Transgender Reservations: ಪೊಲೀಸ್ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ: ಆರಗ ಜ್ಞಾನೇಂದ್ರ

3,484 ಹುದ್ದೆಗಳ ಪೈಕಿ 420 ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. ಇದರಲ್ಲಿ 11 ಹುದ್ದೆಗಳನ್ನು ಪುರುಷ ತೃತೀಯ ಲಿಂಗಿಗಳಿಗೆ ಮೀಸಲಿಡಲಾಗಿದೆ. ಇನ್ನುಳಿದ 3,064 ಹುದ್ದೆಗಳಲ್ಲಿ 68 ತೃತೀಯಲಿಂಗಿ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಗೃಹಸಚಿವ ಆರಗ ಜ್ಞಾನೇಂದ್ರ

ಗೃಹಸಚಿವ ಆರಗ ಜ್ಞಾನೇಂದ್ರ

  • Share this:
ಮಂಗಳವಾರ ಕರ್ನಾಟಕ ಸರ್ಕಾರ (Karnataka Government) ಪೊಲೀಸ್ ನೇಮಕಾತಿಯ (Police Constable Recruitment) ಅಧಿಸೂಚನೆ ಪ್ರಕಟಿಸಿದೆ. ಈ ಬಾರಿ ಪೊಲೀಸ್ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ (Male Transgenders) ಮೀಸಲಾತಿಯನ್ನು ಸಹ ಪ್ರಕಟಿಸಿದೆ. ಕರ್ನಾಟಕ ತೃತೀಯ ಲಿಂಗಿಗಳಿಗೆ ಮೀಸಲಾತಿ ಪ್ರಕಟಿಸಿದ ಮೊದಲ ರಾಜ್ಯವಾಗಿದೆ. ಈ ಕುರಿತು ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra), ಒಟ್ಟು 3,484  ಕಾನ್ಸ್‌ಟೇಬಲ್‌ಗಳನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿದೆ. ಇದರಲ್ಲಿ 79 ಸ್ಥಾನಗಳನ್ನು ಪುರುಷ ತೃತೀಯ ಲಿಂಗಿಗಳಿಗಾಗಿ ಮೀಸಲಿರಿಸಲಾಗಿದೆ. ಆರಂಭದಲ್ಲಿ ಈ ಮೀಸಲಾತಿ ಹಲವರಿಗೆ ಗೊಂದಲವುನ್ನುಂಟು ಮಾಡಿತ್ತು ಎಂದು ಸಚಿವರು ಹೇಳಿದರು.

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆಯು ದ್ವಿತೀಯ ಪಿಯುಸಿ ಪಾಸ್ ಪ್ರಮಾಣಪತ್ರ ಅಥವಾ 12ನೇ ತರಗತಿ ಉತ್ತೀರ್ಣರಾಗಿರಬೇಕು. ಆನ್​​ಲೈನ್​​ನಲ್ಲಿ ಅರ್ಜಿ ಸಲ್ಲಿಸಲು ಅಕ್ಟೋಬರ್ 31, 2022 ಕೊನೆಯ ದಿನಾಂಕ ಆಗಿದೆ. ಸರ್ಕಾರದ ಈ ನಿರ್ಧಾರವನ್ನು ತೃತೀಯ ಲಿಂಗಿಗಳ ಸಮುದಾಯ ಸ್ವಾಗತಿಸಿದೆ.

ತೃತೀಯ ಲಿಂಗಿಗಳಿಗೆ ಎಷ್ಟು ಮೀಸಲಾತಿ?

3,484 ಹುದ್ದೆಗಳ ಪೈಕಿ 420 ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. ಇದರಲ್ಲಿ 11 ಹುದ್ದೆಗಳನ್ನು ಪುರುಷ ತೃತೀಯ ಲಿಂಗಿಗಳಿಗೆ ಮೀಸಲಿಡಲಾಗಿದೆ. ಇನ್ನುಳಿದ 3,064 ಹುದ್ದೆಗಳಲ್ಲಿ 68 ತೃತೀಯಲಿಂಗಿ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಇದನ್ನೂ ಓದಿ: ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆ ನೇಮಕಾತಿ ಹೇಗೆ ಅರ್ಜಿ ಸಲ್ಲಿಕೆ ಮಾಡಬೇಕು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ತೃತೀಯ ಲಿಂಗಿಗಳಿಗೆ ಇತರರಿಗಿಂತ ಆಯಸ್ಸು ಹೆಚ್ಚಂತೆ!

ದಕ್ಷಿಣ ಕೊರಿಯಾದಲ್ಲಿ ನಡೆದ ಸಂಶೋಧನೆಯೊಂದು ಈ ಕುತೂಹಲಕರ ಅಂಶವನ್ನು ಬಹಿರಂಗಪಡಿಸಿದೆ. ತೃತೀಯ ಲಿಂಗಿಗಳು ಸಾಮಾನ್ಯ ಜನರಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂದು ತಿಳಿದುಬಂದಿದೆ. ತೃತೀಯ ಲಿಂಗಿಗಳ ಜೀವನ ಹೇಗಿರುತ್ತದೆ ಎಂಬ ಕುತೂಹಲ ಸದಾ ಕಾಡುತ್ತಲೇ ಇರುತ್ತದೆ. ಅವರು ಹೇಗೆ ಜೀವನ ಮಾಡುತ್ತಾರೆ? ಅವರ ಸಂತೋಷದ ರಹಸ್ಯವೇನು? ಎಂಬ ಪ್ರಶ್ನೆ ಕಾಡುತ್ತದೆ.

Job quota in police for transgender mrq
ಸಾಂದರ್ಭಿಕ ಚಿತ್ರ


ನೂರಾರು ವರ್ಷಗಳ ಕಾಲ ಕೊರಿಯನ್ ಪರ್ಯಾಯ ದ್ವೀಪದಲ್ಲಿ ವಾಸಿಸುತ್ತಿದ್ದ ತೃತೀಯ ಲಿಂಗಿಗಳ ಜೀವನಕ್ಕೆ ಸಂಬಂಧಿಸಿದ ದೇಶೀಯ ದಾಖಲೆಗಳನ್ನು ಸಂಶೋಧಕರು ಅಧ್ಯಯನ ಮಾಡಿದರು. ಕ್ಯಾಸ್ಟ್ರೇಶನ್ನಿಂದಾಗಿ ತೃತೀಯ ಲಿಂಗಿಗಳು ಹೆಚ್ಚು ಕಾಲ ಬದುಕುತ್ತಾರೆ ಎಂಬ ಅಂಶ ತಿಳಿದು ಬಂದಿದೆ.

ನಾಲ್ವರು ತೃತೀಯ ಲಿಂಗಿಗಳಿಂದ ಅಯ್ಯಪ್ಪಸ್ವಾಮಿ ದರ್ಶನ

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಾಲ್ವರು ತೃತೀಯ ಲಿಂಗಿಗಳು ಪೂಜೆ ಸಲ್ಲಿಸಿದ್ದಾರೆ. ಈ ಮೊದಲು ಹಿಂದು ಕಾರ್ಯಕರ್ತರಿಂದ ತಡೆಯಲ್ಪಟ್ಟಿದ್ದ ಈ ನಾಲ್ವರು ಇಂದು ಪೊಲೀಸ್​ ಭದ್ರತೆಯಲ್ಲಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ವಿದ್ಯಾರ್ಥಿನಿಯರು ಮಲಗಿದ್ದ ವೇಳೆ ಇಣುಕಿ ನೋಡ್ತಿದ್ದ ಶಿಕ್ಷಕ

ಮಕ್ಕಳು ಚೆನ್ನಾಗಿ ಓದಲಿ ಎಂದು ಅನೇಕ ಪೋಷಕರು (Parents) ವಸತಿ ಶಾಲೆಗಳಲ್ಲಿ ಮಕ್ಕಳನ್ನು ಬಿಟ್ಟಿರುತ್ತಾರೆ. ಆದ್ರೆ ಕೆಲ ವಸತಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯವಿರಲಿ ಮಕ್ಕಳಿಗೆ ಭದ್ರತೆ ಎನ್ನುವುದೇ ಇರಲ್ಲ. ಕಲಬುರಗಿಯಲ್ಲೂ ಶಿಕ್ಷಕರೇ (Teacher) ಮಕ್ಕಳಿಗೆ ಲೈಂಗಿಕ ಕಿರುಕುಳ (Harassing) ಕೊಟ್ಟಿರೋ ಘಟನೆ ಬೆಳಕಿಗೆ ಬಂದಿದೆ.

ವಸತಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಕಂಪ್ಯೂಟರ್​ ಆಪರೇಟರ್ (Computer Operator)​ ಇಬ್ಬರೂ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕುಂಚಾವರಂ ಠಾಣಾ ವ್ಯಾಪ್ತಿಯಲ್ಲಿರುವ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ:  Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೆಪ್ಟೆಂಬರ್ 16, 17ರಂದು ವಿದ್ಯುತ್ ಕಡಿತ

ಲೈಂಗಿಕ ಕಿರುಕುಳದ ಆರೋಪ

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಇರೋ ಈ ವಸತಿ ಶಾಲೆಯಲ್ಲಿ ಅನೇಕ ವಿದ್ಯಾರ್ಥಿನಿಯರಿದ್ದಾರೆ. ವಸತಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಕಂಪ್ಯೂಟರ್​ ಆಪರೇಟರ್ ಇಬ್ಬರ ವಿರುದ್ಧ ಹೈಸ್ಕೂಲ್ ವಿದ್ಯಾರ್ಥಿನಿಯರೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಇಬ್ಬರ ವಿರುದ್ಧ ದೂರು ನೀಡಿರೋ ವಿದ್ಯಾರ್ಥಿನಿಯರು ಶಿಕ್ಷಕರ ಅಸಭ್ಯ ವರ್ತನೆ ಬಗ್ಗೆ ಆರೋಪಿಸಿದ್ದಾರೆ.
Published by:Mahmadrafik K
First published: