• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • P Sainath: ಮುರುಘಾ ಸ್ವಾಮೀಜಿ ಪ್ರಕರಣದಿಂದ ಮುಜುಗರ, ಪ್ರಶಸ್ತಿ ಹಿಂದಿರುಗಿಸಿದ ಖ್ಯಾತ ಪತ್ರಕರ್ತ ಪಿ ಸಾಯಿನಾಥ್!

P Sainath: ಮುರುಘಾ ಸ್ವಾಮೀಜಿ ಪ್ರಕರಣದಿಂದ ಮುಜುಗರ, ಪ್ರಶಸ್ತಿ ಹಿಂದಿರುಗಿಸಿದ ಖ್ಯಾತ ಪತ್ರಕರ್ತ ಪಿ ಸಾಯಿನಾಥ್!

ಪಿ. ಸಾಯಿನಾಥ್

ಪಿ. ಸಾಯಿನಾಥ್

P Sainath: ಹಿರಿಯ ಪತ್ರಕರ್ತರಾದ ಪಿ ಸಾಯಿನಾಥ್‌ ಅವರು ಮುರುಘಾ ಮಠ ನೀಡಿದ್ದ ಬಸವಶ್ರೀ ಪ್ರಶಸ್ತಿ ಹಾಗೂ  5 ಲಕ್ಷ ರೂ. ಹಣವನ್ನು ವಾಪಸ್‌ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

  • Share this:

ಮುರುಘಾ ಸ್ವಾಮೀಜಿಗೆ (Murugha Shri) ಅತ್ಯಾಚಾರ ಕೇಸ್​ (Rape Case) ಕಂಟಕ ಹೆಚ್ಚಾಗಿದೆ. ಚಿತ್ರದುರ್ಗ ಕೋರ್ಟ್​ ಸ್ವಾಮೀಜಿಗೆ ಶಾಕ್ ಕೊಟ್ಟಿದೆ. ನ್ಯಾಯಾಲಯ ಮುರುಘಾ ಸ್ವಾಮೀಜಿಯನ್ನು ಮೂರು ದಿನಗಳವರೆಗೆ ಪೊಲೀಸ್​ ಕಸ್ಟಡಿಗೆ (Police Custody) ಒಪ್ಪಿಸಿದೆ. ಇದರ ನಡುವೆ ಹಿರಿಯ  ಪತ್ರಕರ್ತ ಪಿ ಸಾಯಿನಾಥ್‌ (P Sainath) ಅವರು ಚಿತ್ರದುರ್ಗದ ಮುರುಘಾ ಮಠ ನೀಡಿದ್ದ ಬಸವಶ್ರೀ ಪ್ರಶಸ್ತಿ ಹಾಗೂ 5 ಲಕ್ಷ ಬಹುಮಾನವನ್ನು ಹಿಂದಿರುಗಿಸುವುದಾಗಿ ತಿಳಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್​ ಮಾಡಿರುವ ಅವರು  ಮುರುಘಾ ಶರಣರ ಕುರಿತಾದ ಮಾಧ್ಯಮ ವರದಿಗಳಿಂದ ತಿಳಿದು ನಾನು ವಿಚಲಿತನಾಗಿದ್ದೇನೆ ಎಂದು ಹೇಳುವ ಮೂಲಕ ಪ್ರಶಸ್ತಿಗಳನ್ನು ಹಿಂದಿರುಗಿಸುವುದಾಗಿ ಹೇಳಿದ್ದಾರೆ.


ಬಸವಶ್ರೀ ಪ್ರಶಸ್ತಿ ಹಿಂದಿರುಗಿಸಿದ ಪತ್ರಕರ್ತ:


ಹೌದು, ಹಿರಿಯ ಪತ್ರಕರ್ತರಾದ ಪಿ ಸಾಯಿನಾಥ್‌ ಅವರು ಮುರುಘಾ ಮಠ ನೀಡಿದ್ದ ಬಸವಶ್ರೀ ಪ್ರಶಸ್ತಿ ಹಾಗೂ  5 ಲಕ್ಷ ರೂ. ಹಣವನ್ನು ವಾಪಸ್‌ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಸಾಯಿನಾಥ್‌ ಅವರಿಗೆ 2017 ರಲ್ಲಿ ಮುರುಘಾ ಮಠ ಬಸವಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಈ ಕುರಿತು ಸರಣಿ ಟ್ವೀಟ್​ ಮಾಡಿರುವ ಅವರು, ‘ಚಿತ್ರದುರ್ಗದ ಶ್ರೀ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ಕುರಿತ ಮಾಧ್ಯಮ ವರದಿಗಳಿಂದ ನಾನು ವಿಚಲಿತನಾಗಿದ್ದೇನೆ. ಅವರು ಈಗ ಪೋಕ್ಸೊ ಮತ್ತು SC/ST ಕಾಯ್ದೆಯಡಿ ಮಕ್ಕಳ ಮೇಲೆ, ವಿಶೇಷವಾಗಿ ಪ್ರೌಢಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ‘ ಎಂದು ಬರೆದಿದ್ದಾರೆ.ಪಿ. ಸಾಯಿನಾಥ್ ಸರಣಿ ಟ್ವೀಟ್​:


ಇನ್ನು, ಈ ಕುರಿತು ಸರಣಿ ಟ್ವೀಟ್​ ಮಾಡಿರುವ ಅವರು, ‘ಶ್ರೀ ಶರಣರನ್ನು ಹೈಸ್ಕೂಲ್ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಬಂಧಿಸಲಾಗಿದೆ. ಮಕ್ಕಳ ಮೇಲಿನ ಇಂತಹ ಯಾವುದೇ ಅಪರಾಧಗಳನ್ನು ಖಂಡಿಸಲು ಯಾವುದೇ ಬಲವಾದ ಪದಗಳು ಸಿಗುತ್ತಿಲ್ಲ‘ ಎಂದಿದ್ದಾರೆ.ಈ ಪ್ರಕರಣದ ನ್ಯಾಯಕ್ಕಾಗಿ 2017ರಲ್ಲಿ ಮಠವು ನನಗೆ ನೀಡಿದ ಬಸವಶ್ರೀ ಪ್ರಶಸ್ತಿಯನ್ನು ಮತ್ತು ಅದರೊಂದಿಗೆ ಬಂದ 5 ಲಕ್ಷ ರೂ. ಬಹುಮಾನದ ಮೊತ್ತವನ್ನು ಚೆಕ್ ಮೂಲಕ ಹಿಂದಿರುಗಿಸುತ್ತೇನೆ‘ ಎಂದು ಹೇಳಿಕೊಂಡಿದ್ದಾರೆ.ಅನೇಕ ಸಾಧಕರಿಗೆ ನೀಡಲಾಗಿದೆ ಬಸವಶ್ರೀ ಪ್ರಶಸ್ತಿ:


ಇನ್ನು, 12ನೇ ಶತಮಾನದ ಸಮಾಜ ಸುಧಾರಕರಾಧ ಬಸವಣ್ಣನವರ ಹೆಸರಿನಲ್ಲಿ ಬಸವಶ್ರೀ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 1997ರಿಂದ ಮುರುಘಾ ಮಠ ಈ ಪ್ರಶಸ್ತಿಯನ್ನು ಸಾಧಕರಿಗೆ ನೀಡಿ ಗೌರವಿಸುತ್ತಾ ಬಂದಿದೆ. ಶಂಕರ ಬಿದರಿ,  ನಾರಾಯಣಮೂರ್ತಿ,  ಪಿ.ಸಾಯಿನಾಥ, ಕಾಮೇಗೌಡ, ಚಂದ್ರಶೇಖರ ಪಾಟೀಲ, ಅಣ್ಣಾ ಹಜಾರೆ, ಕಿರಣ್ ಬೇಡಿ, ಪಿ.ಟಿ ಉಷಾ ಮತ್ತು ಪುನೀತ್​ ರಾಜ್​ಕುಮಾರ್​ ಅವರಿಗೂ ಈ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.


ಇದನ್ನೂ ಓದಿ: Murugha Mutt Case: ಮುರುಘಾ ಸ್ವಾಮೀಜಿಗೆ ಪೊಲೀಸ್ ಕಸ್ಟಡಿ, ಮೈಮೇಲೆ ಪೆಟ್ರೋಲ್ ಸುರಿದುಕೊಂಡ ಭಕ್ತ!


ಅನಾರೋಗ್ಯ ಉಂಟಾಗಿ ಆಸ್ಪತ್ರೆಗೆ ದಾಖಲು:


ಪೋಕ್ಸೋ ಕೇಸ್​ನಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಸ್ವಾಮೀಜಿ ಗುರುವಾರ ತಡರಾತ್ರಿ ಜೈಲು ಸೇರಿದ್ದರು. ಆದರೆ ಏಕಾಏಕಿ ಆರೋಗ್ಯ ಹದಗೆಟ್ಟಿದೆ ಎಂದಿದ್ದ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ನೋಡ ನೋಡುತ್ತಿದ್ದಂತೆಯೇ ಸ್ವಾಮೀಜಿ ಆರೋಗ್ಯ ತೀವ್ರ ಹದಗೆಟ್ಟಿದೆ ಎಂದು ವೈದ್ಯರು ತಿಳಿಸಿದ್ದರು.

First published: