ಶಾಸಕಿ ಅನಿತಾ ಕುಮಾರಸ್ವಾಮಿಗೆ ಘೇರಾವ್​ ಹಾಕಿದ ಜೆಡಿಎಸ್​ ಕಾರ್ಯಕರ್ತರು

ಜೆಡಿಎಸ್​​ ರಾಜ್ಯಾಧ್ಯಕ್ಷ ಎಚ್​.ಕೆ.ಕುಮಾರಸ್ವಾಮಿ ರಾಜೀನಾಮೆ ವಿಚಾರವಾಗಿ, "ರಾಜೀನಾಮೆ ನೀಡುವ ವಿಚಾರ ನನಗೆ ಗೊತ್ತಿಲ್ಲ. ದೊಡ್ಡವರ ತೀರ್ಮಾನಕ್ಕೆ ಬದ್ಧವಾಗಿರಬೇಕು ಅಷ್ಟೇ," ಎಂದರು.

ಶಾಸಕಿ ಅನಿತಾ ಕುಮಾರಸ್ವಾಮಿ

ಶಾಸಕಿ ಅನಿತಾ ಕುಮಾರಸ್ವಾಮಿ

  • Share this:
ರಾಮನಗರ(ಡಿ.11): ಉಪಚುನಾವಣೆಯಲ್ಲಿ ಜೆಡಿಎಸ್​ಗೆ ಸೋಲಾಗಿದ್ದರ ಬಗ್ಗೆ ರಾಮನಗರ ಜೆಡಿಎಸ್​ ಶಾಸಕಿ ಅನಿತಾ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. "ಕ್ಷೇತ್ರದ ಜನರ ತೀರ್ಪಿಗೆ ನಾವು ತಲೆಬಾಗಬೇಕು. ಮಂಡ್ಯದಲ್ಲೂ ಜೆಡಿಎಸ್​ಗೆ ಸೋಲಾಗಿದೆ. ರಾಜಕೀಯ ಯಾವತ್ತು ನಿಂತ ನೀರಲ್ಲ. ಇವತ್ತು ಇದ್ದದ್ದು ನಾಳೆ ಬದಲಾವಣೆಯಾಗುತ್ತೆ. ಅಲ್ಲಿಯವರೆಗೂ ತಾಳ್ಮೆಯಿಂದ ಇರಬೇಕು. ಕ್ಷೇತ್ರದ ಜನ ಈಗಲೂ ನಮ್ಮ ಪರವಾಗಿದ್ದಾರೆ." ಎಂದರು.

ರಾಮನಗರದ ನಗರಸಭೆ ಬಳಿ ಮಾತನಾಡಿದ ಅವರು," ಚುನಾವಣೆಗಳು ಬರುತ್ತಿರುತ್ತವೆ.  ಜನ ಇಂಥವರನ್ನು ಸ್ವೀಕರಿಸಿದ್ದೇ ನನಗೆ ಆಶ್ಚರ್ಯ.  ಒಂದು ಪಕ್ಷದಿಂದ ಗೆದ್ದು, ಅಧಿಕಾರಕ್ಕೆ ಇನ್ನೊಂದು ಪಕ್ಷಕ್ಕೆ ಹೋದವರನ್ನು ಜನ ಗೆಲ್ಲಿಸಿದ್ದಾರೆ. ಮುಂದೆ ಜನರಿಗೆ ಮನವರಿಕೆಯಾಗಬೇಕು. ಈ ಚುನಾವಣೆಯಲ್ಲಿ ಯಾವ ಅಂಶ ಪ್ರಭಾವ ಬೀರಿದೆ ಎಂಬುದು ನನಗೆ ಗೊತ್ತಿಲ್ಲ," ಎಂದು ಹೇಳಿದರು.

ಹಾಸನದಲ್ಲಿ ಜೀತಪದ್ದತಿ ಇನ್ನೂ ಜೀವಂತ; ಮಕ್ಕಳು ಸೇರಿ 16 ಮಂದಿಯ ರಕ್ಷಣೆ

ಜೆಡಿಎಸ್​​ ರಾಜ್ಯಾಧ್ಯಕ್ಷ ಎಚ್​.ಕೆ.ಕುಮಾರಸ್ವಾಮಿ ರಾಜೀನಾಮೆ ವಿಚಾರವಾಗಿ, "ರಾಜೀನಾಮೆ ನೀಡುವ ವಿಚಾರ ನನಗೆ ಗೊತ್ತಿಲ್ಲ. ದೊಡ್ಡವರ ತೀರ್ಮಾನಕ್ಕೆ ಬದ್ಧವಾಗಿರಬೇಕು ಅಷ್ಟೇ," ಎಂದರು.

ಶಾಸಕಿ ಅನಿತಾ ಕುಮಾರಸ್ವಾಮಿಗೆ ಘೇರಾವ್

ಈ ವೇಳೆ, ಶಾಸಕಿ ಅನಿತಾ ಕುಮಾರಸ್ವಾಮಿಗೆ ಜೆಡಿಎಸ್​ ಕಾರ್ಯಕರ್ತರೇ ಘೇರಾವ್​ ಹಾಕಿದ ಘಟನೆ ನಡೆಯಿತು.  ಅಲ್ಲಿನ ಜನರು ಗೋಡೌನ್​ ಖಾಲಿ ಮಾಡಿಸುವಂತೆ  ಶಾಸಕಿ ಅನಿತಾ ಕುಮಾರಸ್ವಾಮಿಗೆ ಮನವಿ ಸಲ್ಲಿಸಲು ಬಂದಿದ್ದರು. ಈ ವೇಳೆ ಅನಿತಾ ಜನರ ಮನವಿಗೆ ಸ್ಪಂದಿಸಿಲ್ಲ ಎನ್ನಲಾಗಿದೆ.

ಹೀಗಾಗಿ ವಿನಾಯಕನಗರ ರಾಜು ಎಂಬುವರು ಗಲಾಟೆ ಮಾಡಿದ್ದಾರೆ. ಯಾವುದಕ್ಕೂ ಸ್ಪಂದಿಸದ ಕಾರಣ ಅನಿತಾಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ಧಾರೆ.  ಅನಿತಾಕುಮಾರಸ್ವಾಮಿ ಕಾಲಿಗೆ ಬಿದ್ದು, ಕಾರಿನ ಮುಂದೆ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

Note Ban: 2,000 ಮುಖಬೆಲೆಯ ನೋಟ್ ನಿಜಕ್ಕೂ​ ಬ್ಯಾನ್​ ಆಗಲಿದೆಯಾ?; ಇಲ್ಲಿದೆ ಉತ್ತರ

ರಾಮನಗರ ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್ ಹಾಗೂ ರಾಜು ನಡುವೆ ಗಲಾಟೆ ನಡೆದಿದೆ. ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಜೆಡಿಎಸ್ ಕಾರ್ಯಕರ್ತರು, ಮತದಾರರು ಹಾಗೂ ಪೊಲೀಸರ ನಡುವೆ ಗಲಾಟೆ ಉಂಟಾಗಿತ್ತು. ಗಲಾಟೆ ನೋಡಲಾಗದೇ  ಶಾಸಕಿ ಅನಿತಾಕುಮಾರಸ್ವಾಮಿ ಕಾರು ಹತ್ತಿ ಹೊರಟರು.
First published: