• Home
  • »
  • News
  • »
  • state
  • »
  • Farming: ಹವಾಮಾನ ವೈಪರೀತ್ಯಗಳಿಂದ ಹೊಲಗಳಲ್ಲಿ ಬೆಳೆಗಳನ್ನು ಕಳೆದುಕೊಳ್ಳುತ್ತಿರುವ ಮಹಿಳೆಯರು, ಪರಿಹಾರಗಳೇನು?

Farming: ಹವಾಮಾನ ವೈಪರೀತ್ಯಗಳಿಂದ ಹೊಲಗಳಲ್ಲಿ ಬೆಳೆಗಳನ್ನು ಕಳೆದುಕೊಳ್ಳುತ್ತಿರುವ ಮಹಿಳೆಯರು, ಪರಿಹಾರಗಳೇನು?

ಕೃಷಿ ಭೂಮಿಯಲ್ಲಿ ಕೆಲಸ

ಕೃಷಿ ಭೂಮಿಯಲ್ಲಿ ಕೆಲಸ

Agriculture: ಹವಮಾನ ಬದಲಾವಣೆಯು ಸಾಮಾನ್ಯವಾಗಿದೆ. ಇದರಿಂದ ಉದ್ಯೋಗ ಕ್ಷೇತ್ರದಲ್ಲಿ ಇರುವವರು ಹಲವಾರು ನಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅದರಲ್ಲಿಯೂ ಹಲವಾರು ರೈತ ಮಹಿಳೆಯರು ನಷ್ಟವನ್ನು ಎದುರಿಸಿದ್ದಾರೆ.

  • Trending Desk
  • Last Updated :
  • Karnataka, India
  • Share this:

ಕೃಷಿಯ ಪ್ರಗತಿಯಲ್ಲಿ ರೈತ ಮಹಿಳೆಯರ ಪಾಲು ಅತ್ಯಂತ ಹಿರಿದಾದುದು. ಆದರೆ ಅತಿವೃಷ್ಟಿ, ಪ್ರವಾಹ ಹಾಗೂ ಅತಿಯಾದ ಶಾಖದ ಪ್ರಭಾವದಿಂದ ಹವಾಮಾನ ವೈಪರೀತ್ಯಕ್ಕೆ ಒಳಗಾಗುತ್ತಿರುವ ಕೃಷಿಯು ದೇಶದ ಬಡ ಕೃಷಿ ಕುಟುಂಬಗಳಿಗೆ ಆರ್ಥಿಕ ಸಂಕಷ್ಟವನ್ನೊಡ್ಡುತ್ತಿದೆ. ಮಹಿಳಾ ಕೃಷಿ ಕಾರ್ಮಿಕರು ಹೆಚ್ಚಾಗಿ ಬಳಲುತ್ತಿದ್ದಾರೆ ಎಂದು ಶಿಕ್ಷಣ ತಜ್ಞರು ಮತ್ತು ಕಾರ್ಯಕರ್ತರು ತಿಳಿಸಿದ್ದಾರೆ. ಪಶ್ಚಿಮ ಭಾರತದ ಹತ್ತಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಂಗವಿಕಲ (Disabled) ಮಹಿಳೆ ದೇವನಾಬಾಯಿ, ಭಾರೀ ಮಳೆಯಿಂದಾಗಿ ತೋಟಕ್ಕೆ ಬಂದಿದ್ದ ಪ್ರವಾಹದ ಬಳಿಕ ಇದೀಗ ನಿರುದ್ಯೋಗಕ್ಕೊಳಗಾಗಿದ್ದಾರೆ ಹಾಗೂ ಉಪವಾಸವಿರುವ ಪರಿಸ್ಥಿತಿ ಬಂದೊದಗಿದೆ ಎಂದು ತಿಳಿಸಿದ್ದಾರೆ. ಇವರಂತೆಯೇ ಹಲವಾರು ಮಹಿಳೆಯರು ಮಹಾರಾಷ್ಟ್ರದ (Maharashtra) ಬೀಡ್‌ನಲ್ಲಿರುವ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು ಆದರೆ ಅತಿಯಾದ ಮಳೆಯಿಂದಾಗಿ ಕೆಲಸವನ್ನು ಕಳೆದುಕೊಂಡರು. ಆದರೆ ಮಾನ್ಸೂನ್ ಮಳೆಯು ಅವರನ್ನು ಇನ್ನಷ್ಟು ಕಂಗೆಡುವಂತೆ ಮಾಡಿದೆ.


ಮಳೆ ಕಡಿಮೆಯಾಗಿ ನವೆಂಬರ್‌ನಲ್ಲಿ ಸುಗ್ಗಿಯ ಕಾಲದಲ್ಲಾದರೂ ಬೇರೆ ಹೊಲದಲ್ಲಿ ಕೆಲಸ ಸಿಗುತ್ತದೆ ಎಂದು ಕಾಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂಬುದು ಈ ರೈತ ಮಹಿಳೆಯರ ಅಳಲಾಗಿದೆ.


ಗ್ರಾಮೀಣ ಭಾರತದ ಮುಕ್ಕಾಲು ಭಾಗದಷ್ಟು ದುಡಿಯುವ ಮಹಿಳೆಯರು ಜೀವನೋಪಾಯಕ್ಕಾಗಿ ಕೃಷಿಯ ಮೇಲೆ ಅವಲಂಬಿತರಾಗಿದ್ದು, ಸರಕಾರದ ಅಂಕಿಅಂಶಗಳ ಪ್ರಕಾರ, ಕೆಲವೇ ಕೆಲವರನ್ನು ರೈತರು ಎಂದು ಗುರುತಿಸಲಾಗಿದೆ ಇಲ್ಲವೇ ಸ್ವಂತ ಕೃಷಿಭೂಮಿಯನ್ನು ಹೊಂದಿರುವ ಹಾಗೂ ಅಲ್ಲಿ ದುಡಿಯುವ ಮಹಿಳೆಯರನ್ನು ರೈತರು ಎಂದು ಗುರುತಿಸಲಾಗಿದೆ. ಇದರಿಂದ ಮಹಿಳೆಯರಿಗೆ ಸಾಲವನ್ನು ಪಡೆಯಲು ಅಥವಾ ಸರಕಾರದ ಸಹಾಯಧನವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.


ಮನೆಕೆಲಸಗಳಲ್ಲೇ ಬಂಧಿತರಾಗುವ ಮಹಿಳೆಯರು


ಹೊಲಗಳಲ್ಲಿ ಕೆಲಸ ಕಳೆದುಕೊಳ್ಳುವ ಪುರುಷರು ತಮ್ಮ ಕುಟುಂಬಗಳ ಪೋಷಣೆಗಾಗಿ ಹೊಸ ಉದ್ಯೋಗಗಳನ್ನು ಹುಡುಕಲು ನಗರಗಳಿಗೆ ತೆರಳಿದರೆ, ಮಹಿಳೆಯರು ಹೆಚ್ಚಾಗಿ ಮನೆಯ ಜವಾಬ್ದಾರಿಗಳಿಂದ ನಿರ್ಬಂಧಿತರಾಗುತ್ತಾರೆ ಎಂದು ಬಂಗಾಳದ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಕೇದಾರ್ ಕುಲಕರ್ಣಿ ತಿಳಿಸುತ್ತಾರೆ.


ಇದನ್ನೂ ಓದಿ: ಮಹಿಳೆಯರಿಂದ ರುದ್ರ ಪಠಣ! ಮಂತ್ರಘೋಷದ ಝೇಂಕಾರ


ಹವಾಮಾನ ಬದಲಾವಣೆ, ಆರ್ಥಿಕ ಹಿಂಜರಿತ ಅಥವಾ ಸರಕಾರದ ನೀತಿಗಳ ವೈಫಲ್ಯಕ್ಕೆ ಮಹಿಳೆಯರು ಹೆಚ್ಚು ದುರ್ಬಲರಾಗಿದ್ದಾರೆ ಎಂದು ಕುಲಕರ್ಣಿ ಅವರು ಕೃಷಿಯ ಮೇಲೆ ಹವಾಮಾನದ ಪ್ರಭಾವದ ಬಗ್ಗೆ ಉಲ್ಲೇಖಿಸಿದ್ದಾರೆ. ಸರಕಾರವು ಕೈಗೊಳ್ಳುವ ಯಾವುದೇ ನಿರ್ಧಾರವು ಮುಂಚೂಣಿಯಲ್ಲಿರುವ ಮಹಿಳೆಯರನ್ನು ಉದ್ದೇಶಿಸಿ ಅವರಿಗೆ ನೆರವು ನೀಡುವಂತಿರಬೇಕು ಎಂದು ಕುಲಕರ್ಣಿ ಸೂಚಿಸಿದ್ದಾರೆ.


ಅಪಾಯದಲ್ಲಿರುವ ಭವಿಷ್ಯದ ದಿನಗಳು


ಕೃಷಿಯು ಭಾರತದ ಸುಮಾರು $3 ಟ್ರಿಲಿಯನ್ ಆರ್ಥಿಕತೆಯ ಸುಮಾರು 15% ವನ್ನು ಹೊಂದಿದೆ ಮತ್ತು ಅದರ ಅರ್ಧದಷ್ಟು ಜನಸಂಖ್ಯೆಯನ್ನು ಪ್ರೋತ್ಸಾಹಿಸುತ್ತದೆ. ನಗರ ಪ್ರದೇಶಗಳಿಗೆ ಪುರುಷ ವಲಸೆಯ ಕಾರಣದಿಂದ ಗ್ರಾಮೀಣ ಕೃಷಿ ಉದ್ಯೋಗಿಗಳಲ್ಲಿ ಹೆಚ್ಚು ಮಹಿಳಾ ಪ್ರಾಬಲ್ಯ ಹೊಂದಿರುವುದರಿಂದ, ಅನಿಯಮಿತ ಹವಾಮಾನವು ಹೆಚ್ಚಾಗಿ ಮಹಿಳೆಯರಿಗೆ ಸಂಕಷ್ಟವನ್ನುಂಟು ಮಾಡಿದೆ.


ಇತ್ತೀಚಿನ ಗ್ಲೋಬಲ್ ಕ್ಲೈಮೇಟ್ ರಿಸ್ಕ್ ಇಂಡೆಕ್ಸ್ ಪ್ರಕಾರ, 2019 ರಲ್ಲಿ ಭಾರತವು ಹವಾಮಾನ ಬದಲಾವಣೆಯಿಂದ ಏಳನೇ ಅತಿ ಹೆಚ್ಚು ಬಾಧಿತ ದೇಶ ಎಂದೆನಿಸಿದೆ. ಗ್ರಾಮೀಣ ಮಹಿಳೆಯರಿಗೆ ಸಹಾಯ ಮಾಡುವ ಸ್ಥಳೀಯ ಎನ್‌ಜಿಓ ಸರಸ್ವತಿ ಸೇವಾಭಾವಿ ಸಂಸ್ಥೆ ತಿಳಿಸುವಂತೆ ಮಹಿಳಾ ಕೃಷಿ ಕಾರ್ಮಿಕರು ಆದಾಯವನ್ನು ಪಡೆಯದೇ ಇದ್ದಾಗ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಇನ್ನು ಕೆಲವರು ತಮ್ಮ ಹೆಣ್ಣುಮಕ್ಕಳನ್ನು ಬೇಗನೇ ವಿವಾಹ ಮಾಡಿಕೊಡುತ್ತಾರೆ ಹಾಗೂ ಈ ಹೆಣ್ಣುಮಕ್ಕಳು ಕೌಟುಂಬಿಕ ಹಿಂಸೆಯಿಂದ ಬಳಲುತ್ತಾರೆ ಎಂಬುದಾಗಿ ತಿಳಿಸಿದೆ.


ಇದನ್ನೂ ಓದಿ: ಕರ್ನಾಟಕ ಕೋಮು ಸಂಘರ್ಷದ ಕಾರ್ಖಾನೆ; ರಾಗಾ ಹೇಳಿಕೆಗೆ ಸಿಎಂ ತಿರುಗೇಟು


ಮಹಿಳೆಯರ ನೆರವಿನಲ್ಲಿ ಭಾರತದ ಪಾತ್ರ


ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆ ಎಂದೆನಿಸಿರುವ ಭಾರತ ಸತತವಾಗಿ ಹೆಚ್ಚಿನ ನಿರುದ್ಯೋಗ ಹಾಗೂ ಹಣದುಬ್ಬರ ಸಮಸ್ಯೆಯೊಂದಿಗೆ ಸೆಣಸಾಡುತ್ತಿದೆ. ಈ ಸಮಯದಲ್ಲಿ ಮಹಿಳಾ ಕೃಷಿ ಕಾರ್ಮಿಕರಿಗೆ ಯಾವುದೇ ನಿರ್ದಿಷ್ಟ ಕಾಯಿದೆ ಅಥವಾ ಯೋಜನೆ ಇಲ್ಲ ಎಂಬುದು ಇಲ್ಲಿ ಸಮಸ್ಯೆಯೇ ಆಗಿದೆ.


ಕೃಷಿಯಲ್ಲಿ ಉದ್ಯೋಗ ನಿರತ ಮಹಿಳೆಯರಿಗೆ ವಕೀಲರು ಸಾಮಾಜಿಕ ವಿಶ್ಲೇಷಕರು ಬೆಂಬಲವನ್ನು ನೀಡಿದ್ದಾರೆ. ಹವಾಮಾನ ವೈಪರೀತ್ಯಗಳ ಕುರಿತು ಮಹಿಳೆಯರಿಗೆ ಜಾಗೃತಿ ಮೂಡಿಸುವುದು ಹಾಗೂ ಬ್ಯಾಂಕಿಂಗ್ ಮತ್ತು ಸಾಲ ವ್ಯವಸ್ಥೆಗಳನ್ನು ಅವರಿಗೆ ಒದಗಿಸುವ ಮೂಲಕ ಆರ್ಥಿಕವಾಗಿ ಸಬಲರನ್ನಾಗಿಸಬೇಕು ಎಂದು ಶಿಕ್ಷಣ ತಜ್ಞರಾದ ಕುಲಕರ್ಣಿ ತಿಳಿಸಿದ್ದಾರೆ.

First published: