ಬಿಜೆಪಿಯಿಂದ ದೇಶದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ; ಪ್ರಧಾನಿ ಮೋದಿ ವಿರುದ್ಧ ಜಿಗ್ನೇಶ್​​ ಮೇವಾನಿ ಕಿಡಿ

news18
Updated:September 5, 2018, 8:50 PM IST
ಬಿಜೆಪಿಯಿಂದ ದೇಶದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ; ಪ್ರಧಾನಿ ಮೋದಿ ವಿರುದ್ಧ ಜಿಗ್ನೇಶ್​​ ಮೇವಾನಿ ಕಿಡಿ
news18
Updated: September 5, 2018, 8:50 PM IST
ಕೃಷ್ಣಾ ಜಿ.ವಿ, ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.05): ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿಚಾರವಾದಿಗಳನ್ನು ಅರ್ಬನ್​ ನಕ್ಸಲೈಟ್​ ಎಂದು ಹೇಳಿ ಜೈಲಿಗಟ್ಟುತ್ತಿದೆ. ಹೀಗಾಗಿ, ಬಿಜೆಪಿಯನ್ನು ಸೋಲಿಸಲು ನಾನು ಹೋರಾಟ ಮಾಡುತ್ತೇನೆ ಎಂದು ಗುಜರಾತ್​ ಶಾಸಕ ಜಿಗ್ನೇಶ್​ ಮೇವಾನಿ ಎಚ್ಚರಿಕೆ ನೀಡಿದ್ಧಾರೆ.

ಸಾಮಾಜಿಕ ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಕಿಡಿಗೇಡಿಗಳ ಗುಂಡೇಟಿಗೆ ಬಲಿಯಾಗಿ ಇಂದಿಗೆ ಒಂದು ವರ್ಷವಾಗಿದೆ. ಈ ಹಿನ್ನಲೆಯಲ್ಲಿ ಗೌರಿ ನೆನಪಇನ ಅಂಗವಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜ್​​ ಆವರಣದಲ್ಲಿಯ ಜ್ಞಾನಜ್ಯೋತಿ ಸಂಭಾಗಣದಲ್ಲಿ ಅಭಿವ್ಯಕ್ತಿ ಹತ್ಯಾ ವಿರೋಧಿ ಸಮಾವೇಶ ಆಯೋಜಿಲಾಗಿತ್ತು.

ಸಮಾವೇಶದಲ್ಲಿ ಮಾತನಾಡಿದ ಗುಜರಾತ್​ ಶಾಸಕ ಜಿಗ್ನೇಶ್​​ ಮೇವಾನಿ ಅವರು, ರಾಜ್ಯದಲ್ಲಿ ಚುನಾವಣೆಗೆ ಮುನ್ನ ಪ್ರಚಾರಕ್ಕೆ ಬಂದ ನನ್ನ ಮೇಲೆ ಮೂರು ಎಫ್​ಐಆರ್​ ದಾಖಲಿಸಿದ್ದಾರೆ. ಈ ಮೂಲಕ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ. ಹೀಗಾಗಿ, ಬಿಜೆಪಿ ಸೋಲಿಸಲು ನಾನು ರಾಜಸ್ಥಾನ, ಛತ್ತೀಸ್ಗಢ ಸೇರಿ‌ದಂತೆ ದೇಶಾದ್ಯಂತ ಹೋರಾಟ ನಡೆಸುತ್ತಿದ್ದೇನೆ ಎಂದರು.

ಇದೆ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತಾಡಿದ ನಟ ಪ್ರಕಾಶ್​ ರೈ, ಗೌರಿ ನಮ್ಮನ್ನು ಬಿಟ್ಟುಹೋಗಿ ಒಂದು ವರ್ಷ ಆಗಿದೆ. ಆಕೆಯನ್ನು ‌ಸಮಾಧಿ ಮಾಡಿಲ್ಲ, ಬದಲಿಗೆ ಬಿತ್ತಲಾಗಿದೆ. ಆಕೆ ಹೋದ ನಂತರ ಸಾಕಷ್ಟು ಧ್ವನಿಗಳು ಹುಟ್ಟಿಕೊಂಡಿವೆ. ಒಂದು ವರ್ಷದಿಂದ ಸಾಕಷ್ಟು ನೋವು, ತುಡಿತ ಅನುಭವಿಸಿದ್ದೇವೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.

ಇನ್ನು ಸಮಾವೇಶಕ್ಕೆ ದೇಶಾದ್ಯಂತ ಗಣ್ಯರು ಆಗಮಿಸಿದ್ದರು. ಪ್ರಗತಿಪರ ಸ್ವಾಮೀಜಿ ಅಗ್ನಿವೇಶ್, ಜೆಎನ್​ಯು ವಿದ್ಯಾರ್ಥಿ ನಾಯಕ ಉಮರ್​ ಖಾಲಿದ್​​, ಕನ್ನಯ್ಯ, ತೀಸ್ತಾ, ಸಾಹಿತ ಗಿರೀಶ್​ ಕಾರ್ನಾಡ್​, ಚಂಪಾ, ಕೆ.ಎಲ್​​ ಅಶೋಕ್​, ಕವಿತಾ ಲಂಕೇಶ್​​, ನೂರ್​ ಶ್ರೀಧರ್​​ ಜತೆಗೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ​​​
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ