HOME » NEWS » State » JESCOM GAVE NEAR ONE LAKH RS ELECTRICITY BILL TO MECHANIC RH

ಗ್ಯಾರೇಜ್ ಮೆಕ್ಯಾನಿಕ್​ಗೆ ಕರೆಂಟ್ ಶಾಕ್; ಬರೋಬ್ಬರಿ 98,809 ರೂಪಾಯಿ ಬಿಲ್ ನೀಡಿದ ಜೆಸ್ಕಾಂ!

ಲಾಕ್ ಡೌನ್ ಕಾರಣಕ್ಕೆ ಎರಡು ತಿಂಗಳ ಬಿಲ್ ಕಟ್ಟಲಾಗಿರಲಿಲ್ಲ. ಅಲ್ಲದೆ ಎರಡೂ ತಿಂಗಳು ಗ್ಯಾರೇಜ್ ಮುಚ್ಚಲಾಗಿತ್ತು. ಹೀಗಾಗಿ ಮಿನಿಮಮ್ ಚಾರ್ಜಸ್ ಬರಬೇಕಿತ್ತು. ಆದರೆ ಒಂದು ಲಕ್ಷ ರೂಪಾಯಿ ಸನಿಹಕ್ಕೆ ಬಿಲ್ ಬಂದಿದೆ

news18-kannada
Updated:May 23, 2020, 2:37 PM IST
ಗ್ಯಾರೇಜ್ ಮೆಕ್ಯಾನಿಕ್​ಗೆ ಕರೆಂಟ್ ಶಾಕ್; ಬರೋಬ್ಬರಿ 98,809 ರೂಪಾಯಿ ಬಿಲ್ ನೀಡಿದ ಜೆಸ್ಕಾಂ!
ಸಾಂದರ್ಭಿಕ ಚಿತ್ರ
  • Share this:
ಕಲಬುರ್ಗಿ; ಕಲಬುರ್ಗಿಯ ಮೆಕ್ಯಾನಿಕ್​ ಒಬ್ಬರಿಗೆ ಜೆಸ್ಕಾಂ ಬಿಲ್ ಶಾಕ್ ನೀಡಿದೆ. ಲಾಕ್ ಡೌನ್ ಸಮಯದ ಎರಡು ತಿಂಗಳ ವಿದ್ಯುತ್ ಬಿಲ್ ಪಾವತಿಸಿರಲಿಲ್ಲ. ಇದೀಗ ಬಿಲ್ ಬಂದಿದ್ದು, ಅದನ್ನು ನೋಡಿ ಶಾಕ್ ಆಗುವಂತಾಗಿದೆ. ಬರೋಬ್ಬರಿ 98,809 ರೂಪಾಯಿ ಬಿಲ್ ನೀಡಿ ಮೆಕ್ಯಾನಿಕ್ ನನ್ನು ತಿಬ್ಬಿಬ್ಬಾಗುವಂತೆ ಮಾಡಿದೆ. 

ಕಲಬುರ್ಗಿ ನಗರ ಲಾಲ್ ಗೇರಿ ಕ್ರಾಸ್ ನಲ್ಲಿ ಸ್ಫೂರ್ತಿ ಬಜಾಜ್ ಬೈಕ್ ಸರ್ವಿಸಿಂಗ್ ಕೇಂದ್ರವಿದೆ. ಸಾಮಾನ್ಯವಾಗಿ 100 ರಿಂದ 200 ರೂಪಾಯಿ ವಿದ್ಯುತ್ ಬಿಲ್ ಬರುತ್ತಿತ್ತು. ಆದರೆ ಇದೀಗ ಜೆಸ್ಕಾಂ ಸಿಬ್ಬಂದಿ ಕೊಟ್ಟ ಬಿಲ್ ಬರೋಬ್ಬರಿ 98,809 ರೂಪಾಯಿಯಿದೆ. ವಿದ್ಯುತ್ ಬಿಲ್ ನೋಡಿ ಗ್ಯಾರೇಜ್ ಮಾಲೀಕ ಸುರೇಷ್ ಕುಮಾರ್  ಶಾಕ್ ಆಗಿದ್ದಾರೆ.

ಲಾಕ್ ಡೌನ್ ಕಾರಣಕ್ಕೆ ಎರಡು ತಿಂಗಳ ಬಿಲ್ ಕಟ್ಟಲಾಗಿರಲಿಲ್ಲ. ಅಲ್ಲದೆ ಎರಡೂ ತಿಂಗಳು ಗ್ಯಾರೇಜ್ ಮುಚ್ಚಲಾಗಿತ್ತು. ಹೀಗಾಗಿ ಮಿನಿಮಮ್ ಚಾರ್ಜಸ್ ಬರಬೇಕಿತ್ತು. ಆದರೆ ಒಂದು ಲಕ್ಷ ರೂಪಾಯಿ ಸನಿಹಕ್ಕೆ ಬಿಲ್ ಬಂದಿದೆ. ಅದನ್ನು ಸರಿಪಡಿಸಿಕೊಡುವಂತೆ ಜೆಸ್ಕಾಂ ಕಚೇರಿಗೆ ಮೆಕ್ಯಾನಿಕ್ ನಿತ್ಯ ಹೋಗಿ ಬರುತ್ತಿದ್ದಾರೆ. ಆದರೆ ಮೆಕ್ಯಾನಿಕ್ ಮನವಿಗೆ ಜೆಸ್ಕಾಂ ಸಿಬ್ಬಂದಿ ಸ್ಪಂದಿಸಿಲ್ಲ. ಜೆಸ್ಕಾಂ ಬೇಜವಾಬ್ದಾರಿತನಕ್ಕೆ ಸುರೇಶ್ ಆಕ್ರೋಶ ವ್ಯಕ್ತಪಿಸಿದ್ದಾರೆ. ತಪ್ಪು ಬಿಲ್ ನೀಡಿದವರೇ ಅದನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲಿಯವರೆಗೂ ವಿದ್ಯುತ್ ಬಿಲ್ ಪಾವತಿಸುವುದಿಲ್ಲ ಎಂದು ಹೇಳಿದ್ದಾರೆ.

ಜೆಸ್ಕಾಂ ನೀಡಿರುವ ವಿದ್ಯುತ್ ಬಿಲ್.


ಇದನ್ನು ಓದಿ: ಸಿಗರೇಟ್ ಲಂಚ​​ ಪ್ರಕರಣ: ಮಧ್ಯವರ್ತಿಗಳ ಮಾತು ಕೇಳಿ ಕೆಟ್ಟ ಪೊಲೀಸ್​​ ಅಧಿಕಾರಿಗಳು; ವಾಟ್ಸಪ್​​ ಕಾಲ್​​ ಮೂಲಕವೇ ನಡೆದಿತ್ತು ಕೋಟಿ ಕೋಟಿ ಡೀಲ್​​
First published: May 23, 2020, 2:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories