ಬೆಂಗಳೂರು: ಆಗಷ್ಟೇ ಕೆಲಸ ಮುಗಿಸಿಕೊಂಡು ತರಕಾರಿ ಬ್ಯಾಗ್ (Vegetable Bag) ಸಮೇತ ಮನೆ ಕಡೆಗೆ ಹೊರಟಿದ್ದರು. ಮನೆಗೆ (Home) ಬರುವುದು ಮಗಳ (Daughter) ಕೈಗೆ ತರಕಾರಿ ಬ್ಯಾಗ್ ಕೊಟ್ಟು, ಅರ್ಜೆಂಟ್ ಕೆಲಸ ಇದೆ ಹೋಗಿ ಬರುತ್ತೇನೆ, ಮನೆ ಲಾಕ್ ಮಾಡಿಕೊಂಡು ಮಲಗಿ ಅಂತ ಹೇಳಿ ಹೋಗಿದ್ದರು. ಆದರೆ ಮುಂದೆ ಆಗಿದ್ದು ಮಾತ್ರ ಘನಘೋರ. ನಿರ್ಜನ ಪ್ರದೇಶದ ನಡು ರಸ್ತೆಯಲ್ಲಿ (Road) ವ್ಯಕ್ತಿಯನ್ನು ಕೊಚ್ಚಿ ಕೊಲೆ (Murder) ಮಾಡಿದ್ದರು. ಕೊಲೆಯಾದ ವ್ಯಕ್ತಿಯನ್ನು 56 ವರ್ಷದ ದಿನೇಶ್ ಎಂದು ಗುರುತಿಸಲಾಗಿತ್ತು.
ರಾತ್ರಿ 9ರ ಸುಮಾರಿಗೆ ಕೊಚ್ಚಿ ಕೊಂದ ದುಷ್ಕರ್ಮಿಗಳು!
ಕೊಲೆಯಾದ ದಿನೇಶ್ ಮಂಗನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಾರ್ಪೆಂಟರ್ ಜೊತೆಗೆ ಮನೆ ತೋರಿಸುವ ಬ್ರೋಕರ್ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಕೆಲಸ ಮುಗಿಸಿ, ತರಕಾರಿ ತಗೊಂಡು ಮನೆಗೆ ಬಂದಿದ್ದ ದಿನೇಶ್, ಮನೆ ಮುಂದೆಯೇ ನಿಂತು ಹಾರ್ನ್ ಮಾಡಿ ಮಗಳನ್ನು ಕರೆದು ತರಕಾರಿ ಬ್ಯಾಗ್ ಕೊಟ್ಟಿದ್ದರು.
ಬಳಿಕ ಅರ್ಜೆಂಟ್ ಕೆಲಸ ಇದೆ, ನಾನು ಬರೋದು ಸ್ವಲ್ಪ ತಡ ಆಗುತ್ತೆ, ಡೋರ್ ಲಾಕ್ ಮಾಡಿಕೊಂಡು ಮಲಗಿರಿ ಅಂತ ಹೇಳಿ ಹೋಗಿದ್ದರು. ಹೀಗೆ ಹೋದ 10 ನಿಮಿಷಕ್ಕೆ ದಿನೇಶ್ರನ್ನು ಲಾಂಗು ಮಚ್ಚುಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದರು.
ಇದನ್ನೂ ಓದಿ: CT Ravi: ಮಾಂಸ ತಿಂದಿದ್ದು ನನಗೆ ನೆನಪು ಇರಲಿಲ್ಲ; ವಿವಾದ ಭುಗಿಲೆದ್ದ ಬೆನ್ನಲ್ಲೇ ಸಿ ಟಿ ರವಿ ಸ್ಪಷ್ಟನೆ
ಶ್ವಾನದಳ, ಬೆರಳಚ್ಚು ಟೀಂಗಳಿಂದಲೂ ಸ್ಥಳ ಪರಿಶೀಲನೆ!
ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದರು. ಜ್ಞಾನಭಾರತಿಯ ಸರ್.ಎಂ ವಿಶ್ವೇಶ್ವರಯ್ಯ ಲೇಔಟ್ನ ದೊಡ್ಡಬಸ್ತಿ ಬಳಿಯ ನಿರ್ಜನ ಪ್ರದೇಶದಲ್ಲಿ ಬರ್ಬರ ಕೊಲೆ ನಡೆದಿತ್ತು. ದಿನೇಶ್ ಬೈಕ್ನಲ್ಲಿ ತೆರಳ್ತಿದ್ದಾಗ ಅಡ್ಡಗಟ್ಟಿರುವ ದುಷ್ಕರ್ಮಿಗಳು, ಮನಸೋ ಇಚ್ಛೆ ಲಾಂಗು, ಮಚ್ಚಿನಿಂದ ದಾಳಿ ಮಾಡಿದ್ದಾರೆ. ಕತ್ತು ಸೀಳಿ ಕೊಲೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಬಂದ ಜ್ಞಾನಭಾರತಿ ಪೊಲೀಸರು ಸುತ್ತಮುತ್ತ ಪರಿಶೀಲನೆ ಮಾಡಿದಾಗ ಒಂದು ಲಾಂಗ್ ಸಿಕ್ಕಿದೆ.
ಬೆರಳಚ್ಚು ಹಾಗೂ ಶ್ವಾನದಳ ಪರಿಶೀಲನೆ ಮಾಡಿದ್ದು, ಆರೋಪಿಗಳಿಗಾಗಿ ಬಲೆಬೀಸಿ ಬಂಧಿಸಿದ್ದಾರೆ. ಕೊಲೆಗೂ ಮುನ್ನ ದಿನೇಶ್ಗೆ ಬಾಪೂಜಿನಗರ ನಿವಾಸಿ ಪೇಂಟರ್ ಅರುಣ್ ಎಂಬಾತ ನಾಲ್ಕೈದು ಬಾರಿ ಕರೆ ಮಾಡಿದ್ದು, ಘಟನೆ ಬಳಿಕ ಅರುಣ್ ಫೋನ್ ಸ್ವಿಚ್ ಆಫ್ ಆಗಿದ್ದು, ಮನೆ ಬಿಟ್ಟು ತೆರಳಿದ್ದ. ಕೊಲೆ ಹಿಂದೆ ಅರುಣ್ ಇದ್ದಾನ ಅನ್ನೋ ಶಂಕೆ ವ್ಯಕ್ತವಾಗಿತ್ತು, ಘಟನೆ ನಡೆದ 24 ಗಂಟೆಯಲ್ಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: KSRTC ಬಸ್ನಲ್ಲಿ ಮಹಿಳೆ ಸೀಟ್ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿ
ಕೊಲೆಗೆ ಕಾರಣವೇನು?
ಕೊಲೆಯಾಗಿದ್ದ ದಿನೇಶ್ ಬಳಿಯಿಂದ ಆರೋಪಿ ಅರುಣ್ ಒಂದು ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡಿದ್ದನಂತೆ. ಇತ್ತೀಚೆಗೆ ದಿನೇಶ್ ಹಣ ವಾಪಾಸ್ ಕೊಡಲು ಕೇಳಿದ್ದನಂತೆ. ಈ ವೇಳೆ ಹಣ ಕೊಡಲು ಆಗಲ್ಲ ಎಂದು ಅರುಣ್ ವಾದ ಮಾಡಿದ್ದರಂತೆ. ಈ ವೇಳೆ ದಿನೇಶ್, ಅರುಣ್ ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನಂತೆ.
ಇದರಿಂದ ರೊಚ್ಚಿಗೆದ್ದ ಅರುಣ್, ನಿನ್ನೆ ರಾತ್ರಿ ಹಣ ಕೊಡುತ್ತೇನೆ ಎಂದು ಕರೆದು ನಡುರಸ್ತೆಯಲ್ಲೇ ದಿನೇಶ್ನನ್ನು ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಎಂಬ ಮಾಹಿತಿ ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ದಿನೇಶ್ ಪತ್ನಿ ಲಕ್ಷ್ಮಿ ನೀಡಿದ ದೂರಿನ ಆಧಾರದ ಮೇಲೆ ಜ್ಙಾನಭಾರತಿ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ