• Home
 • »
 • News
 • »
 • state
 • »
 • JP Nadda: ಕಾಂಗ್ರೆಸ್​ಗೆ ಜಗಳವಾಡಲು ಬಿಟ್ಟುಬಿಡಿ, ಬಿಜೆಪಿಗೆ ಅಧಿಕಾರ ಕೊಡಿ! ವಿಜಯಪುರದಲ್ಲಿ ಜೆಪಿ ನಡ್ಡಾ ಕರೆ

JP Nadda: ಕಾಂಗ್ರೆಸ್​ಗೆ ಜಗಳವಾಡಲು ಬಿಟ್ಟುಬಿಡಿ, ಬಿಜೆಪಿಗೆ ಅಧಿಕಾರ ಕೊಡಿ! ವಿಜಯಪುರದಲ್ಲಿ ಜೆಪಿ ನಡ್ಡಾ ಕರೆ

ಜೆಪಿ ನಡ್ಡಾ

ಜೆಪಿ ನಡ್ಡಾ

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದೆ. ಈಗಾಗಲೇ ಕಾಂಗ್ರೆಸ್​ ಹಾಗೂ ಜೆಡಿಎಸ್​ ತಮ್ಮದೇ ಆದ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ಸಭೆ , ಯಾತ್ರೆಗಳನ್ನು ನಡೆಸುತ್ತಿವೆ. ಹಾಗೆಯೇ ಬಿಜೆಪಿ ಕೂಡ ಜನಸಂಕಲ್ಪ, ವಿಜಯಸಂಕಲ್ಪ ಯಾತ್ರೆಗಳನ್ನು ಮಾಡುತ್ತಾ ರಣಕಹಳೆ ಊದಿದೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ವಿಜಯಪುರದಲ್ಲಿ ಸಮಾವೇಶದಲ್ಲಿ ಭಾಗಿಯಾಗಿದ್ದರು.

ಮುಂದೆ ಓದಿ ...
 • News18 Kannada
 • 2-MIN READ
 • Last Updated :
 • Bijapur, India
 • Share this:

ವಿಜಯಪುರ: ಬಿಜೆಪಿ (BJP) ಅಂದರೆ ಅಭಿವೃದ್ಧಿ , ಪಾರದರ್ಶಕತೆ, ಕಾಂಗ್ರೆಸ್ (Congress)​ ಅಂದರೆ ಭ್ರಷ್ಟಾಚಾರ, ಕಮಿಷನ್ ಅಂದ್ರೆ ಕಾಂಗ್ರೆಸ್​. ಆ ಪಕ್ಷದವರಿಗೆ ಕೇವಲ ಕುರ್ಚಿಯದ್ದೇ ಚಿಂತೆಯಾಗಿದೆ. ಹಾಗಾಗಿ ಕಾಂಗ್ರೆಸ್​ನವರಿಗೆ  ಪರಸ್ಪರ ಜಗಳವನ್ನಾಡಲು ಬಿಟ್ಟು ಬಿಜೆಪಿಯವರಿಗೆ ಜನಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ತಿಳಿಸಿದ್ದಾರೆ. ವಿಜಯಪುರದಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ಯಾತ್ರೆಯನ್ನು (Vijaya Sankalpa Yatra) ಉದ್ಧಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್​ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿ ಬಿಜೆಪಿ ಸಾಧನೆಯನ್ನು ಪ್ರಶಂಸಿಸಿದರು.


ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದೆ. ಈಗಾಗಲೇ ಕಾಂಗ್ರೆಸ್​ ಹಾಗೂ ಜೆಡಿಎಸ್​ ತಮ್ಮದೇ ಆದ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ಸಭೆ , ಯಾತ್ರೆಗಳನ್ನು ನಡೆಸುತ್ತಿವೆ. ಹಾಗೆಯೇ ಬಿಜೆಪಿ ಕೂಡ ಜನಸಂಕಲ್ಪ, ವಿಜಯಸಂಕಲ್ಪ ಯಾತ್ರೆಗಳನ್ನು ಮಾಡುತ್ತಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆ, ಸಾಧನೆಗಳನ್ನು ಜನರ ಮುಂದಿಟ್ಟು ಮುಂದಿನ ಬಾರಿಯೂ ಪಕ್ಷವನ್ನು ಗೆಲ್ಲಿಸುವಂತೆ ಮತದಾರ ಪ್ರಭುಗಳನ್ನು ಮನವಿ ಮಾಡುತ್ತಿದೆ. ಶನಿವಾರ ವಿಜಯಪುರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಯುತ್ತಿದ್ದು, ಬೂತ್​ ಮಟ್ಟದಲ್ಲಿ ಪಕ್ಷವವನ್ನು ಕಟ್ಟುವ ಉದ್ದೇಶದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೇಂದ್ರ ಹಲವು ಪ್ರಚಾರ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.


ವಿಜಯಪುರ ಪುಣ್ಯಭೂಮಿಗೆ ಬಂದಿದ್ದು ನನ್ನ ಪುಣ್ಯ


ವಿಜಯಪುರ ಪವಿತ್ರ ಭೂಮಿಗೆ ಬಂದದ್ದು, ಇಲ್ಲಿನ ಸಿದ್ದೇಶ್ವರ ಶ್ರೀಗಳ ಆಶ್ರಮಕ್ಕೆ ಹೋಗಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಇಲ್ಲಿನ ಜನರನ್ನು ನೋಡುತ್ತಿದ್ದರೆ ಮುಂದಿನ ಬಾರಿಯೂ ಕರ್ನಾಟಕದಲ್ಲಿ ಕಮಲವನ್ನುಅರಳಿಸುವ ನಿರ್ಣಯ ತೆಗೆದುಕೊಂಡಿದ್ದೀರ ಎನ್ನುವುದು ನನಗೆ ತಿಳಿಯುತ್ತಿದೆ. ಕಾಂಗ್ರೆಸ್​ ಲೀಡರ್​ ಇಲ್ಲದ ಪಕ್ಷ ಅದು ಸಮಾಜವನ್ನು ಒಡೆಯುತ್ತಿದೆ.  ಕುಟುಂಬ ರಾಜಕಾರಣದೊಂದಿಗೆ ಜಾತಿ ರಾಜಕಾರಣವನ್ನು ಮಾಡುತ್ತಿದೆ. ಆದರೆ ಬಿಜೆಪಿ ಎಲ್ಲರೊಂದಿಗೆ ಎಲ್ಲರ ವಿಶ್ವಾಸ ಎಂಬ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಸಬ್​ ಕಾ ಸಾಥ್​, ಸಬ್​ ಕಾ ವಿಕಾಸ್ ಇದು ನಮ್ಮ ಮಂತ್ರ ಎಂದು ಹೇಳಿದರು. ​


ಆಟೋ ಮೊಬೈಲ್ ಇಂಡಸ್ಟ್ರಿಯಲ್ಲಿ ಭಾರತಕ್ಕೆ 3ನೇ ಸ್ಥಾನ


ದೇಶ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಪತದತ್ತಾ ಸಾಗುತ್ತಿದೆ. 2014ಕ್ಕಿಂತ ಮೊದಲು ಮೊಬೈಲ್ ಸೇರಿ ಎಲೆಕ್ಟ್ರಾನಿಕ್ ಗೂಡ್ಸ್​ಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ಈಗ 97% ಗೂಡ್ಸ್​ಗಳನ್ನುನಾವೇ ತಯಾರು ಮಾಡುತ್ತಿದ್ದೇವೆ. 70 ಸಾವಿರ ಕೋಟಿ ಮೌಲ್ಯದ ಎಲೆಕ್ಟ್ರಾನಿಕ್ಸ್ ರಪ್ತು ಮಾಡುತ್ತಿದ್ದೇವೆ. ಆಟೋ ಮೊಬೈಲ್ ಇಂಡಸ್ಟ್ರಿಯಲ್ಲಿ ಭಾರತ 3ನೇ ಸ್ಥಾನ ಪಡೆದುಕೊಂಡಿದ್ದು, ಜಪಾನ್ ದೇಶವನ್ನು ಮೀರಿ ಭಾರತ ಬೆಳೆದು ನಿಂತಿದೆ. ಜಗತ್ತಿನ ಅರ್ಥ ವ್ಯವಸ್ಥೆಯಲ್ಲಿ ಭಾರತ ಬೆಳೆದು ನಿಂತಿದೆ ಎಂದು ಹೇಳಿದರು.
ಭಾರತ ಈಗ ಬೇಡುವ ರಾಷ್ಟ್ರವಲ್ಲ


ಕೋವಿಡ್​ 19 ಸಾಂಕ್ರಾಮಿಕ ಸಂದರ್ಭದಲ್ಲಿ ಇಡೀ ಜಗತ್ತು ತಲ್ಲಣಗೊಂಡಿತ್ತು. ಆದರೇ ದೇಶದ ಜನತೆಗೆ ಮೋದಿ ವ್ಯಾಕ್ಸಿನ್​ ಮೂಲಕ ಸುರಕ್ಷಾ ಚಕ್ರ ನೀಡಿದರು. ಜಗತ್ತಿನಲ್ಲಿಯೇ ಅತಿ ಹೆಚ್ಚು ವ್ಯಾಕ್ಸಿನೇಷನ್ ಆಗಿರುವ ದೇಶ ನಮ್ಮದು. 100 ದೇಶಗಳಿಗೆ ನಾವು ವ್ಯಾಕ್ಸಿನ್ ರಫ್ತು ಮಾಡಿದ್ದೇವೆ. ಈ ಪೈಕಿ 50 ದೇಶಗಳಿಗೆ ಉಚಿತವಾಗಿ ನೀಡಿದ್ದೇವೆ. ಅದಕ್ಕಾಗಿಯೇ ಹೇಳುವುದು ಭಾರತ ಈಗ ಬೇಡುವ ದೇಶವಲ್ಲ, ಕೊಡುವ ದೇಶವಾಗಿ ಬದಲಾಗಿದೆ ಎಂದು ಮೋದಿ ಆಡಳಿತವನ್ನು ಹಾಡಿ ಹೊಡಳಿದರು.


ಬಡವರ ಆರೋಗ್ಯಕ್ಕೆ ಒತ್ತು


ಈ ಹಿಂದೆ ಬಡವರು ಕ್ಯಾನ್ಸ ಆಸ್ಪತ್ರೆಗೆ ಹೋಗಿ ಆಪರೇಷನ್​ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಒಂದು ವೇಳೆ ಹೋದರು ಸಾಲಗಾರರಾಗುತ್ತಿದ್ದರು. ಆದರೆ ಈಗ ಮೋದಿ ಸರ್ಕಾರ 5 ಲಕ್ಷ ರೂಪಾಯಿ ಹೆಲ್ತ್​ ಇನ್ಸುರೆನ್ಸ್​ ಮಾಡಿದ್ದೇವೆ. ಈಗ ಯಾವುದೇ ಕಾಯಿಲೆ ಬಂದರು ಅವರು ಯಾರ ಹತ್ರಾನು ಕೈ ಹೊಡ್ಡುವ ಪರಿಸ್ಥಿತಿ ಇಲ್ಲ. ಇದೇ ರೀತಿ ಹಲವು ಯೋಜನೆಗಳನ್ನು ನಾವು ಮುಂದಿನ ದಿನಗಳಲ್ಲಿ ಜಾರಿಗೆ ತರಲಿದ್ದೇವೆ ಎಂದರು.


 JP Nadda to launch BJP Vijaya Sankalpa Yatra in vijayapur
ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ ಜೆಪಿ ನಡ್ಡಾ


ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಮೂಲಕ ನೆರವು


ಕಿಸಾನ್ ಸಮ್ಮಾನ್ ನಿಧಿ ಮೂಲಕ ದೇಶದ ರೈತರಿಗೆ ಪ್ರತಿ ವರ್ಷ ಮೂರು ಕಂತುಗಳಲ್ಲಿ 6 ಸಾವಿ ಸಾವಿರ ರೂಪಾಯಿ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಕೂಡ 4 ಸಾವಿರ ನೀಡುತ್ತಿದೆ. ರೈತರ ಮಕ್ಕಳಿಗೆ ರೈತ ವಿದ್ಯಾ ನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ . ರಾಜ್ಯದಲ್ಲಿ ಮೋದಿ 10,800 ಕೋಟಿ ರೂ. ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿದ್ದಾರೆ. ಕಲಬುರಗಿಯಲ್ಲಿ 51 ಸಾವಿರ ಲಂಬಾಣಿ ಜನರಿಗೆ ಹಕ್ಕು ಪತ್ರ ವಿತರಿಸಿದ್ದಾರೆ ಹೀಗೆ ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ವಿವರಿಸಿದರು.


ಅಂತರ ಕಾಯ್ದುಕೊಂಡ ಯತ್ನಾಳ್


ವಿಜಯಪುರದ ಸಿಂಧಗಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಗಮಿಸಿದರೂ ತಮ್ಮ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೈರಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಜಿಲ್ಲೆಗೆ ಜೆಪಿ ನಡ್ಡಾ ಬಂದಾದ ಭೇಟಿ ಮಾಡುವುದಾಗಿ ತಿಳಿಸಿದ್ದ ಯತ್ನಾಳ್ ಇದೀಗ ರಾಜ್ಯಮಟ್ಟದ ಕಾರ್ಯಕ್ರಮದಿಂದ ಹೊರಗುಳಿದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಈಗಾಗಲೆ ಯತ್ನಾಳ್​ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ, ನಿರಾಣಿ, ವಿಜಯೇಂದ್ರ ಸೇರಿದಂತೆ ಹಲವು ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸಿ ರಾಜ್ಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಕ್ಕಾಗಿ ಶಿಸ್ತುಕ್ರಮ ಜರುಗಿಸಬೇಕೆಂದು ಹೈಕಮಾಂಡ್​ಗೆ ತಿಳಿಸಿದ್ದರು ಎನ್ನಲಾಗಿತ್ತು. ಇದೀಗ ಕಾರ್ಯಕ್ರಮಕ್ಕೆ ಅವರ ಗೈರು ನಿಜಕ್ಕೂ ಶಿಸ್ತು ಸಮಿತಿ ನೋಟಿಸ್ ನೀಡಿದೆ ಎನ್ನುವುದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

Published by:Rajesha B
First published: