• Home
  • »
  • News
  • »
  • state
  • »
  • Jr NTR: ಅಶ್ವಿನಿ, ಸುಧಾಮೂರ್ತಿ ಕುರ್ಚಿ ಒರೆಸಿದ ಜೂನಿಯರ್ ಎನ್​ಟಿಆರ್; ಸರಳತೆಗೆ ಫ್ಯಾನ್ಸ್​ ಫಿದಾ

Jr NTR: ಅಶ್ವಿನಿ, ಸುಧಾಮೂರ್ತಿ ಕುರ್ಚಿ ಒರೆಸಿದ ಜೂನಿಯರ್ ಎನ್​ಟಿಆರ್; ಸರಳತೆಗೆ ಫ್ಯಾನ್ಸ್​ ಫಿದಾ

ಜೂನಿಯರ್ ಎನ್​​ಟಿಆರ್​​

ಜೂನಿಯರ್ ಎನ್​​ಟಿಆರ್​​

ಇದೇ ವೇಳೆ ಜ್ಯೂನಿಯರ್ ಎನ್​ಟಿಆರ್​​ ಅಶ್ವಿನಿ ಅವರಿಗೆ ಕುರ್ಚಿ ಬಿಟ್ಟುಕೊಟ್ಟರು. ಅಶ್ವಿನಿಯವರು ಬೇಡ ಅಂದ್ರೂ ಕೇಳದೇ ಸೀಟು ಬಿಟ್ಟುಕೊಡ್ತಿದ್ದಾಗ ಜನ ಶಿಳ್ಳೆ ಚಪ್ಪಾಳೆ ಹೊಡೆದರು.

  • Share this:

ಬೆಂಗಳೂರಿನ ವಿಧಾನಸೌಧದಲ್ಲಿ (Vidhanasoudha) ಮಂಗಳವಾರ ಅದ್ಧೂರಿಯಾಗಿ ಮಳೆಯ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆ (Nadageethe) ಹಾಡಲಾಯ್ತು. ಈ ವೇಳೆ ವೇದಿಕೆ ಮೇಲಿದ್ದ ಎಲ್ಲಾ ಗಣ್ಯರು ಎದ್ದು ನಿಂತಿದ್ದರು. ಮಳೆ ಬರುತ್ತಿರುವ ಹಿನ್ನೆಲೆ ಕುರ್ಚಿಗಳ ಮೇಲೆ ನೀರು ಬಿದ್ದಿತ್ತು. ಈ ವೇಳೆ ನಟ ಜೂನಿಯರ್ ಎನ್​ಟಿಆರ್ (Junior NTR) ಭದ್ರತಾ ಸಿಬ್ಬಂದಿಯಿಂದ ಬಟ್ಟೆ ಪಡೆದುಕೊಂಡು ಅಶ್ವಿನಿ ಪುನೀತ್ ರಾಜ್​ಕುಮಾರ್ (Ashwini Puneeth Rajkumar) ಮತ್ತು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ (Sudhamurthy) ಅವರ ಕುರ್ಚಿ ಒರೆಸಿ ಕುಳಿತುಕೊಳ್ಳಲು ಅನುವು ಮಾಡಿಕೊಟ್ಟರು. ಇದೇ ವೇಳೆ ಜ್ಯೂನಿಯರ್ ಎನ್​ಟಿಆರ್​​ ಅಶ್ವಿನಿ ಅವರಿಗೆ ಕುರ್ಚಿ ಬಿಟ್ಟುಕೊಟ್ಟರು. ಅಶ್ವಿನಿಯವರು ಬೇಡ ಅಂದ್ರೂ ಕೇಳದೇ ಸೀಟು ಬಿಟ್ಟುಕೊಡ್ತಿದ್ದಾಗ ಜನ ಶಿಳ್ಳೆ ಚಪ್ಪಾಳೆ ಹೊಡೆದರು.


ಮರಣೋತ್ತರವಾಗಿ ಪುನೀತ್ ರಾಜ್‌ಕುಮಾರ್‌ ಅವರಿಗೆ ಸೂಪರ್‌ ಸ್ಟಾರ್ ರಜನಿಕಾಂತ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದರು. ಪುನೀತ್‌ ಪತ್ನಿ ಅಶ್ವಿನಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.


ಈ ವೇಳೆ ಅಶ್ವಿನಿ ಒಂದು ಕ್ಷಣ ಭಾವುಕರಾಗಿದ್ರು. ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ,  ಜೂನಿಯರ್ ಎನ್‌ಟಿಆರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಅಲ್ಲದ ಡಾ. ರಾಜ್​​ ಕುಟುಂಬದ ಸದಸ್ಯರು ಕೂಡ ಸಮಾರಂಭದಲ್ಲಿ ಹಾಜರಿದ್ದರು. ಮಳೆಯ ನಡುವೆಯೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.


Junior ntr cleans sudhamurthy and ashwini puneeth rajkumar chairs during karnataka ratna award program mrq
ಜೂನಿಯರ್ ಎನ್​​ಟಿಆರ್


ಈ ವೇಳೆ ಮಾತನಾಡಿದ ರಜನಿಕಾಂತ್‌, ‘ಪವರ್​ ಸ್ಟಾರ್​’ ವ್ಯಕ್ತಿತ್ವ ಮತ್ತು ಸಾಧನೆ ಬಗ್ಗೆ ಗುಣಗಾನ ಮಾಡಿದರು. ಜ್ಯೂ.NTR ಮಾತನಾಡಿದ್ದು, ರಾಜ್ಯವನ್ನೇ ಗೆದ್ದವರು ಯಾರಾದರೂ ಇದ್ದರೆ ಅದು ಪುನೀತ್ ಮಾತ್ರ. ಪುನೀತ್​ ನಗುವಿನ ಒಡೆಯ. ನನ್ನ ಪ್ರಕಾರ ಕರ್ನಾಟಕ ರತ್ನ ಅನ್ನೋದೇ ಪುನೀತ್​ ರಾಜ್​ಕುಮಾರ್ ಅಂತ ಹೇಳಿದರು. ಸಿಎಂ ಬೊಮ್ಮಾಯಿ ಸಹ ಪುನೀತ್‌ರನ್ನು ಹಾಡಿ ಹೊಗಳಿದರು.


ಇದ್ದಕ್ಕೂ ಮೊದಲು ವಿಧಾನಸೌಧದ ಮುಂಭಾಗದಲ್ಲಿ ಸಂಗೀತ ಕಾರ್ಯಕ್ರಮಗಳ ಮೂಲಕ ಅಪ್ಪು ಅವರಿಗೆ ಗಾನ ನಮನ ಸಲ್ಲಿಸಲಾಯ್ತು. ಮಳೆ ನಡುವೆಯೂ ಸಾವಿರಾರು ಅಭಿಮಾನಿಗಳು ವಿಧಾನಸೌಧದ ಮುಂಭಾಗದಲ್ಲಿ ಜಮಾಯಿಸಿದರು.


ಕರ್ನಾಟಕ ರತ್ನ ಗೌರವ ವಿತರಣೆ ವೇಳೆ ಡಾ ಸುಧಾಮೂರ್ತಿ, ಅಶ್ವಿನಿಗೆ ಮನೋಸ್ಥೈರ್ಯ ತುಂಬಿದ್ರು. ಭುಜದ ಮೇಲೆ ಕೈ ಇಟ್ಟು ನಾವೆಲ್ಲಾ ನಿನ್ನ ಜೊತೆಗೆ ಇದ್ದೀವಿ ಅಂತ ಧೈರ್ಯ ಹೇಳಿದರು.


ಇದನ್ನೂ ಓದಿ:  Rajinikanth: ಪುನೀತ್ ನಿಧನರಾದಾಗ ರಜನಿಕಾಂತ್ ಯಾಕೆ ಬಂದಿರಲಿಲ್ಲ? ವೇದಿಕೆ ಮೇಲೆ ರಿವೀಲ್ ಆಯ್ತು ಕಾರಣ!


ಅಪ್ಪು ಫೋಟೋ ಎದುರು ಪದಕವಿಟ್ಟು ಪತ್ನಿ, ಪುತ್ರಿ ನಮನ


ಪುನೀತ್ ರಾಜ್ಕುಮಾರ್ ಅವರಿಗೆ ಪ್ರಶಸ್ತಿ ನೀಡಿದ್ದು ಖುಷಿಯಾಗಿದೆ. ಅಪ್ಪು ಅವರಿಗೆ ಕರ್ನಾಟಕ ರತ್ನ ನೀಡಿದ್ದಕ್ಕೆ ಧನ್ಯವಾದಗಳು ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ. ಕರ್ನಾಟಕ ರತ್ನ ಪ್ರಶಸ್ತಿಯನ್ನು ಅಪ್ಪು ಫೋಟೋಗೆ ಹಾಕಿ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಮಗಳು ವಂದಿತಾ ನಮನ ಸಲ್ಲಿಸಿದ್ದಾರೆ. ಮನೆಯಲ್ಲಿರುವ ಪುನೀತ್ ರಾಜ್ ಕುಮಾರ್ ಫೋಟೋಗೆ ಹಾರವಾಗಿ ಹಾಕಿದ್ದಾರೆ.


ಡಾ. ರಾಜ್‌ಕುಮಾರ್ ವರನಟ ಅಂತ ಹೊಗಳಿದ ಸೂಪರ್ ಸ್ಟಾರ್


ಇನ್ನು ವೇದಿಕೆಯ ಮೇಲೆ ರಜನಿಕಾಂತ್ ಅವರು ಡಾ. ರಾಜ್‌ಕುಮಾರ್ ಅವರ ಬಗ್ಗೆಯೂ ಹೊಗಳಿದರು. ನಾವೆಲ್ಲ ರಾಜ್‌ಕುಮಾರ್ ಸಿನಿಮಾ ನೋಡಿಯೇ ಬೆಳೆದಿದ್ದು. ರಾಜ್‌ಕುಮಾರ್‌ ನಿರ್ವಹಿಸಿದ್ದು ಒಂದೊಂದು ಪಾತ್ರಗಳೂ ಒಂದೊಂದು ರೀತಿಯದ್ದು. ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸೇ ಅವರು ನಟಸಾರ್ವಭೌಮ ಆಗಿದ್ದು, ವರನಟನಾಗಿದ್ದು.


Junior ntr cleans sudhamurthy and ashwini puneeth rajkumar chairs during karnataka ratna award program mrq
ಜೂನಿಯರ್ ಎನ್​​ಟಿಆರ್


ಇದನ್ನೂ ಓದಿ:  Rajinikanth: ಅಪ್ಪು ದೇವರ ಮಗು ಎಂದ ರಜನಿಕಾಂತ್, ವೇದಿಕೆ ಮೇಲೆ ರಾಜ್‌ ಸ್ಮರಿಸಿಕೊಂಡ ಸೂಪರ್ ಸ್ಟಾರ್


ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ರಜನಿಕಾಂತ್ ಮೆಚ್ಚುಗೆ


ಇನ್ನು ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆಯೂ ರಜನಿಕಾಂತ್ ಹೊಗಳಿದ್ರು. ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡಿದ್ದಾರೆ. ಆದರೆ ಅವರಿಗೆ ನಾನು ಇದೀಗ ಸಾಂತ್ವನ ಹೇಳುತ್ತಿದ್ದೇನೆ ಅಂತ ಹೇಳಿದ್ರು.

Published by:Mahmadrafik K
First published: