ರಸ್ತೆ ಅಪಘಾತದಲ್ಲಿ ಪತ್ರಕರ್ತ ಮಂಜುನಾಥ್ ನಿಧನ; ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಬುಧವಾರ ಸಂಜೆ ಹಾವೇರಿಯ ಆಫೀಸಿನಲ್ಲಿ ಕೆಲಸ ಮುಗಿಸಿ ಹೊಳಲ್ಕೆರೆಯಲ್ಲಿರುವ ಅಕ್ಕನ ಮನೆಗೆ ಹೊರಟಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ದಾವಣಗೆರೆ ಜಿಲ್ಲೆಯ ಕೊಡಗನೂರು ಕೆರೆಯ ಬಳಿ ಹುಲ್ಲಿನ ಟ್ರ್ಯಾಕ್ಟರ್​ಗೆ ಬೈಕ್ ಡಿಕ್ಕಿ ಹೊಡೆದು ಎಂ.ಸಿ. ಮಂಜುನಾಥ್​ ಸ್ಥಳದಲ್ಲೇ ಸಾವನ್ನಪ್ಪಿದ್ದರು.

Sushma Chakre | news18-kannada
Updated:November 21, 2019, 2:08 PM IST
ರಸ್ತೆ ಅಪಘಾತದಲ್ಲಿ ಪತ್ರಕರ್ತ ಮಂಜುನಾಥ್ ನಿಧನ; ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
ಮೃತ ಪತ್ರಕರ್ತ ಎಂ.ಸಿ. ಮಂಜುನಾಥ್
  • Share this:
ಬೆಂಗಳೂರು (ನ. 21): ಬುಧವಾರ ರಾತ್ರಿ ದಾವಣಗೆರೆ ತಾಲೂಕಿನ ಕೊಡಗನೂರು ಕೆರೆಯ ಬಳಿ ಟ್ರ್ಯಾಕ್ಟರ್​​ಗೆ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದ ಪತ್ರಕರ್ತ ಎಂ.ಸಿ. ಮಂಜುನಾಥ್ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಶಿವಮೊಗ್ಗ ಮೂಲದ ಎಂ.ಸಿ. ಮಂಜುನಾಥ್​ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಬೆಂಗಳೂರಿನ ಪ್ರಜಾವಾಣಿ ಕಚೇರಿಯಲ್ಲಿ ಅಪರಾಧ ವರದಿಗಾರರಾಗಿದ್ದ ಮಂಜುನಾಥ್ 6 ತಿಂಗಳ ಹಿಂದಷ್ಟೇ ಹಾವೇರಿ ಜಿಲ್ಲಾ ವರದಿಗಾರರಾಗಿ ವರ್ಗಾವಣೆಯಾಗಿದ್ದರು. ಬುಧವಾರ ಸಂಜೆ ಹಾವೇರಿಯ ಆಫೀಸಿನಲ್ಲಿ ಕೆಲಸ ಮುಗಿಸಿ ಹೊಳಲ್ಕೆರೆಯಲ್ಲಿರುವ ಅಕ್ಕನ ಮನೆಗೆ ಹೊರಟಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ದಾವಣಗೆರೆ ಜಿಲ್ಲೆಯ ಕೊಡಗನೂರು ಕೆರೆಯ ಬಳಿ ಹುಲ್ಲಿನ ಟ್ರ್ಯಾಕ್ಟರ್​ಗೆ ಬೈಕ್ ಡಿಕ್ಕಿ ಹೊಡೆದು ಎಂ.ಸಿ. ಮಂಜುನಾಥ್​ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಅಪಘಾತಕ್ಕೆ ಕಾರಣವಾದ ಹುಲ್ಲಿನ ಟ್ರ್ಯಾಕ್ಟರ್​ ಜೊತೆಗೆ ಚಾಲಕ ಪರಾರಿಯಾಗಿದ್ದ. ಅಪಘಾತ ನಡೆದು 2-3 ಗಂಟೆಯಾದರೂ ಯಾರೊಬ್ಬರೂ ಮೃತದೇಹವನ್ನು ಸಾಗಿಸಲು ಸಹಾಯ ಮಾಡಲಿಲ್ಲ. ಆ್ಯಂಬುಲೆನ್ಸ್​ನವರೂ ಮೃತದೇಹವನ್ನು ಸಾಗಿಸಲು ಸಾಧ್ಯವಿಲ್ಲ ಎಂದಿದ್ದರಿಂದ ಕೊನೆಗೆ ಟಾಟಾ ಏಸ್​ನಲ್ಲಿ ಹುಲ್ಲನ್ನು ಹಾಕಿ ಪತ್ರಕರ್ತನ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.

ಟಿಕ್​ಟಾಕ್ ಆಂಟಿಯೊಂದಿಗೆ ಸಚಿವ ಮಾಧುಸ್ವಾಮಿ ಫೋಟೋ; ಅವಹೇಳನಕಾರಿ ಟ್ವೀಟ್ ಮಾಡಿದ ಜೆಡಿಎಸ್​ ವಿರುದ್ಧ ಬಿಜೆಪಿ ದೂರು

ಪತ್ರಕರ್ತರ ಸಾವಿನ ವಿಚಾರದಲ್ಲಿ ಅಮಾನವೀಯವಾಗಿ ನಡೆದುಕೊಂಡ ರೀತಿಗೆ ಹಾಗೂ ಮೃತದೇಹವನ್ನು ಪ್ರಾಣಿಗಳಂತೆ ಕೊಂಡೊಯ್ದ ರೀತಿಯನ್ನು ಖಂಡಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗಿತ್ತು. ಈ ಸಾವಿಗೆ ಸಂತಾಪ ಸೂಚಿಸಿದ್ದ ಸಿಎಂ ಯಡಿಯೂರಪ್ಪ, ಮಂಜುನಾಥ್​ ಅವರ ಅಗಲಿಕೆಯಿಂದ ಯುವ, ಉತ್ಸಾಹಿ ಪತ್ರಕರ್ತನನ್ನು ಕಳೆದುಕೊಂಡಂತಾಗಿದೆ. ಅವರ ಕುಟುಂಬದವರಿಗೆ ಈ ಆಘಾತವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂಬ ಸಂದೇಶ ನೀಡಿದ್ದರು.

ಇಂದು ಮೃತ ಪತ್ರಕರ್ತನ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಎಂ.ಸಿ. ಮಂಜುನಾಥ್ ಅವರ ಅಂತ್ಯಸಂಸ್ಕಾರ ಇಂದು ಶಿವಮೊಗ್ಗದಲ್ಲಿ ನೆರವೇರಲಿದೆ. ಮಂಜುನಾಥ್​ ತಂದೆ, ತಾಯಿ, ಅಕ್ಕ ಮತ್ತು ಅಣ್ಣನನ್ನು ಅಗಲಿದ್ದಾರೆ. ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
First published: November 21, 2019, 12:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading