• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Minister Munirathna: ಸಚಿವ ಮುನಿರತ್ನ ವಿರುದ್ಧ ವಿದ್ಯಾರ್ಥಿಗಳಿಂದ ದೂರು; ಯಾಕೆ ಗೊತ್ತಾ?

Minister Munirathna: ಸಚಿವ ಮುನಿರತ್ನ ವಿರುದ್ಧ ವಿದ್ಯಾರ್ಥಿಗಳಿಂದ ದೂರು; ಯಾಕೆ ಗೊತ್ತಾ?

ಸಚಿವ ಮುನಿರತ್ನ

ಸಚಿವ ಮುನಿರತ್ನ

ಹಾಸ್ಟೆಲ್ ನಲ್ಲಿ ಬಿಟ್ಟಿ ಊಟ ಮಾಡಿಕೊಂಡು ಸುಮ್ನೆ ಇರೋದು ಬಿಟ್, ಇದನ್ನೆಲ್ಲ ಮಾಡ್ತೀರಾ? ಡ್ಯಾಶ್ ನನ್ ಮಕ್ಕಳು ಎಂದು ನಿಂದಿಸಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  • Share this:

ಸಚಿವ ಮುನಿರತ್ನ (Minister Munirtahna) ವಿರುದ್ಧ ಜ್ಞಾನಭಾರತಿ ವಿಶ್ವವಿದ್ಯಾನಿಲಯ (Jnanabharathi University Bangalore) ವಿದ್ಯಾರ್ಥಿಗಳು ದೂರು ಸಲ್ಲಿಸಿದ್ದಾರೆ. ತಮ್ಮ ಮೇಲೆ ಹಲ್ಲೆ, ನಿಂದನೆ ಆರೋಪ ಮಾಡಿರುವ ವಿದ್ಯಾರ್ಥಿಗಳು ದೂರು ದಾಖಲಿಸಿದ್ದಾರೆ. ಜೂನ್ 12ರಂದು ಜ್ಞಾನಭಾರತಿ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಸಚಿವರ ಬೆಂಬಲಿಗರು (Minister Followers) ಕಟೌಟ್, ಬಿಜೆಪಿಯ (BJP) ಬಂಟಿಂಗ್ ಮತ್ತು ಫ್ಲೆಕ್ಸ್ ಗಳನ್ನು ಹಾಕುತ್ತಿದ್ದರು. ವಿವಿ ವ್ಯಾಪ್ತಿಯಲ್ಲಿ ಪಕ್ಷದ ಬಂಟಿಂಗ್ ಹಾಕುತ್ತಿರೋದನ್ನು ಕೆಲ  ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮುನಿರತ್ನ ಬೆಂಬಲಿಗರು ಮತ್ತು ವಿದ್ಯಾರ್ಥಿಗಳ (Students) ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ಇನ್ನು ವಿಷಯ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಪೊಲೀಸರು (Police) ಪರಿಸ್ಥಿತಿ ಶಾಂತಗೊಳಿಸಲು ಮುಂದಾಗಿದ್ದರು.


ಆದ್ರೆ ಈ ವೇಳೆ ಮುನಿರತ್ನ ಬೆಂಬಲಿಗರು ವಿದ್ಯಾರ್ಥಿಗಳ ಮೇಲೆ  ಮುಗಿಬಿದ್ದು, ಬಲವಂತವಾಗಿ ಕತ್ತಿನ ಪಟ್ಟಿ ಹಿಡಿದು ಅವಾಚ್ಯ ಪದಗಳಿಂದ ನಿಂದಿಸಿ ಪೊಲೀಸ್ ವ್ಯಾನ್ ಹತ್ತಿಸಿರುವ ಗಂಭೀರ ಆರೋಪಗಳು ಕೇಳಿ ಬಂದಿವೆ.


ಮೊಬೈಲ್ ಕಿತ್ಕೊಂಡು ವಿಡಿಯೋ ಡಿಲೀಟ್


ಹಾಸ್ಟೆಲ್ ನಲ್ಲಿ ಬಿಟ್ಟಿ ಊಟ ಮಾಡಿಕೊಂಡು ಸುಮ್ನೆ ಇರೋದು ಬಿಟ್, ಇದನ್ನೆಲ್ಲ ಮಾಡ್ತೀರಾ? ಡ್ಯಾಶ್ ನನ್ ಮಕ್ಕಳು ಎಂದು ನಿಂದಿಸಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೇ ವೇಳೆ ನಮ್ಮ ಜಾತಿ ಬಗ್ಗೆ ಅವಹೇಳನವಾಗಿ ನಿಂದನೆ ಮಾಡಿದ್ದಾರೆ. ಇದರ ಜೊತೆಗೆ ಗಲಾಟೆಯ ದೃಶ್ಯ ಹಿಡಿದಿದ್ದ ನಮ್ಮ ಮೊಬೈಲ್ ಗಳನ್ನು ಕಿತ್ಕೊಂಡು ಎಲ್ಲಾ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ನೀಡಿದ ದೂರಿನಲ್ಲಿ ದಾಖಲಾಗಿದೆ.


ಇದನ್ನೂ ಓದಿ:  Motamma: ತನ್ನ ಆತ್ಮಕಥೆಯಲ್ಲಿ ಸಿದ್ದು ವಿರುದ್ಧ ಸಿಡಿದೆದ್ದ ಮೋಟಮ್ಮ; ಕೈ ನಾಯಕರ ಮೇಲೇಕೆ ಈ ಪರಿ ಸಿಟ್ಟು


ವಿದ್ಯಾರ್ಥಿಗಳ ಮೇಲೆ ಹಲ್ಲೆ


ಇನ್ನೂ ಈ ಘಟನೆಗೆ ಕಾರಣವಾದ ಸಚಿವ ಮುನಿರತ್ನ ಗನ್ ಮ್ಯಾನ್, ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಮುನಿರತ್ನ ಬೆಂಬಲಿಗರು ವಿದ್ಯಾರ್ಥಿ ನಾಯಕ್ ಲೋಕೇಶ್ ರಾಮ್ ಸೇರಿದಂತೆ ಹಲವು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಆರೋಪಗಳು ಕೇಳಿ ಬಂದಿವೆ.


ರಾಜಕೀಯದ ಜೊತೆಯಲ್ಲಿ ಚಿತ್ರರಂಗದಲ್ಲಿಯೂ ಮುನಿರತ್ನ ಗುರುತಿಸಿಕೊಂಡಿದ್ದಾರೆ. ಆಂಟಿ ಪ್ರೀತ್ಸೆ, ರಕ್ತ ಕಣ್ಣೀರು, ಅನಾಥರು, ಕಟಾರಿ ವೀರ ಸುರಸುಂದರಾಂಗಿ, ಮುನಿರತ್ನ ಕುರುಕ್ಷೇತ್ರ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ . ರಾಜ ರಾಜೇಶ್ವರಿ ಕ್ಷೇತ್ರದ ಶಾಸಕರಾಗಿರುವ ಮುನಿರತ್ನ ಅವರು ಸಿಎಂ ಬೊಮ್ಮಾಯಿ ಸಂಪುಟದಲ್ಲಿ ತೋಟಗಾರಿಕೆ ಸಚಿವರಾಗಿದ್ದಾರೆ.


ವಿಧಾನ ಪರಿಷತ್ ಚುನಾವಣೆ


ವಿಧಾನ ಪರಿಷತ್ ಚುನಾವಣೆಗೆ ಮತದಾನ ಆರಂಭಗೊಂಡಿದ್ದು, ಜೂನ್ 15 ರಂದು ಮತ ಎಣಿಕೆ ನಡೆಯಲಿದೆ. ಎಲ್ಲಾ ಮತದಾನ ಕೇಂದ್ರಗಳಲ್ಲಿ ಮತದಾನ ಆರಂಭಗೊಂಡಿದ್ದು, 607 ಮತಗಟ್ಟೆಗಳಲ್ಲಿ 2,84,922 ಶಿಕ್ಷಕರು ಮತ್ತು ಪದವೀಧರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇನ್ನು ಚುನಾವಣಾ ಕಣದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ 49 ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆಗೆ ಸೇರಲಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ. ವಾಯುವ್ಯ ಪದವೀಧರ ಕ್ಷೇತ್ರವೊಂದರಲ್ಲಿ ಮಾತ್ರ ಜೆಡಿಎಸ್ ಸ್ಪರ್ಧೆ ಮಾಡಿಲ್ಲ.


ಇದನ್ನೂ ಓದಿ:  Drugs Case: ಬೆಂಗಳೂರಿನಲ್ಲಿ ಬಾಲಿವುಡ್​ ಸ್ಟಾರ್ ನಟನ ಮಗ ಅರೆಸ್ಟ್, ಲೇಟ್​ ನೈಟ್​ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ!


ಜುಲೈ ನಾಲ್ಕರಂದು ಬಿಜೆಪಿಯ ಹಣಮಂತ ನಿರಾಣಿ, ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ, ಬಿಜೆಪಿಯ ಅರುಣ್ ಶಹಾಪುರ  ಮತ್ತು ಮತ್ತು ಜೆಡಿಎಸ್‌ ನ ಬಸವರಾಜ ಹೊರಟ್ಟಿ ಅವರ ಅವಧಿ ಅಂತ್ಯಗೊಳ್ಳಲಿದೆ. ಈ ಹಿನ್ನೆಲೆ ಚುನಾವಣೆ ನಡೆಯುತ್ತಿದೆ.


ವಿಧಾನ ಪರಿಷತ್ ನಲ್ಲಿ ಬಹುಮತ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರಕ್ಕೆ ಈ ಚುನಾವಣೆ ಮಹತ್ವದಾಗಿದೆ. ಇತ್ತ ಬಸವರಾಜ್ ಹೊರಟ್ಟಿ ಈ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ.

top videos
    First published: