ ಮೇಲೆ ಪಲ್ಟಿಯಾಗಿ ಬಿದ್ದ ಕ್ಯಾಂಟರ್

ನೆಲಮಂಗಲದಲ್ಲಿ ಟೈರ್ ಬ್ಲಾಸ್ಟ್ ಆಗಿ ಡಿವೈಡರ್ ಮೇಲೆ ಕ್ಯಾಂಟರ್ ಒಂದು ಪಲ್ಟಿಯಾಗಿ ಬಿದ್ದಿದೆ. ಅದೃಷ್ಟವಶಾತ್ ಕ್ಯಾಂಟರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೆಲಮಂಗಲ ತಾಲೂಕಿನ ಎಡೆಹಳ್ಳಿ ಗ್ರಾಮ ಬಳಿ ಘಟನೆ ನಡೆದಿದೆ. ಕ್ಯಾಂಟರ್ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದ ಕಬ್ಬಿಣ ರೋಲ್ ಗಳನ್ನ ತೆಗೆದುಕೊಂಡು ಹೊರಟಿತ್ತು.
Published by:Thara Kemmara
First published: