Ramanagara: ಅತಿ ಎತ್ತರದ ಚಾಮುಂಡೇಶ್ವರಿ ವಿಗ್ರಹಕ್ಕೆ ಮಹಾಮಸ್ತಕಾಭಿಷೇಕ, 37,247 ಕೆಜಿ ದ್ರವ್ಯ ಬಳಕೆ 

ಇನ್ನು ತಾಯಿಯ ವಿಗ್ರಹವನ್ನ ಕಣ್ತುಂಬಿಕೊಳ್ಳಲು ರಾಮನಗರ ಸೇರಿದಂತೆ ಬೆಂಗಳೂರು, ಮೈಸೂರು ಭಾಗದಿಂದಲೂ ಸಹ ಜನರು ಆಗಮಿಸುತ್ತಿದ್ದಾರೆ.

ಚಾಮುಂಡೇಶ್ವರಿ ವಿಗ್ರಹ

ಚಾಮುಂಡೇಶ್ವರಿ ವಿಗ್ರಹ

  • Share this:
ರಾಮನಗರ(ಚನ್ನಪಟ್ಟಣ) : ಚಾಮುಂಡೇಶ್ವರಿ ತಾಯಿಗೆ (Goddess Chamundeshwari) ಮಹಾಮಸ್ತಕಾಭಿಷೇಕ  (Mahamastakabhisheka) ನಡೆಸಲು ಅದ್ಧೂರಿಯಾಗಿ ತಯಾರಿ ನಡೆದಿದೆ.‌ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿರುವ (Channatana, Ramanagara) ಗೌಡಗೆರೆಯ 64 ಅಡಿ ಎತ್ತರದ ಚಾಮುಂಡೇಶ್ವರಿ ವಿಗ್ರಹ ವಿಶ್ವದ ಅತಿದೊಡ್ಡ ಚಾಮುಂಡೇಶ್ವರಿ ವಿಗ್ರಹ (Chamundeshwarai Idol) ಎಂಬ ಖ್ಯಾತಿ ಪಡೆದಿದೆ. 37,247 ಕೆ.ಜಿ ವಿವಿಧ ದ್ರವ್ಯಗಳಿಂದ ಮಹಾಮಸ್ತಕಾಭಿಷೇಕ ಮಾಡಲಾಗುತ್ತದೆ.‌ 45 ಬಗೆಯ ವಿವಿಧ ದ್ರವ್ಯಗಳಿಂದ ಇದೇ 31 ನೇ ತಾರೀಖು (ಭಾನುವಾರ) ನಡೆಯುವ ಕಾರ್ಯಕ್ರಮಕ್ಕೆ ಗಣ್ಯರು ಬರಲಿದ್ದಾರೆ. ಮೊಟ್ಟಮೊದಲ ಬಾರಿಗೆ ಚಾಮುಂಡೇಶ್ವರಿಗೆ ಮಹಾಮಸ್ತಕಾಭಿಷೇಕ ನಡೆಯುತ್ತಿದೆ. ಪಂಚಲೋಹದ ವಿಗ್ರಹ ಆಗಿರುವ ಚಾಮುಂಡೇಶ್ವರಿ ವಿಗ್ರಹ ವೀಕ್ಷಣೆ ಮಾಡಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು (HD Devegowda), ಸಿಎಂ ಬಸವರಾಜ್ ಬೊಮ್ಮಾಯಿ (CM Basavaraja Bommai) ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ.‌ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ಸಾಧ್ಯತೆ ಇದೇ ಎಂದು ದೇವಸ್ಥಾನದ ಧರ್ಮದರ್ಶಿಗಳಾದ ಮಲ್ಲೇಶ್ ಮಾಹಿತಿ ನೀಡಿದರು.

ವಿಶ್ವದ ಗಮನ ಸೆಳೆದಿರುವ ಗೌಡಗೆರೆಯ ಚಾಮುಂಡೇಶ್ವರಿ ತಾಯಿ

35 ಸಾವಿರ ಕೆ.ಜಿ ತೂಕವುಳ್ಳ, 68 ಅಡಿ ಎತ್ತರದ, ಪಂಚಲೋಹಗಳಾದ ಚಿನ್ನ, ಬೆಳ್ಳಿ, ತಾಮ್ರ, ಕಂಚು, ಹಿತ್ತಾಳೆಯಿಂದ ತಯಾರಾಗಿ, 18 ಭುಜಗಳುಳ್ಳ ಸೌಮ್ಯ ರೂಪದಲ್ಲಿ  ನಿಂತಿರುವ ಚಾಮುಂಡಿ ತಾಯಿಯ ವಿಗ್ರಹವನ್ನ ನೋಡಲು ಕಣ್ಣೆರಡು ಸಾಲೋದಿಲ್ಲ.

ಇದು ವಿಶ್ವದಲ್ಲಿಯೇ ಅತೀ ಎತ್ತರದ ಶ್ರೀ ಚಾಮುಂಡೇಶ್ವರಿ ವಿಗ್ರಹ ಎಂದೇ ಖ್ಯಾತಿ ಪಡೆದಿದೆ. ಕಳೆದ 4 ವರ್ಷಗಳಿಂದ ನಡೆಯುತ್ತಿದ್ದ ವಿಗ್ರಹ ತಯಾರಿ ಕಾರ್ಯ ಪೂರ್ಣಗೊಂಡು ಈ ಹಿಂದಿನ ಭೀಮನ ಅಮಾವಾಸ್ಯೆಯ ಶುಭದಿನದಂದೇ ಲೋಕಾರ್ಪಣೆಗೊಂಡಿದೆ. ತಾಯಿಯ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ ಸಹಸ್ರಾರು ಭಕ್ತರು.

ಇದನ್ನೂ ಓದಿ:  Bagalakote: ಮಳೆ-ಬಿಸಿಲಿನಾಟದಿಂದ ಬೆಳೆ ಹಾಳು! ಲಾಭದ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲು

ಪ್ರವಾಸಿ ಸ್ಥಾನವಾಗಿ ಬದಲಾದ ಸ್ಥಳ

ಹೌದು, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮ ಇತಿಹಾಸ ನಿರ್ಮಿಸಿದೆ. ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಮಲ್ಲೇಶ್ ರವರು ಈ ಮಹಾಕಾರ್ಯವನ್ನ ಮಾಡಿದ್ದಾರೆ. ಚಾಮುಂಡೇಶ್ವರಿ ವಿಗ್ರಹವನ್ನ ಸ್ಥಾಪನೆ ಮಾಡಲು ಮುಂದಾಗಿದ್ದ ಮಲ್ಲೇಶ್ ಅವರಿಗೆ ಭಕ್ತರಿಂದ ದಾನಗಳು ಹರಿದುಬರಲು ಪ್ರಾರಂಭವಾಯ್ತು. ಅದಕ್ಕಾಗಿ ಬಹಳ ದೊಡ್ಡಮಟ್ಟದಲ್ಲಿಯೇ ತಾಯಿಯ ವಿಗ್ರಹವನ್ನ ಸ್ಥಾಪನೆ ಮಾಡಿ ಈ ಸ್ಥಳವನ್ನ ಪ್ರವಾಸಿ ತಾಣವನ್ನಾಗಿ ಮಾಡಲು ಮುಂದಾದರು.

ಸತತ ಮೂರು ವರ್ಷಗಳಿಂದ ನಡೆಯುತ್ತಿದ್ದ ಈ ಮಹಾಕಾರ್ಯ ಮುಗಿದು ಈ ಹಿಂದಿನ ಭೀಮನ ಅಮಾವಾಸ್ಯೆಯ ದಿನದಂದು ಲೋಕಾರ್ಪಣೆಯಾಗಿದೆ.

ಮುಸ್ಲಿಂ ಸಮುದಾಯದ ಕಾರ್ಮಿಕರಿಂದ ವಿಗ್ರಹ ನಿರ್ಮಾಣ

ಇನ್ನು ಬೆಂಗಳೂರಿನ ನಾಯಂಡಹಳ್ಳಿಯ ಮುಸ್ಲಿಂ ಸಮುದಾಯದ 20 ಜನ ಕಾರ್ಮಿಕರು ಈ ವಿಗ್ರಹವನ್ನ ತಯಾರು ಮಾಡಿರೋದು ಮತ್ತೊಂದು ವಿಶೇಷ. ಪಠಾಣ್ ಹಾಗೂ ಸಂಗಡಿಗರು ಸೇರಿ ಕಳೆದ 4 ವರ್ಷಗಳಿಂದ ಕಷ್ಟಪಟ್ಟು, ಭಕ್ತಿಯಿಂದ ತಯಾರಿಸಿದಕ್ಕೆ ಇವತ್ತು ಅಚ್ಚುಕಟ್ಟಾಗಿ ವಿಗ್ರಹ ಮೂಡಿಬಂದಿದೆ ಎನ್ನುತ್ತಾರೆ.

ಇನ್ನು ತಾಯಿಯ ವಿಗ್ರಹವನ್ನ ಕಣ್ತುಂಬಿಕೊಳ್ಳಲು ರಾಮನಗರ ಸೇರಿದಂತೆ ಬೆಂಗಳೂರು, ಮೈಸೂರು ಭಾಗದಿಂದಲೂ ಸಹ ಜನರು ಆಗಮಿಸುತ್ತಿದ್ದಾರೆ. ಮೊದಲೆಲ್ಲ ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯುತ್ತಿದ್ದೆವು. ಆದರೆ ಇವತ್ತು ನಮಗೆ ಗೌಡಗೆರೆಯಲ್ಲಿ ತಾಯಿಯ ದರ್ಶನ ಪಡೆದು ಖುಷಿಯಾಯ್ತು ಎನ್ನುತ್ತಾರೆ ಭಕ್ತರು.

ಸತತ ಮೂರು ವರ್ಷಗಳ ಪರಿಶ್ರಮ

ಒಟ್ಟಾರೆ ವಿಶ್ವದಲ್ಲಿಯೇ ಅತೀ ಎತ್ತರದ ಚಾಮುಂಡೇಶ್ವರಿ ವಿಗ್ರಹವೆಂಬ ಖ್ಯಾತಿಗೆ ಬೊಂಬೆನಗರಿಯ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ವಿಗ್ರಹ ಸಾಕ್ಷಿಯಾಗಿದೆ. ದೇವಸ್ಥಾನದ ಧರ್ಮದರ್ಶಿಗಳಾದ ಮಲ್ಲೇಶ್ ರವರ ಈ ಮಹಾಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಸತತವಾಗಿ ಮೂರು ವರ್ಷಗಳಿಂದ ಪಟ್ಟ ಶ್ರಮಕ್ಕೆ ಬೆಲೆ ಸಿಕ್ಕಿದೆ.

ಇದನ್ನೂ ಓದಿ:  Praveen Murder: ಕಂಡೋರ ಮಕ್ಕಳನ್ನು ಸಾವಿನ ದವಡೆಗೆ ನೂಕಿ ಮತ ಫಸಲು ತೆಗೆಯುವ ನರಹಂತಕ ರಾಜಕಾರಣ ನಿಲ್ಲಲಿ; HDK

ಇನ್ನು‌ ಪ್ರತಿದಿನವೂ ಸಹ ಬರುವ ಭಕ್ತರಿಗೆ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತದೆ. ದೇವಸ್ಥಾನದ ಆಡಳಿತ ಮಂಡಳಿಯಿಂದಲೇ ಆಯೋಜನೆ ಮಾಡಲಾಗಿದೆ. ಒಟ್ಟಾರೆ ಬೊಂಬೆನಗರಿಯ ಗೌರವ ಮತ್ತೊಂದು ಹಂತಕ್ಕೆ ತಲುಪಿದೆ.‌
Published by:Mahmadrafik K
First published: