ಬೆಂಗಳೂರು; ಆದಾಯ ತೆರಿಗೆ ಇಲಾಖೆ ಅಧಿಕಾರಿಯ ಹೆಸರಲ್ಲಿ ಜ್ಯುವೆಲರಿ, ಮೊಬೈಲ್ ಅಂಗಡಿಗಳಲ್ಲಿ ಚಿನ್ನಾಭರಣ ಮತ್ತು ಹಣ ಸುಲಿಗೆ ಮಾಡುತ್ತಿದ್ದ ಹೈಟೆಕ್ ಕಳ್ಳನನ್ನು ಬಾಗಲೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬೀದರ್ ಮೂಲದ ವಿಶಾಲ್ ಬಂಧಿತ ಆರೋಪಿ. ರಾಜ್ಯದಲ್ಲಿ 6 ಪ್ರಕರಣ ಸೇರಿ ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶದಲ್ಲೂ ಈತ ತನ್ನ ಕೈ ಚಳಕ ತೋರಿಸಿದ್ದಾನೆ.
ಐಟಿ ಆಧಿಕಾರಿ ಎಂದು ಜುವೆಲ್ಲರಿ ಶಾಪ್ ಮತ್ತು ಮೊಬೈಲ್ ಶಾಪ್ ಗಳಿಗೆ ಹೋಗಿ ಆಭರಣ ಎಗರಿಸುತ್ತಿದ್ದ ಈ ಅಸಾಮಿ. ಸಾಮಾನ್ಯ ಮೊಬೈಲ್ ಮತ್ತು ಜ್ಯುವೆಲ್ಲರಿ ಶಾಪ್ ಗಳೇ ಇವನ ಟಾರ್ಗೆಟ್. ಐಟಿ ಆಧಿಕಾರಿಯಂತೆ ಡ್ರೆಸ್ ಹಾಕ್ಕೊಂಡು ಶಾಪ್ಗಳಿಗೆ ಹೋಗುತ್ತಿದ್ದ. ಚಿನ್ನಾಭರಣ ಪರಿಶೀಲನೆ ಮಾಡಬೇಕು ಅಂತ ಹೇಳಿ ಹಣ, ಆಭರಣ ಎಗರಿಸುತ್ತಿದ್ದ. ಐಟಿ ನೆಪದಲ್ಲಿ ಮೊಬೈಲ್ ಅಂಗಡಿಗಳಿಗೆ ತೆರಳಿ ಅತ್ಯಾಧುನಿಕ ಮೊಬೈಲ್ಗಳನ್ನು ಕಳ್ಳತನ ಮಾಡುತ್ತಿದ್ದ. ಆರೋಪಿಯಿಂದ ಚಿನ್ನಾಭರಣ, ಮೊಬೈಲ್ ಗಳು ಸೇರಿ 12 ಲಕ್ಷ 80 ಸಾವಿರ ವಶಕ್ಕೆ ಪಡೆಯಲಾಗಿದೆ.
ಇದನ್ನು ಓದಿ: ವಿರೋಧ ಪಕ್ಷದ ನಾಯಕರಾಗಲು ಸಿದ್ದರಾಮಯ್ಯ ಅಯೋಗ್ಯ; ಸಚಿವ ಕೆ.ಎಸ್.ಈಶ್ವರಪ್ಪ
ಮೂಲತಃ ಬೀದರ್ ಜಿಲ್ಲೆಯ ವಿಶಾಪ್, ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರದಲ್ಲಿ ನೆಲೆಸಿದ್ದ. ದಾಳಿ ಮಾಡುವ ನಾಟಕವಾಡಿ ದುಬಾರಿ ಬೆಲೆಯ ಜುವೆಲ್ಲರಿ, ಮೊಬೈಲ್ ಗಳು ಖರೀದಿ ಮಾಡುತ್ತಿದ್ದ. ಆರ್ಟಿಜಿಎಸ್ ಮೂಲಕ ಹಣ ಪಾವತಿಸೋದಾಗಿ ಹೇಳಿ ಹೈಡ್ರಾಮ ಮಾಡುತ್ತಿದ್ದ. ಶಾಪ್ ಮಾಲೀಕರಿಗೆ ಥೇಟ್ ಬ್ಯಾಂಕ್ ಅಲರ್ಟ್ ಮೇಸೆಜ್ ತೋರಿಸಿ ಉಂಡೆನಾಮ ಹಾಕಿ ಎಸ್ಕೇಪ್ ಆಗುತ್ತಿದ್ದ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ