ಈ ಸರ್ಕಾರಿ ಶಾಲೆಗೆ ಸೇರಿದ್ರೆ ಬ್ಯಾಂಕ್ ಖಾತೆಗೆ ಬೀಳುತ್ತೆ ಹಣ

news18
Updated:June 28, 2018, 9:41 AM IST
ಈ ಸರ್ಕಾರಿ ಶಾಲೆಗೆ ಸೇರಿದ್ರೆ ಬ್ಯಾಂಕ್ ಖಾತೆಗೆ  ಬೀಳುತ್ತೆ ಹಣ
news18
Updated: June 28, 2018, 9:41 AM IST
- ಪರೀಕ್ಷಿತ್ ಶೇಟ್,  ನ್ಯೂಸ್ 18 ಕನ್ನಡ

ಉಡುಪಿ (ಜೂನ್ 28) :  ಈ ಕನ್ನಡ ಶಾಲೆಗೆ ಸೇರಿದ್ರೆ ಬ್ಯಾಂಕ್ ಖಾತೆಗೆ ಬೀಳುತ್ತೆ ಹಣ. ಒಂದು ರೂಪಾಯಿಯು ಖರ್ಚಿಲ್ಲದೆ ಕನ್ನಡ ಶಾಲೆಯಲ್ಲಿ ಉತ್ತಮ ಶಿಕ್ಷಣವನ್ನೂ ಪಡೆಯಬಹುದು. ಇದು ಯಾವುದೋ ಸರ್ಕಾರದ ಹೊಸ ಯೋಜನೆಯಂತೂ ಅಲ್ಲ ಕನ್ನಡ ಶಾಲೆ ಉಳಿಸುವಲ್ಲಿ ಶಾಲೆಯ  ಮುಖ್ಯಶಿಕ್ಷಕರು ಅನುಷ್ಠಾನಗೊಳಿಸಿದ ಕೆಲವೊಂದು ಯೋಜನೆಗಳಿದು. ಹಾಗಾದ್ರೆ ಈ ಶಿಕ್ಷಕ ಮಾಡಿದ್ದಾದ್ರೂ ಏನೂ, ಹಾಕಿದ ಯೋಜನೆಗಳಾದ್ರೂ ಎಂತದ್ದು, ಈ ಶಾಲೆ ಇರೋದಾದ್ರೂ ಎಲ್ಲಿ ಅಂತಿರಾ ಈ ಸ್ಟೋರಿ ಓದಿ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೊಂಜಾಡಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದಲ್ಲಿ ಸರ್ಕಾರದಿಂದ ಸಾಧ್ಯವಾಗದ ಯೋಜನೆಗಳನ್ನು ಇಲ್ಲಿನ ಮುಖ್ಯಶಿಕ್ಷಕರೊಬ್ಬರು ಮಾಡಿ ತೋರಿಸಿದ್ದಾರೆ. ಈ ಶಾಲೆಯ ಮುಖ್ಯ ಶಿಕ್ಷಕರ ಸುರೇಶ್ ಶೆಟ್ಟಿಯವರು ಈ ಶಾಲೆಗೆ ಸೇರಿದ ಮಕ್ಕಳಿಗೆ ಸರ್ಕಾರ ಕೊಡುವ ನೋಟ್ ಪುಸ್ತಕ ಬಿಟ್ಟು ಬ್ಯಾಗ್, ಪೆನ್ನು, ಪೆನ್ಸಿಲು, ಮನೆಯಿಂದ ಶಾಲೆಗೆ ಹೋಗಿ ಬರಲು ಆಟೋಗೆ ಟ್ರಾವೆಲ್ ಅಲೋವೆನ್ಸ್ ಜತೆಗೆ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಪ್ರತೀ ಮಕ್ಕಳ ಮೇಲೆ ಒಂದು ಸಾವಿರ ರೂಪಾಯಿ ಎಫ್ ಡಿ ಕೂಡ ಮಾಡಿ ಕೊಡ್ತಾರೆ.

ಅಲ್ಲದೆ ಶಾಲೆಯಲ್ಲಿ ಮಕ್ಕಳು ಹೊರಗೆ ಕೈತೊಳೆಯಬಾರದೆಂದು ಶಾಲೆ ಆವರಣದಲ್ಲೇ ವಾಶ್ ಬೆಸಿನ್ ಕೂಡ ಮಾಡಿಕೊಟ್ಟಿದ್ದಾರೆ. ಸ್ವಲ್ಪ ದಾನಿಗಳ ಸಹಕಾರ ಪಡೆದು ಉಳಿದ ಹಣವನ್ನು ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ. ಹೀಗಾಗಿ ಮಕ್ಕಳ ಸಂಖ್ಯೆಯೂ ಹೆಚ್ಚಿದ್ದು ಇರುವ ಮಕ್ಕಳು ಖುಷಿಯಿಂದಲೇ ಪಾಠಕಲಿಯುತ್ತಿದ್ದಾರೆ.

1959ರಲ್ಲಿ ಪ್ರಾರಂಭವಾಗಿದ್ದ ಈ ಶಾಲೆಯಲ್ಲಿ ಶೇಕಡಾ 99 ರಷ್ಟು  ಕುಡುಬಿ ಜನಾಂಗದ ಮಕ್ಕಳೇ ಕಲಿಯುತ್ತಿದ್ದಾರೆ. ಮೊದಲ ಎರಡು ಮೂರು ವರ್ಷ 60ರಿಂದ 70ಮಕ್ಕಳಿದ್ದ ಈ ಶಾಲೆಯಲ್ಲಿ ತದನಂತರ ಶಿಕ್ಷಕರ ಹಾಗೂ ಮೂಲಸೌಕರ್ಯ ಕೊರತೆಯಿಂದ ಮಕ್ಕಳ ಸಂಖ್ಯೆ 11ಕ್ಕೆ ಇಳಿಯಿತು, ಯಾವುದೇ ಸೌಲಭ್ಯವಿಲ್ಲದೆ ಅದರಲ್ಲೂ ಶಿಕ್ಷಕರೇ ಇಲ್ಲದ ಈ ಶಾಲೆಗೆ ಊರಿನ ಜನರು ತಮ್ಮ ಮಕ್ಕಳನ್ನು ಕಳುಹಿಸಲು ಮನಸ್ಸು ಮಾಡಿರಲಿಲ್ಲ.

ಪಕ್ಕದ ಊರಿನ ಗೋಳಿಯಂಗಡಿ ಶಾಲೆಯೊಂದರಿಂದ ಈ ಶಾಲೆಗೆ ಮುಖ್ಯಶಿಕ್ಷಕರು ಬಂದ ಸುರೇಶ್ ಶೆಟ್ಟಿ ಈ ಶಾಲೆಗೆ ಮುಖ್ಯ ಶಿಕ್ಷಕರಾಗಿ ಬಂದ ಮೇಲೆ ಓರ್ವ ಶಿಕ್ಷಕಿಯಿದ್ದದ್ದು ಬಿಟ್ಟರೆ ಮತ್ಯಾರೂ ಇರಲಿಲ್ಲ ಹೀಗಾಗಿ ತಮ್ಮದೇ ಸ್ವಂತ ಖರ್ಚಿನಲ್ಲಿ ಮತ್ತೋರ್ವ ಗೌರವ ಶಿಕ್ಷಕಿಯನ್ನೂ ನೇಮಿಸಿಬಿಟ್ರು ಹೀಗಾಗಿ ಮಕ್ಕಳ ಸಂಖ್ಯೆಯಲ್ಲೂ 11ರಿಂದ 28ಕ್ಕೆ ಏರಿಕೆಯಾಯ್ತು.

ಮಕ್ಕಳ ಹಾಗೂ ಶಿಕ್ಷಕರ ಕೊರತೆ ಮನಗಂಡು ಈ ಶಾಲೆ ಮುಚ್ಚವಾರದು ಎಂಬ ನಿಟ್ಟಿನಲ್ಲಿ ಮೇಲಿನ ಯೋಜನೆಗಳನ್ನು ತನ್ನ ಸ್ವಂತ ಖರ್ಚು ಹಾಗೂ ದಾನಿಗಳ ಸಹಾಯದಿಂದ ಅನುಷ್ಠಾನಗೊಳಿಸಿದ ಸುರೇಶ್ ಶೆಟ್ಟಿ ವಾರ್ಷಿಕ 1ಲಕ್ಷವನ್ನು ಈ ಶಾಲೆಗೆ ವ್ಯಯಿಸುತ್ತಿದ್ದಾರೆ.ಸರ್ಕಾರಿಂದ ಶಾಲಾ ಪುಸ್ತಕ ತಡವಾಗಿ ಬಂದ್ರು ದಾನಿಗಳಿಂದ ಹೆಚ್ಚುವರಿ ಪುಸ್ತಕ ಖರೀದಿಸಿ ಸಂಗ್ರಹಿಸಿಟ್ಟಿದ್ದಾರೆ.
Loading...

ಹೀಗಾಗಿ ವರ್ಷಪೂರ್ತಿ ಮಕ್ಕಳಿಗೆ ಯಾವುದೇ ಕೊರತೆ ಬಾರದಂತೆ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ ಸುರೇಶ್ ಶೆಟ್ಟಿ. ಇದೀಗ ಓರ್ವ ಸಹ ಶಿಕ್ಷಕಿ ಸರ್ಕಾರದ ನೇಮಕಾತಿಯಂತೆ ಬೇರೆಂದು ಶಾಲೆಗೆ ವರ್ಗಾವಣೆಯಾಗಲಿರುವುದಿಂದ ಮುಂದಿನ ದಿನಗಳಲ್ಲಿ ಮತ್ತೆ ಶಿಕ್ಷಕರ ಕೊರತೆ ಈ ಶಾಲೆಯನ್ನು ಕಾಡಲಿದೆ ಇದರಿಂದ ಮತ್ತೆ ಮಕ್ಕಳ ಕೊರತೆಯಿಂದ ಶಾಲೆ ಮುಚ್ಚುವ ಸ್ಥಿತಿಯೂ ತಲುಪಬಹುದು ಹೀಗಾಗಿ ಸರ್ಕಾರವೂ ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ತುಂಬಿಸುವಲ್ಲಿ ಮನಸ್ಸು ಮಾಡಬೇಕಿದೆ ಎಂಬ ಕೂಗು ಇಲ್ಲಿನ ಶಿಕ್ಷಕರಿಂದ ಕೇಳಿ ಬರುತ್ತಿದೆ.

ಒಂದೇ ವರ್ಷದಲ್ಲೇ ಮಕ್ಕಳ ಸಂಖ್ಯೆ ಹಾಗೂ ಶಿಕ್ಷಕರ ಸಂಖ್ಯೆಯನ್ನು, ಮೂಲಭೂತ ಸೌಕರ್ಯವನ್ನೂ ಹೆಚ್ಚಿಸುವ ಮೂಲಕ ಮುಚ್ಚುವ ಸ್ಥಿತಿಯಲ್ಲಿದ್ದ ಈ ಕನ್ನಡ ಶಾಲೆಯನ್ನು ಉಳಿಸುವಲ್ಲಿ ಅವಿರತವಾಗಿ ಶ್ರಮಪಡುತ್ತಿರುವ ಮುಖ್ಯ ಶಿಕ್ಷಕ ಸುರೇಶ್ ಶೆಟ್ಟಿಯವರಿಗೆ ಹ್ಯಾಟ್ಸಾಫ್ ಅನ್ನಲೇ ಬೇಕು.

 
First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ