ಜಿಂದಾಲ್​ಗೆ ಭೂ ಪರಭಾರೆ ವಿಚಾರ; ಬಳ್ಳಾರಿಗೆ ಪಾದಯಾತ್ರೆ ಇಲ್ಲ ಎಂದು ಸ್ಪಷ್ಟಪಡಿಸಿದ ಬಿ.ಎಸ್​.ಯಡಿಯೂರಪ್ಪ

ಜಿಂದಾಲ್​ಗೆ ಸರ್ಕಾರ ಅಗ್ಗದ ಬೆಲೆಗೆ ಭೂಮಿ ಪರಭಾರೆ ಮಾಡಿರುವ ವಿಚಾರವಾಗಿ ಬಿಜೆಪಿ ಯಾವುದೇ ಪಾದಯಾತ್ರೆ ಮಾಡಲು ಉದ್ದೇಶಿಸಿಲ್ಲ. ಆದರೆ, ಈ ಕುರಿತು ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಜಿಂದಾಲ್​ಗೆ ಭೂಮಿ ಮಾರಾಟ ಐಎಂಎ ಪ್ರಕರಣ, ಕೃಷಿ ಸಾಲ ಮನ್ನಾ ಸೇರಿದಂತೆ ಅನೇಕ ವಿಚಾರಗಳ ಕುರಿತು ಸದನದಲ್ಲಿ ಪ್ರಶ್ನಿಸಲಾಗುವುದು ಎಂದು ಬಿ.ಎಸ್​. ಯಡಿಯೂರಪ್ಪ ತಿಳಿಸಿದ್ದಾರೆ.

MAshok Kumar | news18
Updated:June 18, 2019, 2:37 PM IST
ಜಿಂದಾಲ್​ಗೆ ಭೂ ಪರಭಾರೆ ವಿಚಾರ; ಬಳ್ಳಾರಿಗೆ ಪಾದಯಾತ್ರೆ ಇಲ್ಲ ಎಂದು ಸ್ಪಷ್ಟಪಡಿಸಿದ ಬಿ.ಎಸ್​.ಯಡಿಯೂರಪ್ಪ
ಬಿ.ಎಸ್​. ಯಡಿಯೂರಪ್ಪ
MAshok Kumar | news18
Updated: June 18, 2019, 2:37 PM IST
ಬೆಂಗಳೂರು (ಜೂನ್​.18); ಜಿಂದಾಲ್​ ಕಂಪೆನಿಗೆ ಭೂಮಿ ಪರಭಾರೆ ವಿಚಾರವಾಗಿ ಬಳ್ಳಾರಿಗೆ ಪಾದಯಾತ್ರೆ ಮಾಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಬಳ್ಳಾರಿಯಲ್ಲಿ ಜಿಂದಾಲ್​ ಕಂಪೆನಿಗೆ ಇತ್ತೀಚೆಗೆ ರಾಜ್ಯ ಸರ್ಕಾರ ಸುಮಾರು 3600 ಎಕರೆಗೂ ಹೆಚ್ಚು ಭೂಮಿಯನ್ನು ಅಗ್ಗದ ಬೆಲೆ ನೀಡಲು ಮುಂದಾಗಿತ್ತು. ಸರ್ಕಾರದ ಈ ತೀರ್ಮಾನವನ್ನು ವಿರೋಧಿಸಿದ್ದ ಬಿಜೆಪಿ ಈ ಕುರಿತು ಬೆಂಗಳೂರಿನಲ್ಲಿ ಎರಡು ದಿನ ಅಹೋರಾತ್ರಿ ಧರಣಿ ನಡೆಸಿ ಪ್ರತಿಭಟಿಸಿತ್ತು. ಅಲ್ಲದೆ ಈ ಪ್ರತಿಭಟನೆಯ ಬೆನ್ನಿಗೆ 2013ರಲ್ಲಿ ಬಳ್ಳಾರಿ ಗಣಿಲೂಟಿಯನ್ನು ವಿರೋಧಿಸಿ ಸಿದ್ದರಾಮಯ್ಯ ನಡೆಸಿದಂತೆಯೇ ಬಿಜೆಯೂ ಬಳ್ಳಾರಿಗೆ ಪಾದಯಾತ್ರೆ ನಡೆಸಲಿದೆ ಎಂಬ ಮಾತುಗಳು ರಾಜಕೀಯ ವಠಾರದಲ್ಲಿ ಕೇಳಿಬರುತ್ತಿತ್ತು.

ಇದನ್ನೂ ಓದಿ : ಜಿಂದಾಲ್​ನಿಂದ 20 ಕೋಟಿ ಕಿಕ್​ಬ್ಯಾಕ್​ ವಿಚಾರ; ಹೊಣೆಗೇಡಿತನದಿಂದ ಮಾತನಾಡುವುದು ಸರಿಯಲ್ಲ; ಸಿಎಂ ಗೆ ಟಾಂಗ್ ಕೊಟ್ಟ ಯಡ್ಡಿ!

ಆದರೆ, ಮಂಗಳವಾರ ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿ.ಎಸ್​. ಯಡಿಯೂರಪ್ಪ, “ಜಿಂದಾಲ್​ಗೆ ಸರ್ಕಾರ ಅಗ್ಗದ ಬೆಲೆಗೆ ಭೂಮಿ ಪರಭಾರೆ ಮಾಡಿರುವ ವಿಚಾರವಾಗಿ ಬಿಜೆಪಿ ಯಾವುದೇ ಪಾದಯಾತ್ರೆ ಮಾಡಲು ಉದ್ದೇಶಿಸಿಲ್ಲ. ಆದರೆ, ಈ ಕುರಿತು ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಜಿಂದಾಲ್​ಗೆ ಭೂಮಿ ಮಾರಾಟ ಐಎಂಎ ಪ್ರಕರಣ, ಕೃಷಿ ಸಾಲ ಮನ್ನಾ ಸೇರಿದಂತೆ ಅನೇಕ ವಿಚಾರಗಳ ಕುರಿತು ಸದನದಲ್ಲಿ ಪ್ರಶ್ನಿಸಲಾಗುವುದು” ಎಂದು ತಿಳಿಸಿದ್ದಾರೆ.

ಇನ್ನೂ ಯಡಿಯೂರಪ್ಪ ಚೆಕ್ ಮೂಲಕ ಜಿಂದಾಲ್​ನಿಂದ 20 ಕೋಟಿ ಲಂಚ ಪಡೆದಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, “ಸಿಎಂ ಕುಮಾರಸ್ವಾಮಿ ತಮ್ಮ ಹುಳುಕು ಮುಚ್ಚಿಹಾಕಿಕೊಳ್ಳುವ ಸಲುವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಆ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಸಿಬಿಐ ನ್ಯಾಯಾಲಯದಲ್ಲಿ ಈ ಪ್ರಕರಣ 7-8 ವರ್ಷದ ಹಿಂದೆಯೇ ಖುಲಾಸೆಯಾಗಿದೆ. ನನ್ನ ಬಗ್ಗೆ ಚರ್ಚಿಸಲು ವಿಧಾನಸಭೆಗೆ ಬರಲಿ, ನಾನೂ ದಾಖಲೆ ತರುತ್ತೇನೆ ಚರ್ಚೆಗೆ ನಾನು ಸಿದ್ದ” ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯರಂತೆ ಪಾದಯಾತ್ರೆ ಮೂಲಕ ಜಿಂದಾಲ್​ ಭೂ ಪರಭಾರೆ ವಿರೋಧಿಸಿ ಪಕ್ಷದ ವರ್ಚಸ್ಸು ವೃದ್ಧಿಗೆ ಸಜ್ಜಾದ ಬಿಜೆಪಿ
Loading...

First published:June 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...