Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:June 8, 2019, 6:06 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: June 8, 2019, 6:06 PM IST
  • Share this:
1.ಬುಧವಾರ ಸಚಿವ ಸಂಪುಟ ವಿಸ್ತರಣೆ

ಮೈತ್ರಿ ಸರ್ಕಾರದಲ್ಲಿನ ಅಸಮಾಧಾನಿತ ಶಾಸಕರನ್ನು ಸಮಾಧಾನ ಮಾಡಲು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚಿಂತನೆ ನಡೆಸಿರುವ ದೋಸ್ತಿ ನಾಯಕರು ಇಬ್ಬರು ಅಥವಾ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.ಸಚಿವ ಸಂಪುಟ ವಿಸ್ತರಣೆಗೆ ಸಮಯ ಕೇಳಲು ಸಿಎಂ ಕುಮಾರಸ್ವಾಮಿ ಅವರು ಇಂದು ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಭೇಟಿಯಾಗಿ, ಈ ಸಂಬಂಧ ಚರ್ಚೆ ನಡೆಸಿದ್ದಾರೆ. ಸಂಪುಟ ವಿಸ್ತರಣೆಗೆ ರಾಜ್ಯಪಾಲರು ಸಮಯ ನೀಡಿ ಒಪ್ಪಿಗೆ ಸೂಚಿಸಿದ್ದಾರೆ. ಬುಧವಾರ ಬೆಳಗ್ಗೆ 11.30ಕ್ಕೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ.

2. ಕೇರಳದ ಗುರುವಾಯೂರಿನಲ್ಲಿ ಮೋದಿ ತುಲಾಭಾರ

ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಕೇರಳಕ್ಕೆ ಭೇಟಿ ನೀಡಿದರು. ತ್ರಿಸ್ಸೂರಿನ ಗುರುವಾಯೂರಿನ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿದ ಅವರು, ತಾವರೆ ಹೂಗಳಿಂದ ತುಲಾಭಾರ ಸೇವೆ ಮಾಡಿಸಿದರು. ಮಧ್ಯಾಹ್ನ ದರ್ಶನದ ಪಡೆದ ಬಳಿಕ ಅವರು ಅಲ್ಲಿಂದ ನೇರವಾಗಿ ದ್ವೀಪ ರಾಷ್ಟ್ರ ಮಾಲ್ಡೀವ್ಸ್​ ಗೆ ತೆರಳಿದ್ದು, ಅಲ್ಲಿ ದ್ವಿಪಕ್ಷೀಯ ಸಂಬಂಧ ಕುರಿತು ಅಲ್ಲಿನ ಅಧ್ಯಕ್ಷರೊಂದಿಗೆ ಮಾತನಾಡಲಿದ್ದಾರೆ.

3.ಮಳೆಗಾಲ ಆರಂಭ; ಕೇರಳಕ್ಕೆ ಕಾಲಿಟ್ಟ ಮಾನ್ಸೂನ್​

ನೈರುತ್ಯ ಮಾನ್ಸೂನ್​ ಮಾರುತಗಳು ಇಂದು ಕೇರಳ ಪ್ರವೇಶಿಸಿದ್ದು, ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆಈ ಬಾರಿ ತಡವಾಗಿ ಮಾನ್ಸೂನ್​ ರಾಜ್ಯಕ್ಕೆ ಆಗಮಿಸಿದ್ದು, ಉತ್ತಮ ಮಳೆಯಾಗಲಿದೆ. ಕೆಲವರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಈಗಾಗಲೇ ರೆಡ್​ ಅಲರ್ಟ್​ ಘೋಷಣೆ ಮಾಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ರೆಡ್​, ಯೆಲೋ ಮತ್ತು ಅರೇಂಜ್​ ಆಲರ್ಟ್​ ಘೋಷಣೆ ಮಾಡಲಾಗಿದೆ. ಕೇರಳಕ್ಕೆ ಇಂದು ಆಗಮಿಸಿರುವ ಮಳೆ ನಾಳೆ ರಾಜ್ಯದ ಕರಾವಳಿ ತೀರಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ

4. ಮಂಡ್ಯ ಜನರ ವಿರುದ್ಧ ಸಚಿವ ತಮ್ಮಣ್ಣ ಆಕ್ರೋಶ; ಸುಮಲತಾ ವಾಗ್ದಾಳಿಕ್ಷೇತ್ರದ ಸಮಸ್ಯೆ ಹೇಳಿಕೊಳ್ಳಲು ಬಂದ ಮಂಡ್ಯ ಜನರ ವಿರುದ್ಧ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಆಕ್ರೋಶ ಹೊರಹಾಕಿದ್ದಾರೆ. ​ ಮದ್ದೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ವೇಳೆ ಸಚಿವರ ಬಳಿ ಜನರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮನವಿ ಮಾಡಿದ್ದಾರೆ. ಈ ವೇಳೆಯೇ ಎಲ್ಲರ ಎದುರು ಗರಂ ಆದ ತಮ್ಮಣ್ಣ, "ಚುನಾವಣೆ ಮುಗಿದ ಬಳಿಕ ನಮ್ಮ ನೆನಪಾಗಿದೆ. ಈಗ ನಮ್ಮ ಬಳಿ ಬರುತ್ತೀರಾ. ಈಗ ಯಜಮಾನಿಕೆ ಮಾಡಲು ಬರುತ್ತೀರಲ್ಲಾ? ನಾಚಿಕೆಯಾಗಲ್ವಾ ನಿಮಗೆ," ಎಂದು ಜನರಿಗೆ ತೀವ್ರ ವಾಗ್ದಾಳಿ ನಡೆಸಿದರು. ಡಿಸಿ ತಮ್ಮಣ್ಣ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿರುವ ಸಂಸದೆ ಸುಮಲತಾ,  ಸಚಿವರಾಗಿ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಬಾದು. ಅವರಿಗೆ  ಮತಹಾಕಿ ಗೆಲ್ಲಿಸಿರೋದು ಮಂಡ್ಯ ಜನರು. ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ಕೊಡಲಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

5. ದಿನಬೆಳಗಾದರೆ ಸಿಎಂಗೆ ಸರ್ಕಾರ ಉಳಿಸುವ ಚಿಂತೆ; ಜೋಶಿ ವ್ಯಂಗ್ಯ

"ಜನರ ಗಮನ ಬೇರೆಡೆ ಸೆಳೆಯಲು ಸಿಎಂ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ.  ಸಿಎಂಗೆ ದಿನ ಬೆಳಗಾದರೆ ಸರ್ಕಾರ ಉಳಿಸಿಕೊಳ್ಳುವ ಚಿಂತೆ. ಮೈತ್ರಿ ಸರ್ಕಾರ ಯಾವಾಗ ಹೋಗುತ್ತೋ ಗೊತ್ತಿಲ್ಲ‌. ಹೀಗಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಲೂಟಿ ಹೊಡೆದು ಕಿಸೆ ತುಂಬಿಸಿಕೊಳ್ಳುವ ಚಿಂತೆಯಲ್ಲಿದ್ದಾರೆ. ಜನರ ಹಿತದೃಷ್ಟಿಯಿಂದ ಈ ಸರ್ಕಾರ ಬಿದ್ದು ಹೋಗಬೇಕು, " ಎಂದು ಸಿಎಂ ಗ್ರಾಮ ವಾಸ್ತವ್ಯದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಕುಹಕವಾಡಿದರು. "ಪ್ರಮುಖ ವಿಪಕ್ಷ ನಾಯಕರನ್ನು ಭೇಟಿಯಾಗುತ್ತಿದ್ದೇವೆ. ಸುಗಮ‌ ಕಲಾಪಕ್ಕೆ ಅವಕಾಶ ಕೊಡಲು ಮನವಿ ಮಾಡುತ್ತೇವೆ. 10 ಆದೇಶಗಳಿಗೆ ಕಾನೂನು ಸ್ವರೂಪ ಕೊಡಬೇಕು. ದೇಶದ ಹಿತದೃಷ್ಟಿಯಿಂದ ವಿಧೇಯಕಗಳು ಬರಬೇಕಿದೆ. ಸರ್ಕಾರ ಯಾವುದೇ ಚರ್ಚೆಗೆ ಸಿದ್ಧವಾಗಿದೆ" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.=

6 ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ; ರಾಜ್ಯ ಸರ್ಕಾರದ ವಿರುದ್ಧ ರೈತರ ಆಕ್ರೋಶ

ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ರೈತ ಹೋರಾಟಗಾರರು ಬೀದಿಗಿಳಿದು ಪ್ರತಿಭಟಿಸುತ್ತಿದ್ಧಾರೆ. "ತಿದ್ದುಪಡಿ ಮಾಡಲಾದ ಈ ಭೂಸ್ವಾಧೀನ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಜೂನ್ 10ಕ್ಕೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೆದ್ದಾರಿ ತಡೆಹಿಡಿದು ಸರ್ಕಾರಕ್ಕೆ ಒತ್ತಡ ಹೇರಲಾಗುವುದು" ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ. ಸಿಎಂ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಭೂಸ್ವಾಧೀನ ಕಾಯ್ದೆ(2013) ತಿದ್ದುಪಡಿ ಮಾಡುವ ಮುಖೇನ ರೈತ ವಿರೋಧಿಯಾಗಿದೆ. ಈ ಕಾಯ್ದೆ ತಿದ್ದುಪಡಿ ರೈತರಿಗೆ ವಿಧಿಸಿದ ಮರಣ ಶಾಸನವಾಗಿದೆ. ಇದನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ. ಹಾಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್​ ಮಾಡುವ ಮೂಲಕ ಸರ್ಕಾರ ಗಮನ ಸೆಳೆಯುತ್ತೇವೆ ಎನ್ನುತ್ತಾರೆ ಕೋಡಿಹಳ್ಳಿ.

7.ಕಾಶ್ಮೀರ ಶಾಂತಿ ಮಾತುಕತೆಗೆ ಪಾಕ್​ ಒತ್ತಾಯ

ಭಯೋತ್ಪಾದಕರಿಗೆ ಕಡಿವಾಣ ಹಾಕಿ ದಕ್ಷಿಣ ಏಷ್ಯಾ ಭಾಗದಲ್ಲಿ ಶಾಂತಿ ಕಾಪಾಡುವುದು ಪಾಕಿಸ್ತಾನದ ಜವಾಬ್ದಾರಿ ಎಂದು ದೊಡ್ಡಣ್ಣ ಅಮೆರಿಕಾ ತಾಕೀತು ಮಾಡುತ್ತಿದ್ದಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶಾಂತಿ ಮಾತುಕತೆಗೆ ಬರುವಂತೆ ಪ್ರಧಾನಿ ಮೋದಿಗೆ ಮತ್ತೆ ಇಂದು ಪತ್ರ ಬರೆದಿದ್ದಾರೆ. ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಭಾರತ-ಕಾಶ್ಮೀರ ಗಡಿಭಾಗದಲ್ಲಿ ಶಾಂತಿಯನ್ನು ಸ್ಥಾಪಿಸುವ ಸಲುವಾಗಿ ಪಾಕಿಸ್ತಾನ ಭಾರತಕ್ಕೆ ಬರೆಯುತ್ತಿರುವ ಎರಡನೇ ಪತ್ರ ಇದಾಗಿದೆ. ಈ ಹಿಂದೆಯೇ ಕಾಶ್ಮೀರದಲ್ಲಿ ಶಾಂತಿ ನೆಲೆಸುವ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, “ಭಾರತ ಹಾಗೂ ಪಾಕಿಸ್ತಾನದಂತಹ ಅಭಿವೃದ್ಧಿ ಶೀಲ ರಾಷ್ಟ್ರಗಳು ಎರಡೂ ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಲು, ಉಗ್ರಗಾಮಿಗಳ ಸದ್ದಡಗಿಸಲು ಹಾಗೂ ಬಡತನವನ್ನು ನಿರ್ಮೂಲನೆ ಮಾಡಲು ಶಾಂತಿ ಮಾತುಕತೆ ಅನಿವಾರ್ಯ” ಎಂದು ಅಭಿಪ್ರಾಯಪಟ್ಟಿದ್ದರು.

8. ಬಿಜೆಪಿ ನಾಯಕರಿಗೆ ಕೃತಜ್ಞತೆ ಹೇಳಿದ ಸುಮಲತಾ

ಮೊದಲ ಬಾರಿ ಸಂಸದೆಯಾಗಿರುವ ಸಂಭ್ರಮದಲ್ಲಿರುವ ಸುಮಲತಾ ಅಂಬರೀಷ್​ ಲೋಕಸಭಾ ಚುನಾವಣೆ ವೇಳೆ ತಮಗೆ ಬೆಂಬಲ ನೀಡಿದ ಬಿಜೆಪಿ ನಾಯಕರಿಗೆ ಇಂದು ಕೃತಜ್ಞತೆ ತಿಳಿಸಿದ್ದಾರೆ. ಸಂಸತ್ತು ಭೇಟಿ ಬಳಿಕ ರಾಜಧಾನಿಗೆ ಆಗಮಿಸಿರುವ ಅವರು, ಇಂದು ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ಅವರನ್ನು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಮತ್ತು ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಸ್ವಾಗತಿಸಿದರು. ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್​ ಸಂತೋಷ್​  ಭೇಟಿ ಬಳಿಕ ಮಾತನಾಡಿದ ಅವರು, ಲೋಕಸಭೆ ಚುನಾವಣೆ ವೇಳೆ ಅಭ್ಯರ್ಥಿ ಹಾಕದೆ ನನಗೆ ಬಿಜೆಪಿ ನಾಯಕರು ಬೆಂಬಲ ನೀಡಿದರು. ಹೀಗಾಗಿ ಕೃತಜ್ಞತೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ ಎಂದರು

9. ಮಳೆಗೆ ದರ್ಶನ್​ ಮನೆ ಗೋಡೆ ಕಾಂಪೌಡ್​ ಹಾನಿ

ಬೆಂಗಳೂರಿನಲ್ಲಿ ಮಳೆ ಬಂದು ಮರಗಳು ಧರೆಗುರುಳುತ್ತಿರುವುದು ಗೊತ್ತೇ ಇದೆ. ನಗರದ ಹಲವೆಡೆಗಳಲ್ಲಿ ಮರಗಳು ಬಿದ್ದರೆ, ಮತ್ತೆ ಕೆಲವೆಡೆ ಕೊಂಬೆಗಳು ಮುರಿದು ಬಿದ್ದಿವೆ. ಇದರಿಂದಾಗಿ ಸಾಕಷ್ಟು ಕಡೆ ಸಂಚಾರದಲ್ಲಿ ವ್ಯತ್ಯವಾಗುತ್ತಿದೆ. ಆದರೆ ಬಿಬಿಎಂಪಿ ಎಲ್ಲೆಲ್ಲಿ ಇಂತಹ ಘಟನೆಗಳು ಸಂಭವಿಸಿವೆಯೋ ಅಲ್ಲೆಲ್ಲ ಆದಷ್ಟು ಬೇಗ ತೆರವು ಕಾರ್ಯ ಕೈಗೊಂಡಿದೆ. ಆದರೆ ನಟ ದರ್ಶನ್​ ಅವರು ವಾಸವಿರುವ ಮನೆ ಅಂದರೆ, ರಾಜರಾಜೇಶ್ವರಿ ನಗರದಲ್ಲಿ ಮರ ಬಿದ್ದು ಮೂರು ದಿನ ಕಳೆದಿದೆ. ಆದರೆ ಬಿಬಿಎಂಪಿ ಇತ್ತ ಗಮನೆಏ ಹರಿಸಿಲ್ಲ. ಬಿದ್ದ ಮರವನ್ನು ತೆರವುಗೊಳಿಸಲು ಮೂರು ದಿನಗಳು ಸಾಲದೇ ಎಂಬ ಪ್ರಶ್ನೆ ಈಗ ಎದ್ದಿದೆ

10. ENG vs BAN: ಬಾಂಗ್ಲಾ ವಿರುದ್ಧ ರಾಯ್ ಭರ್ಜರಿ ಶತಕ: ಸೆಂಚುರಿ ಸಂಭ್ರಮಕ್ಕೆ 'ಅಡ್ಡಿ'ಯಾದ ಅಂಪೈರ್..!

ಕಾರ್ಡಿಫ್‌ನ ಸೋಫಿಯಾ ಗಾರ್ಡನ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್​ನ 12ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್ ಆರಂಭಿಕ ಆಟಗಾರ ಜೇಸನ್ ರಾಯ್ ಭರ್ಜರಿ ಶತಕ ಸಿಡಿಸಿದ್ದಾರೆ. ಟಾಸ್​ ಸೋತು ಬ್ಯಾಟಿಂಗ್ ಆಯ್ಕೆ ಅವಕಾಶ ಪಡೆದ ಆಂಗ್ಲರ ತಂಡಕ್ಕೆ ಜಾನಿ ಬೈರ್​ಸ್ಟೋ ಹಾಗೂ ರಾಯ್ ಉತ್ತಮ ಆರಂಭ ಒದಗಿಸಿದರು. ಮೊದಲ ಹತ್ತು ಓವರ್​ಗಳಲ್ಲಿ ತಾಳ್ಮೆಯ ಆಟ ಪ್ರದರ್ಶಿಸಿದ ಆರಂಭಿಕರು ಯಾವುದೇ ವಿಕೆಟ್ ನಷ್ಟವಿಲ್ಲದೆ 67 ರನ್​ ಬಾರಿಸಿ ಭದ್ರ ಅಡಿಪಾಯ ಹಾಕಿದರು. 10 ಓವರ್​ಗಳ ಮುಕ್ತಾಯ ಬೆನ್ನಲ್ಲೇ ಅಬ್ಬರಿಸಲು ಆರಂಭಿಸಿದ ರಾಯ್ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇನ್ನು ಹೊಡಿ ಬಡಿ ಆಟವನ್ನು ನಿಯಂತ್ರಣದಲ್ಲಿಟ್ಟು ಇನಿಂಗ್ಸ್​ ಕಟ್ಟಿದ ಬೈರ್​ಸ್ಟೋ 48 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದರು.
First published: June 8, 2019, 6:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading